Slide
Slide
Slide
previous arrow
next arrow

ಕ್ರೀಡಾಕೂಟ: ಮೇಲುಗೈ ಸಾಧಿಸಿದ ಲಯನ್ಸ್ ವಿದ್ಯಾರ್ಥಿಗಳು

300x250 AD

ಶಿರಸಿ; ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಾಲೂಕಾ ಯೋಜನಾ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಶಿರಸಿ ಹಾಗೂ ಡೊನ್ ಬೋಸ್ಕೊ ಪ್ರೌಢಶಾಲೆ, ಶಿರಸಿ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ನಗರಪೂರ್ವ ವಲಯಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ನಗರದ ಲಯನ್ಸ್ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆಯುವುದರ ಮೂಲಕ ಮೇಲುಗೈ ಸಾಧಿಸಿದ್ದಾರೆ.

ವೈಯಕ್ತಿಕ ಕ್ರೀಡೆಗಳಲ್ಲಿ ಶ್ರೀಲಕ್ಷ್ಮೀ ಹೆಗಡೆ (ಜಾವಲಿನ್ ಥ್ರೋ ಪ್ರಥಮ, ಡಿಸ್ಕ್ ಥ್ರೋ ಪ್ರಥಮ, ಶಾಟ್ ಪುಟ್ ದ್ವಿತೀಯ), ಸುಜಲ್ ಎಸ್. ಭಟ್ (800 ಮೀ ಓಟ ಪ್ರಥಮ), ತೈಭಾ ತಬಸುಮ್ (ಉದ್ದ ಜಿಗಿತ ಪ್ರಥಮ), ಪೃಥ್ವಿ ಶೆಟ್ಟಿ (ತ್ರಿಬಲ್ ಜಂಪ್ ಪ್ರಥಮ), ಗೌತಮ್ ನಾಯ್ಕ (ಹಡಲ್ಸ್ 400 ಮೀ ಪ್ರಥಮ), ನಾಗಭೂಷಣ ಭಟ್ (ಜಾವಲಿನ್ ಥ್ರೋ ಪ್ರಥಮ), ರೋಹಿತ್ ಬಿಷ್ನೂಯಿ (ಶಾಟ್ ಪುಟ್ ಪ್ರಥಮ), ಸಾತ್ವಿಕ್ ಹರಿಕಂತ್ರ (1500 ಮೀ ಓಟ ಪ್ರಥಮ), ಗಗನ ಎಮ್.ಎನ್ (1500 ಮೀ ಓಟ ದ್ವಿತೀಯ), ಶೃದ್ಧಾ ವಿಠಲ್ಕರ್ (ಶಾಟ್ ಪುಟ್ ತೃತೀಯ), ತುಷಾರ್ ನಿಲೇಕಣಿ (ಶಾಟ್ ಪುಟ್ ದ್ವಿತೀಯ, ಡಿಸ್ಕ ಥ್ರೋ ತೃತೀಯ), ಪ್ರೀತಮ್ ನಾಯ್ಕ (ಉದ್ದ ಜಿಗಿತ ತೃತೀಯ), ಶುಭಾ ಗುಡಿಗಾರ್ (200 ಮೀ ಓಟ ತೃತೀಯ, 400 ಮೀ ಓಟ ತೃತೀಯ), ಸ್ಥಾನಗಳನ್ನು ಪಡೆದಿದ್ದಾರೆ.
ಗುಂಪು ಕ್ರೀಡೆಯಲ್ಲಿ ಹುಡುಗಿಯರ ವಾಲಿಬಾಲ್- ಪ್ರಥಮ, ಥ್ರೋಬಾಲ್- ಪ್ರಥಮ, ಬಿಬಿಟಿ – ಪ್ರಥಮ, ಕಬ್ಬಡ್ಡಿ – ದ್ವಿತೀಯ, ರೀಲೆ 400 ಮೀ ದ್ವಿತೀಯ ಸ್ಥಾನ ಹಾಗೂ ಹುಡುಗರ ಗುಂಪು ಕ್ರೀಡೆಯಲ್ಲಿ ಥ್ರೋಬಾಲ್-ದ್ವಿತೀಯ, ವಾಲಿಬಾಲ್- ದ್ವಿತೀಯ, ಖೋ ಖೋ – ದ್ವಿತೀಯ, ಕಬ್ಬಡ್ಡಿ – ದ್ವಿತೀಯ, ಬಿಬಿಟಿ – ದ್ವಿತೀಯ, ರೀಲೆ 400 ಮೀ ದ್ವಿತೀಯ ಸ್ಥಾನಗಳನ್ನು ಪಡೆದು ಪ್ರಶಸ್ತಿ ಪತ್ರ ಹಾಗೂ ಮೆಡಲ್’ಗಳನ್ನು ತಮ್ಮದಾಗಿಸಿಕೊಂಡು ಶಾಲೆಯ ಕೀರ್ತಿ ಹೆಚ್ಚಿಸಿ, ತಾಲೂಕಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಕ ನಾಗರಾಜ ಜೋಗಳೇಕರ್ ಇವರು ಮಾರ್ಗದರ್ಶನ ನೀಡಿದ್ದು, ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಪಕ ಶಶಾಂಕ ಹೆಗಡೆ, ಶಿಕ್ಷಕ-ಶಿಕ್ಷಕೇತರ ಬಾಂಧವರು, ಲಯನ್ಸ್ ಬಳಗ ಮತ್ತು ಪಾಲಕರ ವೃಂದ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top