ಶಿರಸಿ :ನಗರದ ಪ್ರತಿಷ್ಠಿತ ಎಂ ಇ ಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ವನಮಹೋತ್ಸವ ಕಾರ್ಯಕ್ರಮವು ಆ.27, ಶನಿವಾರದಂದು ಜರುಗಿತು.
ಕಾಲೇಜಿನ ಎನ್ ಸಿ ಸಿ, ರೆಡ್ ಕ್ರಾಸ್ ವಿಭಾಗವು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದ ಪ್ರಾಚಾರ್ಯ ಡಾ ಟಿ ಎಸ್ ಹಳೆಮನೆ ಗಿಡ ಮರಗಳಿಲ್ಲದೆ ಯಾವ ಪ್ರಾಣಿಯೂ ಪ್ರಪಂಚದಲ್ಲಿ ಬದುಕಲಾರದು,ನಾವು ವನ್ಯ ಸಂಪತ್ತನ್ನು, ಕಾಡು ಮೇಡುಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು. ಮುಂದಿನ ಪೀಳಿಗೆಗೆ ನಾವು ನೀಡುವ ಕೊಡುಗೆ ಇದಾಗಲಿದೆ ಎಂದರು. ಕಾಲೇಜಿನ ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ವಿವಿಧ ಬಗೆಯ ಸಸಿ ನೆಟ್ಟರು.