ಶಿರಸಿ: ಪ್ರತಿಷ್ಠಿತ ಶಿರಸಿ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ನಿ., ಶಿರಸಿ(ಉತ್ತರ ಕನ್ನಡ) ಸಂಘದ 2021-2022 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಸೆ.8 ರ ಗುರವಾರ ಮಧ್ಯಾಹ್ನ 3.30 ಘಂಟೆಗೆ ಸಂಘದ ಸೇಲ್‌ಯಾರ್ಡ’ನಲ್ಲಿ ಕರೆಯಲಾಗಿದೆ. ವಾರ್ಷಿಕ ಸರ್ವಸಾಧಾರಣ ಸಭೆಗೆ ಸರ್ವ ಸದಸ್ಯರು ಹಾಜರಾಗಲು ಪ್ರಕಟಣೆಯಲ್ಲಿ ಕೋರಲಾಗಿದೆ.
ಸಂಘದ ವ್ಯವಹಾರ, ಕಾರ್ಯ ಚಟುವಟಿಕೆಗಳು: 38 ವರ್ಷಗಳನ್ನು ಪೂರ್ಣಗೊಳಿಸಿ 39ನೇ ವರ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಾರ್ಚ 31ಕ್ಕೆ ಮುಗಿದ ಆರ್ಥಿಕ ವರ್ಷದಲ್ಲಿ ಈ ವರೆಗಿನ ಗರಿಷ್ಠ ವ್ಯವಹಾರದೊಂದಿಗೆ ರೂ. 6.0ಕೋಟಿಗೂ ಮೀರಿದ ಲಾಭ ಗಳಿಸಿದ್ದು ಲಾಭದಲ್ಲಿ ಅನುವುಗಳನ್ನು ಕಲ್ಪಿಸಿ ನಿಕ್ಕಿ ಲಾಭ ಘೋಷಿಸಲಾಗಿದೆ. 2021-22ನೇ ಸಾಲಿನಲ್ಲಿ ಸಂಘದಲ್ಲಿ 22169 ಕ್ವಿಂಟಲ್ ಹಸಿ ಅಡಿಕೆ ವಿಕ್ರಿ ಸಹಿತ ಅಂತೂ 86,903 ಕ್ವಿಂಟಲ್ ಮಹಸೂಲು ವಿಕ್ರಿ ಮಾಡಿದ್ದು ಸಂಘದ ವಹಿವಾಟು ರೂ.400 ಕೋಟಿಗೂ ಹಾಗೂ ದುಡಿಯುವ ಬಂಡವಾಳ ರೂ.194.00 ಕೋಟಿಗೂ ಅಧಿಕವಾಗಿದೆ. ಸ್ವಂತ ಬಂಡವಾಳ ರೂ.43.0 ಕೋಟಿಗಳಷ್ಟಿದ್ದು, ಠೇವಣಿ ರೂ.80.00 ಕೋಟಿಗೂ ಅಧಿಕವಾಗಿದೆ. ನೇರ ಖರೀದಿ ವಿಭಾಗದಲ್ಲಿ 17874-64-000 ಕ್ವಿಂಟಲ್ ಅಡಿಕೆ ಹಾಗೂ ಕಾಳುಮೆಣಸು ಖರೀದಿ-ವಿಕ್ರಿಯಿಂದ ರೂ.77ಕೋಟಿ 44ಲಕ್ಷಗಳ ವ್ಯವಹಾರ ಮಾಡಲಾಗಿದೆ. ಕೃಷಿ ವಿಭಾಗದಲ್ಲಿ ಗೊಬ್ಬರ, ಕ್ರಿಮಿನಾಶಕ ಹಾಗೂ ಕೃಷಿ ಉಪಕರಣ ಸೇರಿ ರೂ.12 ಕೋಟಿ 84 ಲಕ್ಷಗಳ ವಿಕ್ರಿ ವ್ಯವಹಾರ ಮಾಡಲಾಗಿದೆ. ಬನವಾಸಿ ಶಾಖೆಯಲ್ಲೂ ಸಹ ರೂ.6 ಕೋಟಿ 41 ಲಕ್ಷಗಳ ವಿಕ್ರಿ ವ್ಯವಹಾರ ಮಾಡಲಾಗಿದೆ. ದಾಸನಕೊಪ್ಪ ಶಾಖೆಯಲ್ಲಿ 3 ಕೋಟಿ 94 ಲಕ್ಷದ ವಿಕ್ರಿ ವ್ಯವಹಾರ ಮಾಡಲಾಗಿದೆ. ವರದಿ ವರ್ಷದಲ್ಲಿ ಪ್ರಾರಂಬಿಸಿದ ‘’ಸುಪರ್‌ಮಾರ್ಟ’’ ವಿಭಾಗದಲ್ಲಿ 8 ತಿಂಗಳ ಅವದಿಯಲ್ಲಿ ರೂ.5ಕೋಟಿ 95ಲಕ್ಷಗಳಷ್ಟು ವ್ಯವಹಾರವಾಗಿದೆ. 2021-2022ರಲ್ಲಿ ಗಳಿಸಿದ ಲಾಭದಲ್ಲಿ ಸದಸ್ಯರಿಗೆ ಹಾಗೂ ಸದಸ್ಯ ಸಂಘಗಳಿಗೆ ವಿಕ್ರಿ ಪ್ರೋತ್ಸಾಹಧನವಾಗಿ ರೂ.1,09,84,942.00 ನೀಡಿದ್ದು ಉಪನಿಯಮದಲ್ಲಿರುವ ಅವಕಾಶದಂತೆ ನಿಧಿಗಳಿಗೆ ಅನುವು ಮಾಡಿದ ಬಳಿಕ ನಿಕ್ಕೀ ಲಾಭ ರೂ.1,06,48,413ಗಳಷ್ಟು ಆಗಿರುತ್ತದೆ.
ಸಂಘದ 2021-22ನೇ ಸಾಲಿನ ಲೆಕ್ಕ ಪರಿಶೋಧನೆಯನ್ನು ಮೆ. ಉದಯ ಶೆಟ್ಟಿ & ಕಂ.ಚಾರ್ಟಡ್ ಅಕೌಂಟಂಟ್ಸ್, ಹುಬ್ಬಳ್ಳಿ ಇವರು ಕೈಗೊಂಡಿದ್ದು ಅಡಿಟ್ ವರ್ಗೀಕರಣ “ಅ” ವರ್ಗದಲ್ಲಿ ಮುಂದುವರಿದಿರುತ್ತದೆ. 2021-22ನೇ ಸಾಲಿನ ಲಾಭದಲ್ಲಿ ಸದಸ್ಯರಿಗೆ ಶೇ.15% ಡಿವಿಡೆಂಡ್ ಹಂಚಿಕೆ ಮಾಡಲು ಆಡಳಿತ ಮಂಡಳಿಯು ನಿರ್ಣಯಿಸಿದೆ.
ಹಸಿ ಅಡಿಕೆ ಟೆಂಡರ್:– ಸಂಘವು ಕಳೆದ 2-3 ವರ್ಷಗಳಿಂದ ಹಸಿ ಅಡಿಕೆ ಟೆಂಡರ್ ನಡೆಸುತ್ತಿದ್ದು ಮಳೆಗಾಲದಲ್ಲಿಯ ಕೊಳೆ ಅಡಿಕೆಗೆ ಸಹ ಟೆಂಡರ್ ವ್ಯವಸ್ಥೆ ಮಾಡಲಾಗಿದೆ. ರೈತರಿಗೆ ಸ್ಪರ್ದಾತ್ಮಕ ಧಾರಣೆ ನೀಡುವ ಉದ್ದೇಶದಿಂದ ಸಂಘವು ವರದಿಯ ವರ್ಷದಿಂದ ಹಸಿ ಅಡಿಕೆ ಟೆಂಡರ್‌ನಲ್ಲಿ ಭಾಗವಹಿಸಿ ಅಡಿಕೆ ಖರೀದಿಸಿ ಸಂಸ್ಕರಿಸಿ ಮಾರಾಟಮಾಡುತ್ತಿದ್ದು 2021-22ನೇ ಸಾಲಿನಲ್ಲಿ 700 ಕ್ವಿಂಟಲ್‌ಗೂ ಅಧಿಕ ಕಾಯಡಿಕೆ ಹಾಗೂ 2300 ಕ್ವಿಂಟಲ್‌ಗೂ ಅಧಿಕ ಗೋಟ ಅಡಿಕೆಯನ್ನು ಖರೀದಿಸಿದ್ದು ಸದಸ್ಯರಿಗೆ ಉತ್ತಮ ಧಾರಣೆ ಲಭ್ಯವಾಗಿದೆ.
ಟಿ.ಎಂ.ಎಸ್.ಆರೋಗ್ಯ ಸುರಕ್ಷಾ ಯೋಜನೆ:– ಸಂಘದಲ್ಲಿ ನೇರವಾಗಿ ಅಥವಾ ಪ್ರಾಥಮಿಕ ಸಂಘದ ಮೂಲಕ ಮಹಸೂಲು ವಿಕ್ರಯಿಸುವ ಸದಸ್ಯರು ಹಾಗೂ ಸದಸ್ಯರ ಕುಟುಂಬದ ಮೆಂಬರರಿಗೆ ಅನಾರೋಗ್ಯ ಉಂಟಾದಲ್ಲಿ ಅಥವಾ ಅಪಘಾತವಾದ ಸಂದರ್ಭದಲ್ಲಿ ಆಸ್ಪತ್ರೆ ಖರ್ಚು_ವೆಚ್ಚ ಭರಿಸಲು ಧನ ಸಹಾಯ ನೀಡುವ ಯೋಜನೆಯನ್ನು ಯಶಸ್ವಿನಿ ಯೋಜನೆಯ ಮಾದರಿಯಲ್ಲಿಯೇ ‘ಟಿ.ಎಂ.ಎಸ್. ಆರೋಗ್ಯ ಸುರಕ್ಷಾ’ ಯೋಜನೆಯನ್ನು 2018ರಿಂದ ಪ್ರಾರಂಭಿಸಿದ್ದು, ಈ ಯೋಜನೆಯ ನಿಯಮಾವಳಿಗೆ ಕಾಲಕಾಲಕ್ಕೆ ಸೂಕ್ತ ತಿದ್ದುಪಡಿಮಾಡಿಕೊಂಡು ನೀಡುವ ಧನ ಸಹಾಯ ಮೊತ್ತ ಹೆಚ್ಚಿಸಿದ್ದು ಖರ್ಚುವೆಚ್ಚದ ಶೇ.50ರಷ್ಟು ಗರಿಷ್ಠ ಮಿತಿಗೊಳಪಟ್ಟು ಧನ ಸಹಾಯ ನೀಡುತ್ತಿದ್ದು 2021-22ನೇ ಸಾಲಿನಲ್ಲಿ ಈ ಯೋಜನೆಯ ಮೂಲಕ ರೂ.69,42,900.00 ಗಳಷ್ಟು ಧನ ಸಹಾಯ ನೀಡಲಾಗಿದೆ.
ಫೈಬರ್ ದೋಟಿ ನಮ್ಮ ಸಂಸ್ಥೆಯೂ ಸದಸ್ಯ ರೈತರ ತೋಟದಲ್ಲಿ ದೋಟಿಯಲ್ಲಿ ಮದ್ದು ಸಿಂಪರಣೆ ಹಾಗೂ ಕೊನೆ ಕೊಯ್ಯುವ ವ್ಯವಸ್ಥೆಯನ್ನು ಯಶಸ್ವಿಯಾಗಿ ಒದಗಿಸುತ್ತಿದೆ. ಈಗ ನಮ್ಮ ಸಂಸ್ಥೆಯಲ್ಲಿ ನಾಲ್ಕು ದೋಟಿ ಹಾಗೂ 6 ಜನರ ತಂಡ ಕಾರ್ಯ ನಿರ್ವಹಿಸುತ್ತಿದ್ದು ಸುಮಾರು 200 ಎಕರೆ ತೋಟಕ್ಕೆ (75000ಲೀ)ಮದ್ದನ್ನು ಸಿಂಪಡಿಸಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಮರ ಹತ್ತಿ ಕೊನೆ ಕೊಯ್ಲು ಮಾಡುವುದು ಕಥೆಯಾಗುವ ದಿನ ದೂರವಿಲ್ಲ. ಮದ್ದು ಸಿಂಪರಣೆ ಹಾಗೂ ಕೊನೆ ಕೊಯ್ಲು ಇನ್ನು ಮುಂದೆ ಸಕಾಲಿಕವೂ ಸುಲಭವೂ ಆಗಲಿದೆ.
‘ವಿನಾ ದೈನ್ಯೇನ ಜೀವನಂ’ ಎಂಬುದು ಸಂಘದ ಧ್ಯೇಯವಾಕ್ಯವಾಗಿದ್ದು ನಮ್ಮ ಸಂಘದಲ್ಲಿ ವ್ಯವಹರಿಸುವ ಎಲ್ಲ ಸದಸ್ಯರು ಆರ್ಥಿಕವಾಗಿ ಉತ್ತಮವಾಗಿ ಜೀವನ ನಡೆಸಲು ಪೂರಕವಾದ ಕಾರ್ಯವನ್ನು ಸಂಘದಿಂದ ಮಾಡುತ್ತ ಬರಲಾಗಿದೆ. ಅಡಿಕೆ ಬೆಳೆಯೊಂದಿಗೆ ಕಾಳುಮೆಣಸು, ಯಾಲಕ್ಕಿ, ವೆನಿಲ್ಲಾ, ಕೋಕೊ, ಕಾಫಿಗಳನ್ನು ಬೆಳೆಯಲು ಪ್ರೋತ್ಸಾಹಿಸಲಾಗುತ್ತಿದೆ.
ಸಂಘದಲ್ಲಿ ಲಭ್ಯವಿರುವ ಸೇವಾ ಸೌಲಭ್ಯಗಳು:
- ಮಹಸೂಲು ಶಿಲ್ಕು ಇಡುವ ಬಗ್ಗೆ ಸುಸಜ್ಜಿತ ಗುದಾಮ ವ್ಯವಸ್ಥೆ. ಶಿಲ್ಕು ಇರುವ ಮಹಸೂಲು ಹಾಳಾಗದಂತೆ ಇಡಲು ದುವಾ ಹಾಗೂ ಫ್ಯುಮಿಗೇಶನ್ ವ್ಯವಸ್ಥೆ. ಅಡಿಕೆ ಆರಿಸಿಕೊಡುವ ವ್ಯವಸ್ಥೆ, ತ್ವರಿತ ಹಾಗೂ ಪಾರದರ್ಶಕ ವ್ಯವಹಾರ
- ಸದಸ್ಯರ ದೈನಂದಿನ ಅಗತ್ಯತೆಗೆ ಬೇಕಾದ ದಿನಸಿ ಸಾಮಾನು, ಸ್ಟೇಶನರಿ ಸಾಮಾನು, ಹಣ್ಣು,ತರಕಾರಿ,ಹಾಲು ಹಾಗೂ ಪಾತ್ರೆ, ವಿದ್ಯಾರ್ಥಿಗಳಿಗೆ ಬೇಕಾಗುವ ಪೆನ್ನು, ಪೆನ್ಸಿಲ್ ನೋಟ್ ಬುಕ್,ಪೇಪರ್ ಇತ್ಯಾದಿ ಸಾಮಾನುಗಳನ್ನು ಸ್ಪರ್ಧಾತ್ಮಕ ದರದಲ್ಲಿ ಪೂರೈಸುವ ಯೋಜನೆಯೊಂದಿಗೆ ‘ಸುಪರ್ ಮಾರ್ಟ’ ವಿಭಾಗ ಪ್ರಾರಂಭಿಸಲಾಗಿದೆ.
- ಮಹಸೂಲು ವಿಕ್ರಿ ಆಧಾರದ ಮೇಲೆ ಮೆಂಬರರಿಗೆ ರಿಬೇಟ ನೀಡಲಾಗುತ್ತಿದೆ.
- ಮೆಂಬರರ ಅಥವಾ ಅವರ ಕುಟುಂಬದ ಸದಸ್ಯರಿಗೆ ಅನಾರೋಗ್ಯಅಥವಾ ಅಪಘಾತವಾದಲ್ಲಿ ಆಸ್ಪತ್ರೆ ಖರ್ಚುವೆಚ್ಚ ಭರಿಸಲು “ಆರೋಗ್ಯ ಸುರಕ್ಷಾ ಯೋಜನೆ”ಯಿಂದ ಧನಸಹಾಯ. ಮತ್ತು ಕೊನೆಗೌಡರಿಗೆ ಕೆಲಸದಲ್ಲಿದಾಗ ಅಪಘಾತವಾದಲ್ಲಿ ಧನ ಸಹಾಯ ನೀಡುವ ಯೋಜನೆ.
- “ಮರಣೋತ್ತರ ನಿಧಿ” ಸಕ್ರೀಯವಾಗಿ ವ್ಯವಹರಿಸುವ ಶೇರು ಸದಸ್ಯರು ಮೃತರಾದ ಸಂದರ್ಭದಲ್ಲಿ ಮೃತರ ಕುಟುಂಬಕ್ಕೆ ಈ ನಿಧಿಯಿಂದ ಧನಸಹಾಯ
- ಸಂಘದಿಂದ ಉತ್ಪಾದಿಸಿ ಮಾರಾಟ ಮಾಡುತ್ತಿರುವ “TMS” ಬ್ರಾಂಡ್ ಪಶು ಆಹಾರ, ಕರುಗಳ ಆಹಾರ, ಮಿನರಲ್ ಮಿಕ್ಷರ್ ಹಾಗೂ ಭೂ ಸುರಕ್ಷಾ ಸಾವಯವ ಗೊಬ್ಬರ
- ಒಣ ಮೇವಿನ “ಮೇವಚ್ಚು” ತಯಾರಿಸಿ ವಿಕ್ರಿ ಮಾಡಲಾಗುತ್ತಿದೆ. ಹಸಿ ಹುಲ್ಲು ಬಗ್ಗೆ ಮನೆ ಆವರಣದಲ್ಲಿ ಬೆಳೆಯಬಹುದಾದ ಹೈಡ್ರೋಫೋನಿಕ್ ತಂತ್ರಜ್ಞಾನ, ಸೈಲೆಜ್ ಮಾರಾಟ ವ್ಯವಸ್ಥೆ. ರೈತರಿಗೆ ತೋಟ, ಗದ್ದೆಗಳಲ್ಲಿ ಡ್ರೈನೇಜ್ ಕಾಲುವೆ, ಬಸಿ ಕಾಲುವೆ ಹಾಗೂ ಇನ್ನಿತರ ಕೆಲಸಗಳಿಗೆ ಸಂಬಂಧಿಸಿ ಕೃಷಿ ಪದವಿಧರರಿಂದ ಮಾಹಿತಿ.
- “ಮಿನಿ ಹಿಟಾಚಿ” ತೋಟ,ಗದ್ದೆಗಳಲ್ಲಿ ಕೆಲಸಮಾಡಲು ಬಹಳ ಅನುಕೂಲ ಯೋಗ್ಯ ದರದಲ್ಲಿ ಬಾಡಿಗೆಗೆ ಲಭ್ಯವಿದೆ . ಕೃಷಿ ವಿಭಾಗದ ಮೂಲಕ ಡ್ರಿಪ್ ಪೈಪ್ಸ್, ನೀರಾವರಿ ಪೈಪ್ಸ್, ಪಿಟ್ಟಿಂಗ್ಸ್, ಪಂಪಸೆಟ್ಸ್, ರೂಫಿಂಗ್ ಶೀಟ್ಸ್, ಕೃಷಿ ಉಪಯೋಗ ಮಷಿನರಿಗಳು ಇತ್ಯಾದಿಗಳು ಲಭ್ಯ.