Slide
Slide
Slide
previous arrow
next arrow

ಕೇಂದ್ರ ಸರಕಾರಕ್ಕೆ ಡಾ.ರವಿಕಿರಣ ಪಟವರ್ಧನ್ ಪತ್ರ; ಶಿರಸಿಯಲ್ಲಿ ಪೆಟ್ರೋಲ್/ಡಿಸೇಲ್ ದರದಲ್ಲಿ ರೂ.1 ರಷ್ಟು ಇಳಿಕೆ

300x250 AD

ಶಿರಸಿ: ಸಾಮಾನ್ಯ ವ್ಯಕ್ತಿಯೊಬ್ಬರ ಸಮಾಜಮುಖಿ ಚಿಂತನೆಗೆ ಕೇಂದ್ರ ಸರಕಾರ ಸ್ಪಂದಿಸಿ, ಕೂಡಲೇ ಕ್ರಮ ಕೈಗೊಂಡು ದೇಶಕ್ಕಾಗುತ್ತಿದ್ದ ಹಾನಿಯನ್ನು ತಪ್ಪಿಸಿ, ಜನಸಾಮಾನ್ಯರ ಆಶೋತ್ತರಗಳಿಗೆ ಧ್ವನಿಯಾಗಿದೆ.

ಸದಾ ಜನಪರ, ಸಮಾಜಮುಖಿ ಚಿಂತನೆಗಳಿಂದ ಗುರುತಿಸಿಕೊಂಡಿರುವ ಶಿರಸಿಯ ಖ್ಯಾತ ಆಯುರ್ವೇದ ವೈದ್ಯರಾದ ಡಾ.ರವಿಕಿರಣ ಪಟವರ್ಧನ, ಕಳೆದ ಜೂನ್ ಮೊದಲ ವಾರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ರಾಜ್ಯದಲ್ಲಿ ಶಿರಸಿಯಲ್ಲಿನ ಅತಿ ಹೆಚ್ಚು ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಉಲ್ಲೇಖಿಸಿ ಪತ್ರ ಬರೆದಿದ್ದರು. ಜೊತೆಗೆ ದರವನ್ನು ಕಡಿಮೆ ಮಾಡಲು ಮಾರ್ಗದ ಮಾಹಿತಿಯನ್ನೂ ನೀಡಿದ್ದರು. ಆ ಕುರಿತಾಗಿ ಸದರಿ ವಿಷಯವನ್ನು ಪೆಟ್ರೋಲಿಯಂ ಸಚಿವಾಲಯಕ್ಕೆ ವರ್ಗಾಯಿಸಲಾಗಿದೆ ಎಂಬ ಉತ್ತರ ಹಣಕಾಸು ಸಚಿವಾಲಯದಲ್ಲಿಂದ ಬಂದಿತ್ತು.

ಪ್ರಸ್ತುತ ಇಂಡಿಯನ್ ಆಯಿಲ್ ಕಂಪನಿಯಿಂದ ಡಾ. ಪಟವರ್ಧನ ಅವರಿಗೆ ಪ್ರತ್ಯುತ್ತರ ಬಂದಿದ್ದು, ಅದರಲ್ಲಿ ಕೇಂದ್ರ ಸರಕಾರದ ಪೆಟ್ರೋಲಿಯಂ/ನ್ಯಾಚುರಲ್ ಗ್ಯಾಸ್ ಇಲಾಖೆಗೆ ಡಾ. ಪಟವರ್ಧನ್ ಬರೆದ ಪತ್ರದ ಸಾರಾಂಶವನ್ನು ಉಲ್ಲೇಖಿಸಿ, ಅವರು ಉಲ್ಲೇಖಿಸಿದಂತೆ ಮಂಗಳೂರಿನಿಂದ ಶಿರಸಿಗೆ ಬರುತ್ತಿದ್ದ ಪೆಟ್ರೋಲ್/ಡಿಸೇಲ್ ಬದಲಾಗಿ ಹುಬ್ಬಳ್ಳಿಯಿಂದ ಸರಬರಾಜು ಮಾಡಲಾಗುವುದು ಎಂಬ ಮಾಹಿತಿ ನೀಡಿದ್ದಾರೆ. ಆ ಮೂಲಕ ಶಿರಸಿಯಲ್ಲಿ ಅಂದಾಜು ಪೆಟ್ರೋಲ್ ಪ್ರತಿ ಲೀಟರ್ ಗೆ ರೂ.1.19 ಮತ್ತು ಡೀಸೆಲ್ ರೂ. 1.01 ಗಳಷ್ಟು ಕಡಿಮೆಯಾಗಲಿದೆ.

ಜನಪರ ಕಾಳಜಿಯ ಡಾಕ್ಟರ್: ಡಾಕ್ಟರ್ ರವಿಕಿರಣ ಪಟವರ್ಧನ್ ಅವರು ತಮ್ಮ ಜನಪರ, ಸಮಾಜಮುಖಿ ಕಾರ್ಯಗಳಿಂದ ನಾಡಿನ ಜನರ ಮನಗೆದ್ದಿದ್ದಾರೆ. ಸರಕಾರದ ಯೋಜನೆಗಳ ಮಾಹಿತಿ, ಸರಕಾರದಿಂದ ಜನರಿಗೆ ಲಭ್ಯವಿರುವ ಇನ್ಶ್ಯುರೆನ್ಸ್ ಮಾಹಿತಿ, ರಕ್ತದಾನಿಗಳ ಮಾಹಿತಿ ಸೇರಿದಂತೆ ಸಾಕಷ್ಟು ಜನಪರ ಕಾರ್ಯವನ್ನು ಮಾಡುತ್ತಿದ್ದು, ಗೋಕರ್ಣದ ಕೋಟಿತೀರ್ಥದ ಶುದ್ಧಿಕರಣಕ್ಕೆ ಸಂಬಂಧಿಸಿ ಸಹ, ಕೇಂದ್ರ ಸರಕಾರಕ್ಕೆ ಪತ್ರಮುಖೇನ ಆಗ್ರಹಿಸಿ, ಉತ್ತರವನ್ನು ಪಡೆದಿದ್ದರು. ಈಗೆಲ್ಲರ ಸಹಕಾರದಿಂದ ಕೋಟಿತೀರ್ಥ ಸಹ ಶುದ್ಧವಾಗಿದೆ. ಜನರ ಆರೋಗ್ಯದ ಜೊತೆಗೆ ಸಮಾಜದ ಆರೋಗ್ಯವನ್ನೂ ಕಾಳಜಿ ಮಾಡುವ ಡಾಕ್ಟರ್ ಕಾರ್ಯ ಶ್ಲಾಘನೀಯ ಎಂಬುದು ಜನಸಾಮಾನ್ಯರ ಮಾತಾಗಿದೆ.

300x250 AD

Share This
300x250 AD
300x250 AD
300x250 AD
Back to top