ಭಟ್ಕಳ: ಕಳೆದ 46 ವರ್ಷದ ಹಿಂದೆ ಹೊಡೆದಾಟ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸುವಲ್ಲಿ ಇದೀಗ ಯಶಸ್ವಿಯಾಗಿದ್ದಾರೆ.
ತಾಲೂಕಿನ ಬೆಳಕೆ ನಿವಾಸಿ ಈಶ್ವರ ನಾಯ್ಕ ಬಂಧಿತ ಆರೋಪಿ. 1975ರಲ್ಲಿ ನಡೆದ ಹೊಡೆದಾಟ ಪ್ರಕರಣದಲ್ಲಿ ಒಟ್ಟು 11 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪೈಕಿ 10 ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಲಯವು ದೋಷಿಗಳೆಂದು ತೀರ್ಪು ನೀಡಿತ್ತು.
ಇದರಲ್ಲಿಯ ಆರೋಪಿ ಸಂಖ್ಯೆ 8 ನೇಯವರಾಗಿದ್ದ ಈಶ್ವರ ನಾಯ್ಕ, ವಿಚಾರಣಾ ಸಮಯದಿಂದ ತಲೆಮರಿಸಿಕೊಂಡಿದ್ದ. ಆದರೆ ಈತ ಸೊಸೈಟಿಯೊಂದರಲ್ಲಿ ಲೋನ್ ಪಡೆದಿರುವ ಆಧಾರದ ಮೇಲೆ ಈತನ ಮಾಹಿತಿ ಕಲೆ ಹಾಕಿದ್ದ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಹೊಡೆದಾಟ ಪ್ರಕರಣ: 46 ವರ್ಷದ ಬಳಿಕ ಆರೋಪಿ ಬಂಧನ
