• Slide
  Slide
  Slide
  previous arrow
  next arrow
 • ರೈತರ ಹಿತ ಕಾಯಲು ಟಿ.ಎಸ್.ಎಸ್ ಬದ್ಧ: ರಾಮಕೃಷ್ಣ ಹೆಗಡೆ

  300x250 AD

  ಯಲ್ಲಾಪುರ: ಸದಸ್ಯರ, ರೈತರ ಹಿತ ಕಾಯಲು ಸಂಸ್ಥೆ ಬದ್ಧವಾಗಿದೆ ಎಂದು ಟಿ.ಎಸ್.ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಹೇಳಿದರು.

   ಅವರು ಪಟ್ಟಣದ ಟಿ.ಎಸ್.ಎಸ್ ಶಾಖೆಯಲ್ಲಿ ಹಮ್ಮಿಕೊಂಡಿದ್ದ ಸಹಕಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಸದಸ್ಯರಿಗೆ, ರೈತರಿಗೆ ದೋಟಿಯ ಮೂಲಕ ಔಷಧ ಸಿಂಪಡಣೆ, ಕೊನೆ ಕೊಯ್ಲು, ಅಡಕೆ ಸುಲಿಯುವ ಯಂತ್ರ, ವೈದ್ಯಕೀಯ ಸೌಲಭ್ಯ, ವಿಮೆ, ಧರ್ಮಾರ್ಥ ನಿಧಿ ಮುಂತಾದ ಅನೇಕ ಸೌಲಭ್ಯಗಳನ್ನು ನೀಡಲಾಗಿದೆ. ಸಂಸ್ಥೆ ಶತಮಾನದ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ಸದಸ್ಯರ ಅನುಕೂಲಕ್ಕಾಗಿ ಇನ್ನಷ್ಟು ಉತ್ತಮ ಯೋಜನೆಗಳನ್ನು ತರುವ ಉದ್ದೇಶ ಹೊಂದಿದ್ದೇವೆ ಎಂದರು.

  ಸಂಸ್ಥೆಯಲ್ಲಿ ನಿರಂತರವಾಗಿ ವ್ಯವಹಾರ ನಡೆಸಿಕೊಂಡು ಬಂದ ಪರಮೇಶ್ವರ ಹೆಗಡೆ ಕೊಂಕಣಕೊಪ್ಪ, ಚಂದ್ರಶೇಖರ ಗಾಂವ್ಕರ ಶಳಬೈಲ್, ತಿಮ್ಮಪ್ಪ ಶೇಟ್ ಉಪಳೇಶ್ವರ, ನಾರಾಯಣ ಭಟ್ಟ ಅಚವೆ, ಗಣಪತಿ ಭಟ್ಟ ಹಳವಳ್ಳಿ, ರಾಮಚಂದ್ರ ಹೆಗಡೆ ದೊಡ್ಡನಮನೆ, ಪರಮೇಶ್ವರ ಗೌಡ ದೋಣಗಾರ, ಮಾದೇವ ಕಾಣಕೋಣಕರ್, ರಾಮಚಂದ್ರ ಹೆಗಡೆ,  ನಾಗೇಶ ಹೆಗಡೆ ಪಣತಗೇರಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯಲ್ಲಿ ಹೆಚ್ಚಿನ ಅಡಕೆ ವಿಕ್ರಿ ನಡೆಸಿದ ಸಹಕಾರಿ ಸಂಘಗಳಿಗೆ ಪ್ರಶಂಸಾ ಪತ್ರ ವಿತರಿಸಲಾಯಿತು.

  300x250 AD

  ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ, ನಿರ್ದೇಶಕರಾದ ಕೃಷ್ಣ ಹೆಗಡೆ ಹೀಪನಳ್ಳಿ, ಅಣ್ಣಪ್ಪ ಗೌಡ, ಶಾರದಾ ಹೆಗಡೆ, ಸುಬ್ರಾಯ ಭಟ್ಟ ಸಾಲ್ಕಣಿ,ರಾಮಕೃಷ್ಣ ಹೆಗಡೆ ಅಳಗೋಡ, ಬಾಲಚಂದ್ರ ಭಟ್ಟ, ಶಶಾಂಕ ಹೆಗಡೆ ಶೀಗೇಹಳ್ಳಿ, ನಾರಾಯಣ ನಾಯ್ಕ ಮೆಣಸೆ, ಸಿದ್ದಾಪುರ ಶಾಖೆಯ ಶ್ರೀಧರ ಹೆಗಡೆ, ಮಂಜುನಾಥ ಹೆಗಡೆ, ಯಲ್ಲಾಪುರ ಶಾಖೆ ಸಲಹಾ ಸಮಿತಿ ಅಧ್ಯಕ್ಷ ನರಸಿಂಹ ಭಟ್ಟ ಗುಂಡ್ಕಲ್, ಸದಸ್ಯರಾದ ಸುಧಾಕರ ದೇಸಾಯಿ, ಶ್ರೀಧರ ಕೋಟೆಮನೆ, ಕೆ.ಜಿ.ಬೋಡೆ, ಸಂತೋಷ ಭಟ್ಟ ಹಳವಳ್ಳಿ, ವ್ಯವಸ್ಥಾಪಕ ವಸಂತ ಗೌಡ ಇತರರಿದ್ದರು. ಪ್ರಜ್ಞಾ ಭಟ್ಟ ಸಂಗಡಿಗರು ಪ್ರಾರ್ಥಿಸಿದರು. ಗಣೇಶ ಹೆಗಡೆ ನಿರ್ವಹಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top