ಸಿದ್ದಾಪುರ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಮುಂದಿನ ಅವಧಿಗೆ ನಿರ್ದೇಶಕರಾಗಿ ಟಿ.ಎಂ.ಎಸ್ ಅಧ್ಯಕ್ಷರೂ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಆರ್.ಎಂ.ಹೆಗಡೆ ಬಾಳೇಸರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ದಿ.ಷಣ್ಮುಖ ಬಿ.ಗೌಡರ್ ಅವರು ನಿರ್ದೇಶಕರಾಗಿದ್ದರು. ಅವರ ನಿಧನದಿಂದ ತೆರವಾಗಿದ್ದ ನಿರ್ದೇಶಕ ಸ್ಥಾನಕ್ಕೆ ಬೇರೆಯವರನ್ನು ನಾಮ ನಿರ್ದೇಶನ ಮಾಡಿಕೊಳ್ಳಲಾಗಿತ್ತು. ಈಗ ನಡೆದ ಚುನಾವಣೆಯಲ್ಲಿ ಆರ್.ಎಂ.ಹೆಗಡೆ ಬಾಳೇಸರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಳಿದಂತೆ ಮಹಾಮಂಡಳದ ಒಟ್ಟು ಎಂಟು ಸ್ಥಾನಕ್ಕೆ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಐದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆರ್.ಎಂ.ಹೆಗಡೆ ಬಾಳೇಸರ ಅವರ ಆಯ್ಕೆಗೆ ತಾಲೂಕಿನ ಹಲವು ಸಹಕಾರಿಗಳು ಅಭಿನಂದನೆ ಸಲ್ಲಿಸಿ ಹರ್ಷ ವ್ಯೆಕ್ತಪಡಿಸಿದ್ದಾರೆ.
ರಾಜ್ಯ ಸಹಕಾರ ಮಹಾಮಂಡಳಕ್ಕೆ ಆರ್.ಎಂ.ಹೆಗಡೆ ಅವಿರೋಧ ಆಯ್ಕೆ
