• Slide
  Slide
  Slide
  previous arrow
  next arrow
 • ಚಿಕ್ಕನಕೋಡ ವಿಎಸ್‌ಎಸ್‌ನಲ್ಲಿ ಕಳ್ಳತನ; ಈರ್ವರ ಬಂಧನ

  300x250 AD

  ಹೊನ್ನಾವರ: ತಾಲೂಕಿನ ಚಿಕ್ಕನಕೋಡ ವ್ಯವಸಾಯ ಸೇವಾ ಸಹಕಾರಿ ಸಂಘದ ಶಟರ್ ಹಾಗೂ ಬಾಗಿಲಕ್ಕೆ ಅಳವಡಿಸಿದ್ದ ಬೀಗವನ್ನು ಮುರಿದು ಕಳುವು ಮಾಡಲು ಬಂದಿದ್ದ ಆರೋಪಿಗಳನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
  ಶುಕ್ರವಾರ ಮಧ್ಯರಾತ್ರಿಯ ಅವಧಿಯಲ್ಲಿ ಚಿಕ್ಕನಕೋಡ ವ್ಯವಸಾಯ ಸೇವಾ ಸಹಕಾರಿ ಸಂಘದ ಶೆಟರ್ ಹಾಗೂ ಬಾಗಿಲಿಗೆ ಅಳವಡಿಸಿದ್ದ ಬೀಗವನ್ನು ಮುರಿದು ಅಂಕೋಲಾ ಬಬ್ರುವಾಡದ ಪ್ರಶಾಂತ ನಾಯ್ಕ ಮತ್ತು ಯಲ್ಲಾಪುರದ ಪ್ರಸನ್ನ ಜಾಧವ ಬ್ಯಾಂಕಿನ ಒಳಗೆ ಹೋಗಿ ಕಛೇರಿಯೊಳಗಿದ್ದ ಕಪಾಟುಗಳ ಬಾಗಿಲು ಒಡೆದು, 5,350 ನಗದು ಹಣವನ್ನು ಕಳವು ಮಾಡಿಕೊಂಡು ಹೋಗುತ್ತಿರುವಾಗ ಪ್ರಶಾಂತ ನಾಯ್ಕ ಸ್ಥಳೀಯರಿಗೆ ಸಿಕ್ಕಿಬಿದ್ದಿದ್ದಾನೆ.
  ಇದೇವೇಳೆ ಇನ್ನೋರ್ವ ಆರೋಪಿ ಕಂಪೌಡ್ ಜಿಗಿದು ನಾಪತ್ತೆಯಾಗಿದ್ದ. ಪ್ರಸನ್ನ ಜಾಧವನನ್ನ ಹಡಿನಬಾಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕರು ತಡೆದು, ಪೊಲೀಸರಿಗೆ ಒಪ್ಪಿಸಿದರು. ಘಟನೆಗೆ ಸಂಬಂಧಪಟ್ಟಂತೆ ಸಂಘದ ಮುಖ್ಯ ಕಾರ್ಯನಿರ್ವಾಹಕ ವಸಂತ ನಾಯ್ಕ ಮಾವಿನಕುರ್ವ ಇವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top