Slide
Slide
Slide
previous arrow
next arrow

ದೆಹಲಿಯ ರಾಜಪಥ ಇನ್ನು ಮುಂದೆ ಕರ್ತವ್ಯಪಥ: ಗುಲಾಮಿ ಮನಸ್ಥಿತಿಗೆ ಮುಕ್ತಿ

300x250 AD

ನವದೆಹಲಿ: ದೆಹಲಿಯ ಹೃದಯಭಾಗದಲ್ಲಿರುವ ನವೀಕರಿಸಿದ ರಾಜ್‌ಪಥ್ ಮತ್ತು ಸೆಂಟ್ರಲ್ ವಿಸ್ಟಾ ಲಾನ್‌ಗಳು ಶೀಘ್ರದಲ್ಲೇ ಸಾರ್ವಜನಿಕರಿಗೆ ಮುಕ್ತವಾಗಲಿದ್ದು, ಇದು ಹೊಸ ರೂಪಕ್ಕೆ ಅನುಗುಣವಾಗಿ ಹೊಸ ಹೆಸರನ್ನು ಪಡೆಯಲಿದೆ.

ಬ್ರಿಟಿಷರ ಗುಲಾಮತನದ ಕಾಲವನ್ನು ನೆನಪಿಸುವ ಹೆಸರುಗಳು ಮತ್ತು ಚಿಹ್ನೆಗಳನ್ನು ಬದಲಾಯಿಸುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬದ್ಧತೆಗೆ ಅನುಗುಣವಾಗಿ ಇಡೀ ಪ್ರದೇಶವನ್ನು ಇನ್ನು ಮುಂದೆ ರಾಜಪಥದ ಬದಲು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಲಾಗಿದೆ.

ನೇತಾಜಿ ಪ್ರತಿಮೆಯಿಂದ ರಾಷ್ಟ್ರಪತಿ ಭವನದವರೆಗಿನ ಸಂಪೂರ್ಣ ರಸ್ತೆ ಮತ್ತು ಪ್ರದೇಶವನ್ನು ಕರ್ತವ್ಯ ಪಥ ಎಂದು ಕರೆಯಲಾಗುತ್ತದೆ. ಭಾರತವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸುವ 2047 ರ ವೇಳೆಗೆ ಮಹಾನ್‌ ಭಾರತವನ್ನು ಸೃಷ್ಟಿಸುವ ಕರ್ತವ್ಯಕ್ಕೆ ಪ್ರಧಾನಮಂತ್ರಿ ಒತ್ತು ನೀಡುವುದನ್ನು ಈ ಹೆಸರು ನೆನಪಿಸುತ್ತದೆ.

ಆಗಸ್ಟ್ 15 ರಂದು ಕೆಂಪು ಕೋಟೆಯ ಆವರಣದಿಂದ ಮಾಡಿದ ಭಾಷಣದಲ್ಲಿ, ವಸಾಹತುಶಾಹಿ ಮನಸ್ಥಿತಿಗೆ ಸಂಬಂಧಿಸಿದ ಚಿಹ್ನೆಗಳ ನಿರ್ಮೂಲನೆಗೆ ಪ್ರಧಾನಿ ಮೋದಿ ಒತ್ತು ನೀಡಿದ್ದರು. ಅದರಂತೆ, ಕಳೆದ ವಾರ ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ INS ವಿಕ್ರಾಂತ್ ಉಡಾವಣೆ ಸಂದರ್ಭದಲ್ಲಿ ನೌಕಾಪಡೆಯು ತನ್ನ ಧ್ವಜವನ್ನು ಬದಲಾಯಿಸಿತು.

300x250 AD

ಈ ಹಿಂದೆ ಪ್ರಧಾನಿ ನಿವಾಸವಿರುವ ರಸ್ತೆಯ ಹೆಸರನ್ನು ರೇಸ್ ಕೋರ್ಸ್ ರಸ್ತೆಯಿಂದ ಲೋಕ ಕಲ್ಯಾಣ ಮಾರ್ಗ ಎಂದು ಬದಲಾಯಿಸಲಾಗಿತ್ತು.

ಕೃಪೆ:http://news13.in

Share This
300x250 AD
300x250 AD
300x250 AD
Back to top