Slide
Slide
Slide
previous arrow
next arrow

ಮಲೆನಾಡಿನ ಮಳೆಗಾಲದ ಸುಂದರಿ ‘ಡೇರೆ’ ಮೆಕ್ಸಿಕೋದ ರಾಷ್ಟೀಯ ಹೂ

300x250 AD

ಸಿದ್ದಾಪುರ: ಮಳೆಗಾಲದಲ್ಲಿ ಮಲೆನಾಡಿನ ಮನೆಯಂಗಳದಲ್ಲಿ ಅರಳುವ ಹೂ ಡೇರೆ. ಇದನ್ನು ಮಳೆಗಾಲದ ಸುಂದರಿ ಎನ್ನುತ್ತಾರೆ. ಇದು ಮಳೆಗಾಲದ ನಾಲ್ಕಾರು ತಿಂಗಳು ಮಾತ್ರವೆ ಹೂವು ಬಿಡುತ್ತದೆ. ವಿದೇಶಿ ಮೂಲದ ಈ ಹೂವಿಗೆ ಮ್ಯಾಕ್ಸಿಕೋ ತವರು ಎನ್ನುತ್ತಾರೆ. ಆ ದೇಶದಲ್ಲಿ ಈ ಹೂವು ರಾಷ್ಟ್ರೀಯ ಪುಷ್ಪವಾಗಿದೆ. ಮಲೆನಾಡಿನ ಮಳೆಗಾಲದ ಸುಂದರಿ ಮ್ಯಾಕ್ಸಿಕೋದ ರಾಷ್ಟ್ರೀಯ ಪುಷ್ಪ ಎನ್ನುವುದು ಹೆಮ್ಮೆಯ ವಿಷಯವೇ ಸರಿ.
ಮಳೆಗಾಲ ಆರಂಭ ಆಗುತ್ತಿದ್ದಂತೆ ಮನೆಯ ಅಂಗಳದಲ್ಲಿ ವಿವಿಧ ಹೂವಿನ ಗಿಡಗಳ ಬೆಳೆಸುವುದು ಮಲೆನಾಡಿನಲ್ಲಿ ಸಾಮಾನ್ಯ. ಈ ಅವಧಿಯಲ್ಲಿ ವಿವಿಧ ಬಗೆಯ ಹೂ ಅರಳಿ ಕಂಗೊಳಿಸುತ್ತದೆ. ಅದರಲ್ಲಿ ಡೇರೆ ಹೂ ವಿಶೇಷವಾಗಿದೆ. ಆ ಕಾರಣಕ್ಕೆ ಇದನ್ನು ಮಳೆಗಾಲದ ಅತಿಥಿ ಎಂತಲೂ, ಮಳೆಗಾಲದ ಸುಂದರಿ ಎಂದು ಸಂಭೋದಿಸುತ್ತಾರೆ. ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳ ಸಮಯದಲ್ಲಿ ಹೆಚ್ಚಾಗಿ ಈ ಹೂಗಳು ಅರಳುತ್ತದೆ.
ಡೇರೆ ಹೂವಿನಲ್ಲಿ ಸುಮಾರು 60ಕ್ಕಿಂತ ಹೆಚ್ಚು ಬಗೆಯ ಜಾತಿ ಗಿಡಗಳಿವೆ. ಅಲ್ಲದೆ ವಿವಿಧ ಬಣ್ಣದ ಹಾಗೂ ಬೇರೆ- ಬೇರೆ ಗಾತ್ರದ ಹೂವನ್ನು ಕಾಣಬಹುದು. ಡಾಲೀಯಾ ಮೇರಿಯಾ ಕಾಂಪೋಸಿಟ್ ಪ್ರಭೇದಕ್ಕೆ ಸೇರಿರುವ ಈ ಹೂವಿನ ಗಿಡ ತೀರಾ ಮೃಧುವಾಗಿರುತ್ತದೆ. ಗಡ್ಡೆಯ ಮೂಲಕ ಇದರ ಸಸಿಯನ್ನು ಮಾಡಲಾಗುತ್ತದೆ. ಮುಖ್ಯವಾಗಿ ಮಳೆಗಾಲದ ಸಮಯದಲ್ಲಿ ನೆಲದಲ್ಲಿ ನೆಟ್ಟು ಬೆಳೆಸಲಾಗುತ್ತದೆ. ಆದರೆ ವಿವಿಧ ಚೀಲಗಳಲ್ಲಿ ಬೆಳೆಸುವ ರೂಢಿ ಹೆಚ್ಚಿದೆ. ಮನೆಯಂಗಳದಲ್ಲಿ ಅಥವಾ ಮನೆಯ ಎದುರು ಇಡುವುದರಿಂದ ಚೀಲಗಳಲ್ಲಿ ಡೇರೆ ಬೆಳೆಸುವುದು ಕಾಣಬಹುದಾಗಿದೆ.
ಮಳೆಗಾಲದ ಸಂದರ್ಭದಲ್ಲಿ ಕೆಲವು ಹೂವುಗಳನ್ನು ಮಾತ್ರ ಕಾಣಬಹುದು. ಸಹಜವಾಗಿ ಇತರ ಹೂವುಗಳು ಈ ಸಮಯದಲ್ಲಿ ಬಿಡುವುದಿಲ್ಲ. ಇದರಿಂದಾಗಿ ಡೇರೆ ಹೂವನ್ನು ದೇವರ ಪೂಜೆಗೆ ಹಾಗೂ ಮಹಿಳೆಯರು ಮುಡಿಯುವುದಕ್ಕು ಬಳಸುತ್ತಾರೆ. ಚಿಕ್ಕ ಸೇವಂತೆ ಆಕಾರದ ಹೂವಿನಿಂದ ಬಟ್ಟಲೂ ಆಕಾರದ ಹೂವನ್ನು ಡೇರೆಯಲ್ಲಿ ಕಾಣಬಹುದಾಗಿದೆ. ಮನೆಯಂಗಳದಲ್ಲಿ ಬೆಳೆಸುವುದರಿಂದ ಮನೆಯಂದವನ್ನು ಹೆಚ್ಚಿಸಲಿದೆ.

ಡೇರೆ ಮೇಳ: ಮಳೆಗಾಲದ ವಿಶೇಷ ಅತಿಥಿಯಂತಿರುವ ಡೇರೆ ಹೂವಿನ ಮೇಳವನ್ನು ಕಳೆದ ಅನೇಕ ವರ್ಷಗಳಿಂದ ಶಿರಸಿಯಲ್ಲಿ ಆಯೋಜನೆ ಮಾಡಲಾಗುತ್ತಿದೆ. ಈ ಮೇಳದಲ್ಲಿ ವಿವಿಧ ಡೇರೆ ಹೂವಿನ ಪ್ರದರ್ಶನ ಮತ್ತು ಮಾರಾಟ ನಡೆಯುತ್ತದೆ. ಹೂವಿನೊಂದಿಗೆ ಡೇರೆ ಗಿಡಗಳ ಮಾರಟವು ಜೋರಾಗಿ ನಡೆಯುತ್ತದೆ. ವರ್ಷದಲ್ಲಿ ವಿವಿಧ ಮೂರು ಸಂದರ್ಭದಲ್ಲಿ ಈ ‘ಡೇರೆ ಮೇಳ’ ನಡೆಯುತ್ತದೆ. ಇದರಿಂದ ವಿವಿಧ ಜಾತಿಯ ಗಿಡಗಳನ್ನು ಪರಿಚಯಿಸದಂತೆ ಆಗುತ್ತದೆ. ಲಕ್ಷಕ್ಕೂ ಅಧಿಕ ವಹಿವಾಟು ಡೇರೆ ಮೇಳದಲ್ಲಿ ಆಗುತ್ತಿದೆ.

300x250 AD

ಕೋಟ್…
ಗ್ರಾಮೀಣ ಭಾಗದಲ್ಲಿ ಸುಲಭದಲ್ಲಿ ಸಿಗುವ ಡೇರೆಯನ್ನು ಮಹಿಳೆಯರು ಮಳೆಗಾಲದಲ್ಲಿ ಮನೆಯಂಗಳದಲ್ಲಿ ಬೆಳೆಸುತ್ತಾರೆ. ನಾವು ಡೇರೆ ಮೇಳ ಸಂಘಟಿಸುವ ಮೂಲಕ ಅದರ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇವೆ. ನಮ್ಮ ಮೇಳದಲ್ಲಿ ಬೇರೆ ಊರುಗಳಿಂದಲೂ ಬಂದು ನೋಡಿ ಖರೀದಿಸಿ ಹೋಗುತ್ತಿದ್ದಾರೆ. ಸಾರ್ವಜನಿಕರ ಉತ್ತಮ ಸ್ಪಂದನೆ ಇದೆ. ವರ್ಷದಿಂದ ವರ್ಷಕ್ಕೆ ಹೆಚ್ಚು ಜನರು ಬರುತ್ತಿದ್ದಾರೆ.
• ಅಂಜನಾ ಭಟ್, ಶಿರಸಿ

Share This
300x250 AD
300x250 AD
300x250 AD
Back to top