ಶಿರಸಿ; ಯಕ್ಷ ಶಾಲ್ಮಲಾ ಸ್ವರ್ಣವಲ್ಲೀಯವರು ಶ್ರೀ ಕ್ಷೇತ್ರ ಸ್ವರ್ಣವಲ್ಲಿಯಲ್ಲಿ ವತಿಯಿಂದ ಆ. 27 ಶನಿವಾರ ಮತ್ತು ಆ. 28 ರವಿವಾರದಂದು ಯಕ್ಷೋತ್ಸವ ಮಕ್ಕಳ ತಾಳಮದ್ದಳೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ನಗರದ ಲಯನ್ಸ್ ಶಾಲೆಯ ಕಿರಿಯ ಹಾಗೂ ಹಿರಿಯ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು. ಹಿರಿಯರ ವಿಭಾಗದಲ್ಲಿ ವಿದ್ಯಾರ್ಥಿಗಳು ‘ಸುಗ್ರೀವ ಸಖ್ಯ’ ಎನ್ನುವ ತಾಳಮದ್ದಳೆ ಪ್ರದರ್ಶಿಸಿದರು. ಈ ತಾಳಮದ್ದಳೆಯಲ್ಲಿ ಕುಮಾರ್ ಆದಿತ್ಯ ಜೋಶಿ, ಕುಮಾರಿ ಅಯನಾ ವೈ, ಕುಮಾರಿ ಸುವಿಧಾ ಹೆಗಡೆ ಮತ್ತು ಕುಮಾರಿ ಸಹನಾ ಭಟ್ ಭಾಗವಹಿಸಿದ್ದರು.
ಕಿರಿಯರ ವಿಭಾಗದಲ್ಲಿ ವಿದ್ಯಾರ್ಥಿಗಳು ‘ನಚಿಕೇತ ಉಪಾಖ್ಯಾನ’ ಎನ್ನುವ ಅಂಕ ಪ್ರದರ್ಶಿಸಿ ದ್ವಿತೀಯ ಬಹುಮಾನವನ್ನು ಗಳಿಸಿದ್ದು ಗಮನಾರ್ಹ. ಈ ತಾಳಮದ್ದಳೆಯಲ್ಲಿ ಕುಮಾರ್ ಪ್ರಥಮ್ ಹೆಗಡೆ, ಕುಮಾರ್ ಚಿನ್ಮಯ್ ಕೆರೆಗೆದ್ದೆ, ಕುಮಾರ್ ಪಾರ್ಥ ಶೆಟ್ಟಿ , ಕುಮಾರಿ ಶ್ರಾವ್ಯ ಭಟ್ ಪಾಲ್ಗೊಂಡಿದ್ದರು.ವಿದ್ಯಾರ್ಥಿಗಳು ತಮ್ಮ ಪ್ರಥಮ ಪ್ರಯತ್ನದಲ್ಲಿ ನೀಡಿದ ಈ ಅತ್ಯುತ್ತಮ ಪಾಲ್ಗೊಳ್ಳುವಿಕೆಯ ಬಗ್ಗೆ ಮತ್ತು ಈ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಮುಖ್ಯೋಪಾಧ್ಯಾಯ ಶಶಾಂಕ್ ಹೆಗಡೆ,ಸಹ ಶಿಕ್ಷಕಿಯರಾದ ಶ್ರೀಮತಿ ಸೀತಾ ಭಟ್, ಶ್ರೀಮತಿ ವಿದ್ಯಾವತಿ ಭಟ್, ಕುಮಾರಿ ಯಶಸ್ವಿನಿ ಹೆಗಡೆ ಇವರುಗಳಿಗೆ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕವೃಂದ ತುಂಬು ಹೃದಯದ ಅಭಿನಂದನೆಗಳೊಂದಿಗೆ ಶ್ಲಾಘಿಸಿದೆ.