ಯಲ್ಲಾಪುರ: ತಾಲೂಕಿನ ಗೇರಗದ್ದೆ ಗ್ರಾಮದ ಮಾವಿನಗದ್ದೆಯಲ್ಲಿ ಹಸುವೊಂದು ಎರಡು ತಲೆಗಳುಳ್ಳ ಕರುವಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ.
ಮಾವಿನಗದ್ದೆಯ ದೇವೇಂದ್ರ ಭಟ್ಟ ಎಂಬುವರ ಕೊಟ್ಟಿಗೆಯಲ್ಲಿ ಹಸುವೊಂದು ಅಪರೂಪದ ಗಂಡು ಕರುವಿಗೆ ಜನ್ಮ ನೀಡಿದೆ. ಒಂದೇ ದೇಹ ಎರಡು ತಲೆ, ನಾಲ್ಕು ಕಣ್ಣುಗಳನ್ನು, ಎರಡು ಕಿವಿಗಳನ್ನು ಹೊಂದಿದೆ.
ಬೈಪ್ ವೈದ್ಯಾಧಿಕಾರಿ ಪ್ರದೀಪ ಗಾಂವ್ಕಾರ ಅವರು ಸುರಕ್ಷಿತವಾಗಿ ಕರುವಿನ ಜನನವಾಗುವಂತೆ ನೋಡಿಕೊಂಡಿದ್ದು, ಇಂತಹ ಕರುಗಳು ಆಹಾರ ಸೇವನೆ, ಉಸಿರಾಟದ ಸಮಸ್ಯೆಯಿಂದ ಬದುಕುವುದು ಕಷ್ಟ ಎನ್ನುತ್ತಾರೆ.
ಎರಡು ತಲೆಗಳುಳ್ಳ ಕರುವಿಗೆ ಜನ್ಮ ನೀಡಿದ ಹಸು
