Slide
Slide
Slide
previous arrow
next arrow

ಶಿಕ್ಷಕರ ದಿನಾಚರಣೆಯಂದೆ ಗುರುವನ್ನ ಕಳೆದುಕೊಂಡಿದ್ದೇವೆ: ಮಾಧವ ನಾಯಕ

300x250 AD

ಕಾರವಾರ: ಮಾಜಿ ಸಚಿವ, ವಿದ್ಯಾ ದಾನಿ ಪ್ರಭಾಕರ್ ರಾಣೆ (81) ಅವರ ನಿಧನಕ್ಕೆ ಜನಶಕ್ತಿ ವೇದಿಕೆ ಹಾಗೂ ಕಾರವಾರ ತಾಲೂಕು ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್ ಅಧ್ಯಕ್ಷ ಮಾಧವ ನಾಯಕ ಸಂತಾಪ ಸೂಚಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ದಿನಕರ ದೇಸಾಯಿಯವರನ್ನು ಹೊರತುಪಡಿಸಿದರೆ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದವರಲ್ಲಿ ಪ್ರಭಾಕರ್ ರಾಣೆಯವರು ಮುಂಚೂಣಿ ಸ್ಥಾನದಲ್ಲಿರುತ್ತಾರೆ.ಇವರಿಗೆ ಶೈಕ್ಷಣಿಕ ಭೀಷ್ಮ ಎಂದರೆ ತಪ್ಪಾಗಲಾರದು, ಜಿಲ್ಲೆಯಲ್ಲಿ ಶಿಕ್ಷಣ ವೃಕ್ಷವನ್ನ ನೆಟ್ಟು ಬೆಳೆಸಿದ ಹಿರಿಮೆ ಇವರದ್ದು. ಇಂದಿನ ದಿನಗಳಲ್ಲಿ ಶಿಕ್ಷಣ ಎನ್ನುವುದು ವ್ಯಾಪಾರ, ಹಣ ಗಳಿಕೆಯ ದಾರಿಯಾದಂತಾಗಿದೆ. ಆದರೆ, ರಾಣೆಯವರು ಹಣ ಮಾಡುವುದಾಗಲಿ ಅಥವಾ ಬೇರಾವುದೇ ದುರುದ್ದೇಶವಿಲ್ಲದೆ ಬಡ ಮಕ್ಕಳಿಗಾಗಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣದ ಧಾರೆ ಎರೆದಿದ್ದರು ಎಂದು ಸ್ಮರಿಸಿದ್ದಾರೆ.

ಈಗಿನ ರಾಜಕಾರಣಿಗಳಿಗೆ ಮಾದರಿಯಾಗಬಲ್ಲ ರಾಜಕಾರಣಿಯಾಗಿ ರಾಣೆಯವರು ಗುರುತಿಸಿಕೊಂಡಿದ್ದರು. ಮೂರು ಬಾರಿ ಕಾರವಾರ- ಜೊಯಿಡಾ ಕ್ಷೇತ್ರದಲ್ಲಿ ಶಾಸಕರಾಗಿದ್ದ ಅವರ ಜನಪ್ರಿಯತೆ ಮತ್ತು ಶಿಕ್ಷಣ ಕ್ಷೇತ್ರದ ಮೇಲಿನ ಪ್ರೀತಿ ಹಾಗೂ ಕೊಡುಗೆಯನ್ನ ಗಮನಿಸಿ ಅವರಿಗೆ ಗ್ರಂಥಾಲಯ ಮತ್ತು ವಯಸ್ಕರ ಶಿಕ್ಷಣ ಖಾತೆಯನ್ನ ಸಚಿವ ಸ್ಥಾನ ಅಂದಿನ ಸರ್ಕಾರ ವಹಿಸಿ ಕೊಟ್ಟಿತ್ತು.ಆ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಯಲ್ಲಿ ಗ್ರಂಥಾಲಯ ಇರಬೇಕು ಎಂದು ಕಾರ್ಯರೂಪಕ್ಕೆ ತಂದು ದೇಶಕ್ಕೆ ಮಾದರಿ ಯಾದವರು, ಕಾರವಾರ ಕ್ಷೇತ್ರದ ಜನಪ್ರಿಯ ಶಾಸಕರಾಗಿದ್ದ ವಸಂತ ಅಸ್ನೋಟಿಕರ್ ಅವರಿಗೆ ಗುರುಗಳಾಗಿ ಇವರು ದಾರಿ ತೋರಿದ್ದರು ಎಂದು ನೆನೆದಿದ್ದಾರೆ.

ಇನ್ನು ಪ್ರಮುಖವಾಗಿ ಕಾರವಾರದಲ್ಲಿ ಸೀಬರ್ಡ್ ನಿರಾಶ್ರಿತರ ಪರವಾಗಿ, ಅವರಿಗೆ ಸಿಗಬೇಕಾದ ಪರಿಹಾರಕ್ಕಾಗಿ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದ ರಾಣೆಯವರ ಕೊಡುಗೆ ಈ ಕಾರವಾರವಷ್ಟೇ ಅಲ್ಲದೆ, ಜಿಲ್ಲೆಗೆ ಅಪಾರವಿತ್ತು. ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಅವರು ತಿಳಿಸಿದ್ದಾರೆ.

ಶಿಕ್ಷಕರ ದಿನಾಚರಣೆಯಂದೆ ಗುರುವನ್ನ ಕಳೆದುಕೊಂಡಿದ್ದೇವೆ: ಸೆ.5ರಂದು ನಾವೆಲ್ಲ ಶಿಕ್ಷಕರ ದಿನವನ್ನ ಆಚರಿಸುತ್ತೇವೆ. ಗುರುಗಳಿಗೆ ಹೆಚ್ಚಿನ ಗೌರವ, ಪ್ರೀತಿ- ಆದರಗಳನ್ನ ಈ ದಿನದಲ್ಲಿ ತೋರುತ್ತೇವೆ. ಆದರೆ ಇದೇ ದಿನ ಪ್ರಭಾಕರ್ ರಾಣೆಯಂಥ ಗುರುವನ್ನ ಜಿಲ್ಲೆ ಕಳೆದುಕೊಂಡಿದ್ದು ದುಃಖದಾಯಕ ವಿಷಯ. ಗುರುಗಳೆಲ್ಲ ಸಂಭ್ರಮಿಸುವ ದಿನ ರಾಣೆಯವರ ಅಗಲಿಕೆಯ ಈ ಶೋಕದ ಸುದ್ದಿ ಅತೀವ ನೋವನ್ನುಂಟು ಮಾಡಿದೆ ಎಂದು ಮಾಧವ ನಾಯಕ ತಿಳಿಸಿದ್ದಾರೆ.

300x250 AD

ಜಗದೀಪ ತೆಂಗೇರಿ ಸಂತಾಪ

ಮಾಜಿ ಸಚಿವರಾಗಿ, ಮೂರು ಬಾರಿ ಕಾರವಾರ- ಜೊಯಿಡಾ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಅಯ್ಕೆಯಾಗಿ ಜನಪ್ರಿಯ ಶಾಸಕರಾಗಿದ್ದ ಪ್ರಭಾಕರ ರಾಣೆಯವರು ಅನಾರೋಗ್ಯದಿಂದ ನಿಧನರಾಗಿದ್ದು, ಇವರ ನಿಧನಕ್ಕೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಸಂತಾಪ ಸೂಚಿಸಿದ್ದಾರೆ.

ಶಿಕ್ಷಣ ಪ್ರೇಮಿಯಾಗಿ, ಕಾರವಾರದ ಸುತ್ತಮುತ್ತ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿ, ಪ್ರತಿಭಾವಂತ ವಿಧ್ಯಾರ್ಥಿಗಳ ಬಾಳಿಗೆ ಅವರು ಬೆಳಕಾಗಿದ್ದರು. ಇಂತಹ ಅಪ್ರತಿಮ ಶಿಕ್ಷಣ ಪ್ರೇಮಿ, ಶಿಕ್ಷಕರ ದಿನಾಚರಣೆಯ ದಿನವೇ ನಮ್ಮೆಲ್ಲರಿಂದ ದೂರವಾಗಿದ್ದು ಮಾತ್ರ ವಿಧಿ ಲಿಖಿತ ಎಂದು ತೆಂಗೇರಿ ಸಂತಾಪ ವ್ಯಕ್ತಪಡಿಸಿದ್ದಾರೆ.

Share This
300x250 AD
300x250 AD
300x250 AD
Back to top