ಯಲ್ಲಾಪುರ: ಇತ್ತೀಚೆಗೆ ನಿಧನರಾದ ನಿವೃತ್ತ ಶಿಕ್ಷಕ ಕೃಷ್ಣ ಭೀಮಾ ಗೌಡ ಅವರ ಶ್ರದ್ಧಾಂಜಲಿ ಕಾರ್ಯಕ್ರಮವು ತಾಲೂಕಿನ ಭರತನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಪ್ರಗತಿ ವಿದ್ಯಾಲಯ ಅಧ್ಯಕ್ಷ ಹೇರಂಭ ಹೆಗಡೆ ಮಾತನಾಡಿ, 1964ರಲ್ಲಿ ಗೌಡ ಮಾಸ್ಟರ್ ಇಲ್ಲಿಗೆ ಬಂದಾಗ ಈ ಶಾಲೆ ಇನ್ನೂ ಸರಕಾರಿ ಶಾಲೆ ಆಗಿರಲಿಲ್ಲ. ಬಂದ ಹೊಸದರಲ್ಲಿಯೆ ಅವರು ಇಲ್ಲಿ ಭಜನಾ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ನಂತರ ಮಕ್ಕಳಿಂದ ಜನೆವರಿ 26ಕ್ಕೆ ಯಕ್ಷಗಾನ ಪ್ರಾರಂಭಿಸಿದರು. ಯಕ್ಷಗಾನ ತರಬೇತಿ ತಿಂಗಳುಗಟ್ಟಲೆ ನಡೆಯುತ್ತಿತ್ತು. ಮಕ್ಕಳಿಗೆ ವಿದ್ಯೆ ಕಲಿಸುವುದರಲ್ಲೂ ಗೌಡಾ ಮಸ್ತರು ಒಂದು ಹೆಜ್ಜೆ ಮುಂದಿದ್ದರು ಎಂದು ಹಳೆಯ ನೆನಪುಗಳನ್ನು ಸ್ಮರಿಸಿದರು.
ವಿನಾಯಕ ಭಟ್ಟ ನರೀಸರ, ಉದಯ ಭಟ್ಟ ಕಲ್ಲಳ್ಳಿ, ನರಸಿಂಹ ನಾಯ್ಕ ಜಡ್ಡಿಗದ್ದೆ, ಸಂತೋಷ್ ಶೇಟ್ ಭರತನಹಳ್ಳಿ, ನಾರಾಯಣ ಮಾಸ್ತಾರ್, ಆರ್. ಜಿ. ಹೆಗಡೆ, ರವಿ ಶಾಸ್ತ್ರಿ ಜಕ್ಕೊಳ್ಳಿ, ಕೇಶವ ನಾಗರಾಜ ಗೌಡ, ಕೃಷ್ಣ ಹುದಾರ, ಗ.ರಾ.ಭಟ್ಟ ಮೊದಲಾದವರು ಈ ಸಂದರ್ಭದಲ್ಲಿ ತಮ್ಮ ನುಡಿನಮನ ಸಲ್ಲಿಸಿದರು. ಹೊನ್ನಪ್ಪ ತಿಪ್ಪಯ್ಯ ಪಟಗಾರ, ರಘು ಭಟ್ಟ ನರೀಸರ, ರಾಮಚಂದ್ರ ಭಾಗ್ಯತ ಭರತನಹಳ್ಳಿ, ಎಸ್ಟಿಎಂಸಿ ಅಧ್ಯಕ್ಷ ಸದಾನಂದ ಮುಡೂರ ಪೂಜಾರಿ, ಶಿಕ್ಷಕಿಯರಾದ ಕಾವೇರಿ, ಮಮತಾ ಮೊದಲಾದವರು ಉಪಸ್ಥಿತರಿದ್ದರು.ಶಿಕ್ಷಕಿ ಸವಿತಾ ಟೀಚರ್ ಕಾರ್ಯಕ್ರಮ ನಿರ್ವಹಿಸಿದರು.