Slide
Slide
Slide
previous arrow
next arrow

ಪುಸ್ತಕ ಜ್ಞಾನದ ಜೊತೆ, ವ್ಯಾವಹಾರಿಕ ಜ್ಞಾನ ಬದುಕಿನ ಯಶಸ್ಸಿಗೆ ಕಾರಣ: ಮದ್ಗುಣಿ

300x250 AD

ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಪತ್ರಕರ್ತ ನಾಗರಾಜ ಮದ್ಗುಣಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವ ಶಾಲೆಗಳ ಸಂಖ್ಯೆ ಹೆಚ್ಚಬೇಕಿದೆ ಎಂದು ಹೇಳಿದರು. ಅವರು ಪುಸ್ತಕ ಜ್ಞಾನದ ಜೊತೆ, ವ್ಯಾವಹಾರಿಕ ಜ್ಞಾನ ಬದುಕಿನಲ್ಲಿ ಯಶಸ್ಸು ತರುತ್ತದೆ. ಸಮಾಜದಲ್ಲಿ ಕಲಿಯುವಂತದ್ದು ಬಹಳ ಇರುತ್ತದೆ. ಅತಿಯಾಗಿ ಓದುವ ವಿದ್ಯಾರ್ಥಿಗಳಿಗೆ ಬೇರೆ ಬೇರೆ ವಸ್ತುಗಳ ಪರಿಚಯವೇ ಇರುವುದಿಲ್ಲ. ಇಲ್ಲಿಯ ಸಂಘಟನೆಯಲ್ಲಿ ವಿವಿಧ ವಸ್ತುಗಳ ಪ್ರದರ್ಶನ ಮಾರಾಟ ಇರುವುದರಿಂದ ಅವುಗಳನ್ನು ಹತ್ತಿರದಿಂದ ನೋಡುವ, ವ್ಯವಹರಿಸುವ ಕೌಶಲ್ಯ ಬೆಳೆಯುತ್ತದೆ. ಇಂತಹ ಅಮೂಲ್ಯ ಕಾರ್ಯಗಳ ಮೂಲಕ ವಿಶ್ವದರ್ಶನ ಸಂಸ್ಥೆ ಯಲ್ಲಾಪುರದ ಹೆಮ್ಮೆಯಾಗಿ ಬೆಳೆಯುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲಾ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಗಳ ಅನಾವರಣ ಈ ಕಾರ್ಯಕ್ರಮದ ಉದ್ದೇಶ,ಓದುತ್ತಿರುವ ಪ್ರತಿ ವಿದ್ಯಾರ್ಥಿಗಳು ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಭಾಗಿಯಾಗಬೇಕೆಂಬ ಉದ್ದೇಶದಿಂದ ಗಣಿತ ರಸಪ್ರಶ್ನೆ, ವಿಜ್ಞಾನ ರಂಗೋಲಿ, ಭಾಷಾ ವಿದ್ಯಾರ್ಥಿ ಕವಿಗೋಷ್ಠಿ, ವ್ಯಾವಹಾರಿಕ ಅಧ್ಯಯನ, ಮಾದರಿ ರಚನೆಗಳ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸ್ವರಚಿತ ಕವನ ವಾಚನದಲ್ಲಿ ವಿದ್ಯಾರ್ಥಿಗಳಾದ ಅನುಷಾ ಭಟ್ಟ, ಪೃಥ್ವಿ ಜೋಷಿ, ಚಿನ್ಮಯ ವೈದ್ಯ, ನಾರಾಯಣ ಭಟ್ಟ, ಶ್ರೀವತ್ಸ ಭಟ್ಟ, ಅನನ್ಯಾ ಭಟ್ಟ, ಶ್ರೀರಕ್ಷಾ ಭಟ್ಟ, ಕನ್ನಡ ಮತ್ತು ಹಿಂದಿ ಭಾಷೆಯ ರಚನೆಗಳನ್ನು ಪ್ರಸ್ತುತ ಪಡಿಸಿದರು. ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ತಯಾರಿಸಿದ ವಿವಿಧ ತಿಂಡಿ-ತಿನಿಸುಗಳು, ಉಪ್ಪಿನಕಾಯಿ ಮುಂತಾದ ವಸ್ತುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು, ಪ್ರಖ್ಯಾತ ಕನ್ನಡ ಸಾಹಿತಿಗಳ ಪುಸ್ತಕ ಪ್ರದರ್ಶನ, ವಿಜ್ಞಾನ ರಂಗೋಲಿ, ವಿವಿಧ ಮಾಡೆಲ್‌ಗಳ ಪ್ರದರ್ಶನ ನಡೆಯಿತು. ಶಿಕ್ಷಕರಾದ ಖೈರೂನ್ ಶೇಖ್, ಪ್ರೇಮಾ ಗಾಂವರ, ನೀತಾ ನಾಯ್ಕ, ಮಹೇಶ ನಾಯ್ಕ, ನವೀನಕುಮಾರ ಉಪಸ್ಥಿತರಿದ್ದರು. ಪ್ರಭಾತ ಭಟ್ಟ ಪ್ರಾರ್ಥಿಸಿದರು. ಶಿಕ್ಷಕ ಶ್ಯಾಮಲಾ ಕೆರೆಗದ್ದೆ ಸ್ವಾಗತಿಸಿದರು. ಆಯೇಷಾ ನಿರ್ವಹಿಸಿದರು. ಗೀತಾ ಎಚ್. ವಿ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top