ಶಿರಸಿ: ತಾಲೂಕಿನ ಮುರೇಗಾರ ಗ್ರಾಮದ ಶ್ರೀಪಾದ ಹೆಗಡೆಯವರ ಕೃಷಿ ಜಮೀನಿನಲ್ಲಿ, ಕಾಳಿಂಗಸರ್ಪವೊಂದು ಬಾಯಿಯಲ್ಲಿ ಯಾವುದೋ ವಸ್ತು ಸಿಲುಕಿ ಆಹಾರವಿಲ್ಲದೆ ನಿತ್ರಾಣಗೊಂಡಿತ್ತು. ನಂತರ ಉರಗ ತಜ್ಞ ಪ್ರಶಾಂತ ಹುಲೇಕಲ್ ರವರಿಗೆ ಮಾಹಿತಿ ನೀಡಿದ್ದು ಅವರು ರಾಜೇಶ್ ನಾಯ್ಕರ ಸಹಾಯದೊಂದಿಗೆ ಸುಮಾರು 11ಅಡಿ ಉದ್ದದ ಬೃಹತ್ ಕಾಳಿಂಗಸರ್ಪವನ್ನು ಹಿಡಿದು ,ಚಿಕಿತ್ಸೆ ನೀಡಿ ಕಾಡಿಗೆ ಮರಳಿಸಿದ್ದಾರೆ.
ನಿತ್ರಾಣಗೊಂಡಿದ್ದ ಕಾಳಿಂಗಸರ್ಪ:ಚಿಕಿತ್ಸೆ ನಂತರ ಮರಳಿ ಕಾಡಿಗೆ
