• Slide
  Slide
  Slide
  previous arrow
  next arrow
 • ಆ.28 ಕ್ಕೆ ‘ಫಿಪ್ತ್ ಜೂನ್’ ಹಿಂದಿ ಕಿರುಚಿತ್ರ ಬಿಡುಗಡೆ

  300x250 AD

  ಕಾರವಾರ: ಹಾರರ್ ಥ್ರಿಲ್ಲರ್- ರೊಮ್ಯಾಂಟಿಕ್ ಚಿತ್ರಕಥೆಯುಳ್ಳ ‘ಫಿಪ್ತ್ ಜೂನ್’ ಹಿಂದಿ ಕಿರು ಚಿತ್ರವು ಆ.28ರಂದು ‘ಮೈ ಪ್ರೊವಿಸೋ’ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಳ್ಳುತ್ತಿದೆ.
  ಈ ಕುರಿತು ಜಿಲ್ಲಾ ಪತ್ರಿಕಾ ಭವನದಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಕಿರುಚಿತ್ರದ ನಿರ್ದೇಶಕ ಸಂದೇಶ ನಾಯ್ಕ, ನಗರದ ಅಜ್ವಿ ಓಶಿಯನ್, ಕಡವಾಡ- ಸುಂಕೇರಿ ಸೇತುವೆ, ಸದಾಶಿವಗಡ ಹಾಗೂ ಗೋವಾ ಭಾಗದಲ್ಲಿ ಈ ಕಿರುಚಿತ್ರದ ಚಿತ್ರೀಕರಣ ಮಾಡಲಾಗಿದೆ. ಈಗ ಬಿಡುಗಡೆಗೊಳ್ಳುತ್ತಿರುವುದು ಚಿತ್ರದ ಮೊದಲ ಭಾಗವಾಗಿದ್ದು, ಎರಡನೇ ಭಾಗ ಕೂಡ ತಯಾರಿಯಲ್ಲಿದೆ ಎಂದು ತಿಳಿಸಿದರು.
  ತಿರಮಲ್ಲ ತಿರುಪತಿ ಮಲ್ಟಿಸ್ಟೇಟ್ ಕೋ- ಆಪ್ ಕ್ರೆಡಿಟ್ ಸೊಸೈಟಿ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಸಮೀಕ್ಷಾ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಹುಲ್ ಮಾಳ್ಸೇಕರ ಹಾಗೂ ಸಹನಾ ಗುನಗಿ ನಾಯಕ- ನಟಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸೋನಂ ವಡ್ಡರ, ರಿಚಲ್ ಬಾಂದೇಕರ, ರಾಜೇಶ ಬಾಂದೇಕರ, ಸೂರಜ ಶಿರೋಡಕರ, ಮಾಲ್ತೇಶ ಕುಡಾಳಕರ, ಆದರ್ಶ ಕೃಷ್ಣಾಪುರ, ಮಂದರ್ ವೇರ್ಣೇಕರ, ಪ್ರಿಯಾಂಕಾ ನಾಯಕ ಚಿತ್ರದಲ್ಲಿ ವಿವಿಧ ಪಾತ್ರಗಳನ್ನ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top