Slide
Slide
Slide
previous arrow
next arrow

ಗೋವಾ ಮದ್ಯ ಸಾಗಾಟ; ಗೂಡ್ಸ್ ವಾಹನ ಸಮೇತ ಚಾಲಕ ವಶಕ್ಕೆ

300x250 AD

ಕಾರವಾರ: ಅಕ್ರಮವಾಗಿ ಗೋವಾ ಮದ್ಯ ಹಾಗೂ ಫೆನ್ನಿಯನ್ನು ಸಾಗಿಸುತ್ತಿದ್ದ ಗೂಡ್ಸ್ ಕ್ಯಾರಿಯರ್ ಅನ್ನು ತಾಲೂಕಿನ ಮಾಜಾಳಿ ತನಿಖಾ ಠಾಣೆಯ ಬಳಿ ಜಪ್ತಿಪಡಿಸಿಕೊಂಡಿರುವ ಅಬಕಾರಿ ಅಧಿಕಾರಿಗಳು, ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ಆದೇಶ ಹಾಗೂ ಜಿಲ್ಲಾ ಅಬಕಾರಿ ಉಪ ಆಯುಕ್ತರ ನಿರ್ದೇಶನ ಹಾಗೂ ಮಾರ್ಗದರ್ಶನದ ಮೇರೆಗೆ ತಾಲೂಕಿನ ಮಾಜಾಳಿ ಅಬಕಾರಿ ತನಿಖಾ ಠಾಣೆಯಲ್ಲಿ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ತಂಡ, ಉಪವಿಭಾಗದ ನಿರೀಕ್ಷಕರು, ಕಾರವಾರ ವಲಯ ಹಾಗೂ ಅಬಕಾರಿ ತನಿಖಾ ಠಾಣೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಂಟಿಯಾಗಿ ತಪಾಸಣೆ ಕೈಗೊಂಡಿದ್ದರು.
ಈ ವೇಳೆ ಗೂಡ್ಸ್ ಕ್ಯಾರಿಯರ್ ಒಂದನ್ನು ತಡೆದು ಪರಿಶೀಲನೆ ನಡೆಸಿದಾಗ 474 ಲೀ. ಗೋವಾ ಮದ್ಯ ಹಾಗೂ 18 ಲೀ. ಗೋವಾ ಫೆನ್ನಿಯನ್ನು ಸ್ಕ್ರ‍್ಯಾಪ್ ಖಾಲಿ ಬಾಟಲಿಗಳೂಂದಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ. ಈ ಮದ್ಯಗಳ ಅಂದಾಜು ಮೌಲ್ಯ 6.34 ಲಕ್ಷ, ಗೋವಾ ಫೆನ್ನಿ ಅಂದಾಜು ಮೌಲ್ಯ 7,200 ಹಾಗೂ ವಾಹನದ ಮೌಲ್ಯ 10 ಲಕ್ಷ, ಸ್ಕ್ರ‍್ಯಾಪ್ ಬಾಟಲಿಗಳ ಮೌಲ್ಯ 44 ಸಾವಿರ, ಒಟ್ಟು ಅಂದಾಜು ಮೌಲ್ಯ 16.86 ಲಕ್ಷವಾಗಿದೆ. ಗೂಡ್ಸ್ ಕ್ಯಾರಿಯರ್ ಚಾಲಕ, ತೆಲಂಗಾಣ ರಾಜ್ಯದ ಬನುಪಟಿ ಜಗನ್ ಮೋಹನ್ ಎಂಬುವವನ್ನು ದಸ್ತಗಿರಿ ಮಾಡಲಾಗಿದ್ದು, ವಾಹನ ಮಾಲೀಕನ ಪತ್ತೆ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಅಬಕಾರಿ ನಿರೀಕ್ಷಕ ಬಸವರಾಜ, ಉಪ ನಿರೀಕ್ಷಕ ಎಂ.ಎಂ.ನಾಯ್ಕ, ಸಿಬ್ಬಂದಿ ಎನ್.ಜಿ.ಜೊಗಳೇಕರ, ಸುರೇಶ ಹಾರೂಗೊಪ್ಪ, ರಂಜನಾ ನಾಯ್ಕ, ನಾಗರಾಜ ಹಾಗೂ ಎನ್.ಎನ್.ಖಾನ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top