ಮುಂಡಗೋಡ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ತಾಲೂಕಿನ ಎಲ್ಲಾ ಸರ್ಕಾರಿ ಇಲಾಖೆಯ ಸಂಯುಕ್ತಾಶ್ರದಲ್ಲಿ ಸೆ.30ರ ತನಕ ಪಟ್ಟಣವು ಸೇರಿದಂತೆ ಗ್ರಾ.ಪಂ ಮಟ್ಟದಲ್ಲಿ ನಡೆಯಲಿರುವ ಪೋಷಣ ಅಭಿಯಾನ ಹಾಗೂ ಪೋಷಣಾ ಮಾಸಾಚರಣೆ ವಾಹನಕ್ಕೆ ಪಟ್ಟಣದ ಸರಕಾರಿ ಶಾಸಕರ ಮಾದರಿ ಶಾಲೆಯಲ್ಲಿ ಸಚಿವ ಶಿವರಾಮ ಹೆಬ್ಬಾರ್ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೆ ಜಯಸುಧಾ ಭೋವಿವಡ್ಡರ, ಬಿಜೆಪಿ ಧುರಿಣ ಎಲ್.ಟಿ.ಪಾಟೀಲ, ಧುರಿಣ ರವಿಗೌಡ ಪಾಟೀಲ, ಮಂಡಲ ಅಧ್ಯಕ್ಷ ನಾಗಭೂಷಣ ಹಾವಣಗಿ, ಧುರೀಣ ಉಮೇಶ ಬಿಜಾಪುರ, ಇಮ್ತಿಯಾಜ ನಾಕೆವಾಲೆ, ಉಪಾಧ್ಯಕ್ಷ ಶ್ರೀಕಾಂತ ಸಾನು, ದೇವು ಪಾಟೀಲ, ಸುವರ್ಣಾ ಕೊಟಗೋಣಸಿ, ನಾಗರಾಜ ಗುಬ್ಬಕ್ಕನವರ, ಪ್ರಭಾರ ಸಿಡಿಪಿಒ ದೀಪಾ ಬಂಗೇರಾ ಸೇರಿದಂತೆ ಮುಂತಾದವರು ಇದ್ದರು.
ಪೋಷಣಾ ಮಾಸಾಚರಣಾ ವಾಹನಕ್ಕೆ ಸಚಿವ ಹೆಬ್ಬಾರ್ ಚಾಲನೆ
