Slide
Slide
Slide
previous arrow
next arrow

ಭಾರಿ ಗಾಳಿ ಮಳೆಗೆ ನೆಲಕಚ್ಚಿದ ಅಡಿಕೆ, ತೆಂಗು:ಲಕ್ಷಾಂತರ ರೂ. ಹಾನಿ

300x250 AD

ಯಲ್ಲಾಪುರ; ತಾಲೂಕಿನಲ್ಲಿ  ವಾರಗಳಿಂದ ಬಿಟ್ಟೂ ಬಿಟ್ಟು ಭಾರಿ ಮಳೆಯಾಗುತ್ತಿದೆ. ಶುಕ್ರವಾರ ಸಂಜೆ ಸುರಿದ ಭಾರಿ ಮಳೆಗಾಳಿಗೆ ಮಾವಿನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರ ತೋಟಪಟ್ಟಿಗಳಿಗೆ ವ್ಯಾಪಕ ಹಾನಿ ಉಂಟಾಗಿದೆ.

 ಗೇರಾಳ ಮಜರೆಯ ರೈತರಾದ ಜಗದೀಶ ಶಂಕರ್ ಭಟ್ ಸುಬ್ರಾಯ ತಿಮ್ಮಯ ಭಟ್  ಅವರಿಗೆ ಸೇರಿದ ಅಡಿಕೆ ತೋಟದಲ್ಲಿ ಒಂದು ಎಕರೆಗೂ ಮೇಲ್ಪಟ್ಟು  ಭಾಗದಲ್ಲಿ ಹಾನಿಯಾಗಿದ್ದು,ಸುಮಾರು ಮುನ್ನೂರಷ್ಟು ಅಡಿಕೆ ಮರಗಳು ನೆಲಕ್ಕೆ ಉರುಳಿವೆ.ಹಾಗೂ  ಹತ್ತಕ್ಕೂ ಹೆಚ್ಚು ಫಲಭರಿತ ತೆಂಗಿನ ಮರಗಳು ಮುರಿದು ಬಿದ್ದಿವೆ.

300x250 AD

ರೈತರಾದ ತಿಮ್ಮಣ್ಣ ಗೋಪಾಲ ಭಟ್ ಅವರ ತೋಟದಲ್ಲಿ ಸಹಿತ ಸುಮಾರು ಒಂದು ಎಕರೆಯಷ್ಟು ಪ್ರದೇಶದಲ್ಲಿ ಫಲಭರಿತ  ಅಡಿಕೆಮರಗಳು ಮುರಿದುಬಿದ್ದು ಹಾನಿ ಆಗಿವೆ. ವ್ಯಾಪಕವಾಗಿ ಬೀಸಿದ ಬಿರುಗಾಳಿಗೆ ರೈತರಾದ ಗಣಪತಿ ತಿಮ್ಮಯ್ಯ ಭಟ್ ಅವರ ಮನೆಯ ಮೇಲ್ಚಾವಣಿಗೆ ಹೊದಿಸಿದ ನೂರಾರು ಹಂಚುಗಳು, ಸಿಮೆಂಟ್ ಸೀಟುಗಳು ಹಾರಿ ಹೋಗಿದೆ. ಅಡಿಕೆ ತೋಟವೂ ಸಹಿತ ಭಾಗಶಃ ಹಾಳಾಗಿದೆ. ಗ್ರಾಮ ಲೆಕ್ಕಾಧಿಕಾರಿ ಈಶ್ವರ ಪಟಗಾರ ಸ್ಥಳಕ್ಕೆ ಆಗಮಿಸಿ ಪಂಚನಾಮೆ ಮಾಡಿ ಸದರಿ ರೈತರ ಹಾನಿಯ ವಿವರವನ್ನು ದಾಖಲಿಸಿಕೊಂಡಿದ್ದಾರೆ.ಗ್ರಾ.ಪಂ ಉಪಾಧ್ಯಕ್ಷ ಸುಬ್ಬಣ್ಣ ಕುಂಟೆಕಳಿ ಹಾನಿಗೀಡಾದ ತೋಟಗಳಿಗೆ ಭೇಟಿ ನೀಡಿದ್ದು,ಹಾನಿಯ ವಿವರ ಸಚಿವರಿಗೆ ತಿಳಿಸಿ ಹೆಚ್ಚಿನ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top