Slide
Slide
Slide
previous arrow
next arrow

ಲಯನ್ಸನಿಂದ ಶಿಕ್ಷಕರು,ಮಕ್ಕಳಿಗಾಗಿ ‘ಕ್ವೆಸ್ಟ್ ಕಾರ್ಯಕ್ರಮ’

300x250 AD

ಹೊನ್ನಾವರ : ಇಂದಿನ ಮಕ್ಕಳೇ ಮುಂದಿನ ಭವಿಷ್ಯದ ನಾಗರಿಕರು. ಅವರು ಗುರುಹಿರಿಯರನ್ನು ಗೌರವಿಸಿ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಸರಿಯಾದ ಸಮಯಕ್ಕೆ ಯೋಗ್ಯ ನಿರ್ಧಾರ ಕೈಗೊಂಡು ಸನ್ಮಾರ್ಗದಲ್ಲಿ ನಡೆಯುತ್ತ ಮುಂದಿನ ಜವಾಬ್ದಾರಿ ನಾಗರಿಕರನ್ನಾಗಿ ಮಾಡಿ ಅವರು ಉತ್ತಮ ಜೀವನ ನಡೆಸುವಂತೆ ಮಾಡುವುದೇ ಲಯನ್ಸ್ ಕ್ವೆಸ್ಟ ಕಾರ್ಯಕ್ರಮದ ಉದ್ದೇಶ.
ಲಯನ್ಸ್ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯ ಹಲವಾರು ಸೇವಾ ಕಾರ್ಯಕ್ರಮಗಳು ಮುಖ್ಯವಾಗಿ ಯುವ ಜನತೆಗಾಗಿ ಜಗತ್ತಿನಾದ್ಯಂತ ಹಮ್ಮಿಕೊಂಡಿರುವ “ಲಯನ್ಸ್ ಕ್ವೆಸ್ಟ” ಕಾರ್ಯಕ್ರಮದ 2 ದಿನಗಳ ಶಿಕ್ಷಕರ ತರಬೇತಿ ಶಿಬಿರವು ಲಯನ್ಸ್ ಜಿಲ್ಲೆ 317 ಬಿಯ ಸಹಯೋಗ ಹಾಗೂ ಹೊನ್ನಾವರ ಲಯನ್ಸ್ ಕ್ಲಬ್ಬಿನ ಆತಿಥ್ಯದಲ್ಲಿ ಸೆಪ್ಟೆಂಬರ 2 ಹಾಗೂ 3ರಂದು ಲಯನ್ಸ್ ವಿದ್ಯಾಭವನ ಹೊನ್ನಾವರದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. 4ಶಾಲೆಯಿಂದ 990ವಿದ್ಯಾರ್ಥಿಗಳನ್ನು ಕ್ವೆಸ್ಟ ಕಲಿಯುವುದಕ್ಕಾಗಿ ಆರಿಸಿಕೊಳ್ಳಲಾಗಿದ್ದು, ಇದು ವಿದ್ಯಾರ್ಥಿಗಳ ನೈತಿಕ ಗುಣಮಟ್ಟವನ್ನು ಸುಧಾರಿಸಲು ಸಹಕಾರಿಯಾಗಿದೆ. ಅಂದಾಜು 3 ಲಕ್ಷ ರೂಪಾಯಿಗಳನ್ನು ಈ ಕ್ಲಬ್ಬಿನವರು ಕಾರ್ಯಕ್ರಮಕ್ಕೆ ವಿನಿಯೋಗ ಮಾಡಿದ್ದಾರೆ.
2ದಿನಗಳ ಈ ಶಿಕ್ಷಕರ ತರಬೇತಿ ಶಿಬಿರವು ಬೆಳಿಗ್ಗೆ 8.30 ರಿಂದ ಸಾಯಂಕಾಲ 5 ಗಂಟೆಯ ವರೆಗೆ ನಡೆದಿದ್ದು, ಮಾರ್ ಥೋಮಾ ಆಂಗ್ಲ ಮಾಧ್ಯಮ ಶಾಲೆಯಿಂದ 18 ಶಿಕ್ಷಕರು, ಮಾರ್ ಥೋಮಾ ಸೆಂಟ್ರಲ್ ಶಾಲೆಯಿಂದ 5 ಶಿಕ್ಷಕರು, ನ್ಯೂ ಇಂಗ್ಲೀಷ ಆಂಗ್ಲ ಮಾಧ್ಯಮ ಶಾಲೆಯಿಂದ 6 ಶಿಕ್ಷಕರು, ಎಂ.ಪಿ.ಇ ಸೊಸೈಟಿಯ ಸೆಂಟ್ರಲ್ ಶಾಲೆಯಿಂದ 4 ಶಿಕ್ಷಕರು ಒಟ್ಟೂ 33 ಶಿಕ್ಷಕರು ಭಾಗವಹಿಸಿದ್ದರು.
ಈ ತರಬೇತಿ ಕಾರ್ಯಾಗಾರದ ಉದ್ಘಾಟನೆಯನ್ನು ಲಯನ್ಸ್ ಜಿಲ್ಲಾ ಗವರ್ನರ ಒಎಈ ಗದಗದ ಲಯನ್ ಸುಗಲಾರವರು ನಿರ್ವಹಿಸಿದ್ದು, ಸಮಾರೋಪ ಸಮಾರಂಭದಲ್ಲಿ ಉಪ ಜಿಲ್ಲಾ ಗವರ್ನರರಾದ Pಒಎಈ ಲಾಯನ್ ಗೋವಾದ ಅರ್ಲ ಬ್ರಿಟೋ ಹಾಗೂ ಒಎಈ ಲಾಯನ್ ಹುಬ್ಬಳ್ಳಿಯ ಮನೋಜ ಮಾಣಿಕ, ಜಿಲ್ಲಾ ಕ್ವೆಸ್ಟ ಮೆಂಟರ ಹಾಗೂ ಮಾಜಿ ಜಿಲ್ಲಾ ಗವರ್ನರ ಒಎಈ ಲಾಯನ್ ಗೋವಾದ ಸತೇಂದ್ರನ್ ನಾಯರ ವಲಯ ಚೇರಮನ್ನರಾದ ಒಎಈ ಲಯನ್ ಶಿರಸಿಯ ಜ್ಯೋತಿ ಭಟ್ಟ ಇವರು ಆಗಮಿಸಿದ್ದರು. ಮುಖ್ಯ ತರಬೇತಿದಾರರಾಗಿ ಮಾಜಿ ಜಿಲ್ಲಾ ಗವರ್ನರ ಮಂಗಳೂರಿನ ಲಯನ್ ಕವಿತಾ ಶಾಸ್ತ್ರಿಯವರು ಆಗಮಿಸಿ ಶಿಕ್ಷಕರಿಗೆ ಉತ್ತಮ ತರಬೇತಿಯನ್ನು ಅಚ್ಚುಕಟ್ಟಾಗಿ ತುಂಬಾ ಮುತುವರ್ಜಿವಹಿಸಿ ನೀಡಿದರು.
ಈ ಶಿಕ್ಷಕರ ತರಬೇತಿ ಕಾರ್ಯಾಗಾರಕ್ಕೆ ಆಗಮಿಸಿದ ಎಲ್ಲಾ ಅತಿಥಿಗಳಿಗೆ ಹಾಗೂ ಲಾಯನ್ಸ ಜಿಲ್ಲಾ 317ಬಿಯ ಈ ತರಬೇತಿ ಶಿಬಿರವನ್ನು ಉತ್ತಮ ರೀತಿಯಲ್ಲಿ ಆಯೋಜಿಸಿ ಸತ್ಕರಿಸಿದ ಜಿಲ್ಲಾ ಕ್ವೆಸ್ಟ ಕೋಆರ್ಡಿನೇಟರ್ ಒಎಈ ಲಯನ್ ಶಿರಸಿಯ ರಮಾ ಪಟವರ್ಧನ್, ಜಿಲ್ಲಾ ಕ್ವೆಸ್ಟ ಮೆಂಬರ ಒಎಈ ಲಯನ್ ಡಾ.ಎ.ವಿ.ಶಾನಭಾಗ, ಲಾಯನ್ಸ ಕ್ಲಬ್ ಹೊನ್ನಾವರ ಅಧ್ಯಕ್ಷ ಒಎಈ ಲಯನ್ ಕೆ.ಸಿ.ವರ್ಗಿಸ್, ಕರ‍್ಯದರ್ಶಿ ಒಎಈ ಲಯನ್ ರಾಜೇಶ , ಖಜಾಂಚಿ ಲಾಯನ್ ರೋಶನ್ ಶೇಟ ಅಲ್ಲದೇ ಕ್ಲಬ್ಬಿನ ಕ್ವಸ್ಟ ಸದಸ್ಯರು ಹಾಗೂ ಲಯನ್ಸ ಸದಸ್ಯರಿಗೆ ಧನ್ಯವಾದಗಳನ್ನು ಲಯನ್ಸ ಕ್ಲಬ್ ಹೊನ್ನಾವರ ಸಮರ್ಪಿಸಿದೆ.

300x250 AD
Share This
300x250 AD
300x250 AD
300x250 AD
Back to top