ಹಳಿಯಾಳ: ಹರಿಯಾಣಾದ ರೊಹಟಕನಲ್ಲಿ ನಡೆಯುತ್ತಿರುವ 20 ವರ್ಷದೊಳಗಿನ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ತಾಲೂಕಿನ ಕುಸ್ತಿ ಅಖಾಡದ ಕುಸ್ತಿಪಟು ಕು. ಗಾಯತ್ರಿ ರಮೇಶ ಸುತಾರ ಇವರು 53 ಕೆ.ಜಿ.ಯಲ್ಲಿ ಬಂಗಾರದ ಪದಕವನ್ನು ಮುಡಿಗೇರಿಸಿಕೊಂಡು, ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಇವರಿಗೆ ಹಳಿಯಾಳದ ಜನತೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಕುಸ್ತಿ ಸ್ಪರ್ಧೆ:ಬಂಗಾರ ಬಾಚಿಕೊಂಡ ಗಾಯತ್ರಿ
