• Slide
    Slide
    Slide
    previous arrow
    next arrow
  • ಮೂಲಭೂತ ಸೌಕರ್ಯ, ಭೂಮಿ ಹಕ್ಕಿನಿಂದ ವಂಚಿತರಾದವರಿಂದ ಹಕ್ಕಿಗಾಗಿ ನಡಿಗೆ

    300x250 AD

    ಶಿರಸಿ: ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಇರುವ ಮನೆಗಳಲ್ಲಿ ಶೇ. 27.25 ರಷ್ಟು ಕುಟುಂಬಗಳಿಗೆ ಶೌಚಾಲಯವಿಲ್ಲ, ನಿವೇಶನಹಕ್ಕು ಇಲ್ಲದಿರುವ ಕುಟುಂಬ ಶೇ 34, ಗ್ರಾಮ ಪಂಚಾಯಿತಿಯಲ್ಲಿ ಇರುವ ಒಟ್ಟು ಕುಟುಂಬಗಳಲ್ಲಿ ಶೇ.30 ರಷ್ಟು ಅರಣ್ಯ ಅತಿಕ್ರಮಣದಾರರ ಕುಟುಂಬ. ಒಟ್ಟು 95 ಮಜರೆ ಹೊಂದಿರುವ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 75ರಷ್ಟು ಮಜರೆಗಳಲ್ಲಿ ಡಾಂಬರೀಕರಣ ಮತ್ತು ಕಢೀಕರಣ ಇಲ್ಲವಾಗಿದೆ. 20 ಕ್ಕೂ ಮಿಕ್ಕಿ ಕಾಲುಶಂಕ ಅವಶ್ಯಕತೆ ಇರುತ್ತದೆ. ಇದು ಮೂಲಭೂತ ಸೌಲಭ್ಯ ವಂಚಿತ , ದೇವನಳ್ಳಿ ಗ್ರಾಮ ಪಂಚಾಯಿತಿಯ ಚಿತ್ರಣ.

    ಸ್ವತಂತ್ರ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ 75 ಗ್ರಾಮ ಪಂಚಾಯತದಲ್ಲಿ ಭೂಮಿ ಹಕ್ಕು ಮತ್ತು ಮೂಲಭೂತ ಸೌಕರ್ಯಕ್ಕಾಗಿ ‘ಹಳ್ಳಿ ಕಡೆ ನಡಿಗೆ’ ಜಿಲ್ಲಾ ಮಟ್ಟದ ಉದ್ಘಾಟನೆ ಕಾರ್ಯಕ್ರಮ ಜರಗಿಸುತ್ತಿರುವ ತಾಲೂಕಿನ, ದೇವನಳ್ಳಿ ಗ್ರಾಮ ಪಂಚಾಯಿತಿಯ ಸ್ಥಿತಿ-ಗತಿಯ ಚಿತ್ರಣವನ್ನು ಜಿಲ್ಲಾ ಅರಣ್ಯ ಭೂಮಿ ಹಕ್ಕು ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಮೇಲಿನ ಅಂಕೆ ಅಂಶಗಳನ್ನು ಬಿಡುಗಡೆಗೊಳಿಸಿದರು.

    ಗ್ರಾಮ ಪಂಚಾಯತದಲ್ಲಿ ಅಜಮಾಸ 3300 ಜನಸಂಖ್ಯೆ ಹೊಂದಿದ್ದು, ಅವುಗಳಲ್ಲಿ ಅರಣ್ಯ ಭೂಮಿ ಹಕ್ಕು ಮಂಜೂರಿಗೊಳ್ಳದ ಅರಣ್ಯ ಅತಿಕ್ರಮಣದಾರರು 363(ಅರ್ಜಿ ಸಲ್ಲಿಸದವರು ಸೇರಿ) ಕುಟುಂಬ, ಗ್ರಾಮ ಪಂಚಾಯತ ಮಟ್ಟದಲ್ಲಿ ಸಾಮಾನ್ಯ ಮಾಹಿತಿ ದಾಖಲೆಯಲ್ಲಿ 251 ಕುಟುಂಬಗಳಿಗೆ ಶೌಚಾಲಯ ಇಲ್ಲದಿರುವ ಅಂಶಗಳು ದಾಖಲಿಸಲ್ಪಟ್ಟಿರುವುದು ಗ್ರಾಮ ಪಂಚಾಯಿತಿಯ ಸಾಮಾಜಿಕ ಸ್ವಾಸ್ಥವನ್ನ ಪ್ರತಿಬಿಂಬಿಸುತ್ತಿದೆ ಎಂದು ಅವರು ಹೇಳಿದರು.

    300x250 AD

    ಗ್ರಾಮ ಪಂಚಾಯಿತಿಯ ಭೌಗೋಳಿಕ ಕ್ಷೇತ್ರದಲ್ಲಿ ಶೇ. 80 ರಷ್ಟು ಗುಡ್ಡಗಾಡು ಅರಣ್ಯ ಪ್ರದೇಶದಿಂದ ಆವೃತ್ತವಾಗಿದ್ದು, ಸಂಪರ್ಕ ರಸ್ತೆಯಲ್ಲಿ ಬೀದಿ ದೀಪದ ಕಂಬ ಕೇವಲ 52 ಹೊಂದಿರುವುದು ಖೇದಕರ. ಸುಮಾರು 20 ಮಜಿರೆಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿರುವುದು ಉಲ್ಲೇಖನಾರ್ಹ ಎಂದು ಅವರು ಹೇಳಿದರು.

    ಹದಗೆಟ್ಟ ರಸ್ತೆಗಳು : ಜನಸಂಖ್ಯೆಯಲ್ಲಿ ಹೇಚ್ಚಿನ ಸಂಖ್ಯೆಯಲ್ಲಿರುವಂತಹ ಹುಕ್ಕಳಿಬೈಲ್, ಕುದ್ರಗೋಡ ಮತ್ತು ಕೆಳಸೆ ದೇವನಳ್ಳಿಯ ಸಂಪರ್ಕ ರಸ್ತೆ, ಜಲಗದ್ದೆ, ಸುಂಕದ ಗುಂಡಿ ರಸ್ತೆ, ಮೇಲಿನ ಕೋಡ್ಸಗದ್ದೆ, ಹುಕ್ಕಳಿ ಬೈಲ್ ಮುಂತಾದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ವಾಹನ ಓಡಾಟಕ್ಕೆ ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ ಎಂದು ರವೀಂದ್ರ ನಾಯ್ಕ ಹೇಳಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top