Slide
Slide
Slide
previous arrow
next arrow

ನಾಮಧಾರಿ ಗಣೇಶೋತ್ಸವ ಸಮಿತಿಯಿಂದ ಸಾಂಸ್ಕೃತಿಕ ಸ್ಪರ್ಧೆಗೆ ಮುಕ್ತ ಆಹ್ವಾನ

300x250 AD

ಅಂಕೋಲಾ: ನಾಮಧಾರಿ ಸಮಾಜದ ಗಣೇಶೋತ್ಸವ ಸಮಿತಿಯಿಂದ 24ನೇ ವರ್ಷದ ಗಣೇಶೋತ್ಸವ ಆಚರಣೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಲ್ಲ ಸಮಾಜದವರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಮೇಶ ಎಸ್.ನಾಯ್ಕ ಹೇಳಿದರು.
ಪಟ್ಟಣದ ಕಾಕರಮಠದ ನಾಮಧಾರಿ ಸಮುದಾಯ ಭವನದಲ್ಲಿ ಕಾರ್ಯಕ್ರಮದ ಕಾರ್ಡ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಈ ಒಂದು ಸ್ಪರ್ಧೆಗೆ ಎಲ್ಲ ಸಮಾಜದವರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದರು.
ಕರ್ನಾಟಕ ಆರ್ಯ ಈಡಿಗ (ನಾಮಧಾರಿ) ಸಂಘದ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ, 23 ವರ್ಷಗಳ ಹಿಂದೆ ಆರಂಭಗೊಂಡ ಗಣೇಶೋತ್ಸವ ಈ ಬಾರಿ 24ನೇ ವರ್ಷವನ್ನು ಪೊರೈಸಲಿದೆ. ಗಣಪತಿಯ ಜೊತೆಗೆ ವಿವಿಧ ಒಕ್ಕೂಟಗಳನ್ನು ಮಾಡಲಾಗುತ್ತಿದೆ. ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಿರಂತರ 6 ದಿನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸಭೆಯಲ್ಲಿ ತಾಲೂಕು ನಾಮಧಾರಿ ಆರ್ಯ ಈಡಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಆಚಾರಿ, ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಮೋಹನ ಎಚ್.ನಾಯ್ಕ, ಗೌರವಾಧ್ಯಕ್ಷ ಮಂಜುನಾಥ ವಿ.ನಾಯ್ಕ, ಪದಾಧಿಕಾರಿಗಳಾದ ಶಿವಾನಂದ ಎಲ್.ನಾಯ್ಕ, ನಾರಾಯಣ ಪಿ.ನಾಯ್ಕ, ರಾಜು ಬಿ.ನಾಯ್ಕ, ಸಂಜಯ ಎಂ.ನಾಯ್ಕ, ರಾಘವೇಂದ್ರ ವಿ.ನಾಯ್ಕ, ರಾಜೇಶ ಎಂ.ನಾಯ್ಕ, ನಾಗೇಶ ಎಸ್.ನಾಯ್ಕ, ವೆಂಕಪ್ಪ ನಾಯ್ಕ, ಗಣಪತಿ ನಾಯ್ಕ, ಜಟ್ಟಿ ನಾಯ್ಕ, ಏಕನಾಥ ನಾಯ್ಕ, ರಾಜು ನಾಯ್ಕ, ಗೋವಿಂದ್ರಾಯ ಕೆ.ನಾಯ್ಕ, ಪ್ರಶಾಂತ ನಾಯ್ಕ, ಉದಯ ನಾಯ್ಕ ಇತರರಿದ್ದರು.
ಸ್ಫರ್ಧಾ ಕಾರ್ಯಕ್ರಮ: ಸೆಪ್ಟೆಂಬರ್ 2ರಂದು ಭಕ್ತಿಗೀತೆ ಸ್ಪರ್ಧೆ ನಡೆಯಲಿದ್ದು, 1ರಿಂದ 7ನೇ ತರಗತಿ, ಸೆ.3ರಂದು 8ರಿಂದ 10ನೇ ತರಗತಿ, ಸೆ.4ರಂದು ಪಿಯುಸಿಯಿಂದ ಡಿಗ್ರಿ ವಿದ್ಯಾರ್ಥಿಗಳಿಗೆ ಮೂರು ವಿಭಾಗವಾಗಿ ಸ್ಪರ್ಧೆ ನಡೆಯಲಿದೆ. ಸೆ.5ರಂದು ನಾರಾಯಣಗುರು ಭಾವಚಿತ್ರವನ್ನು ರಂಗೋಲಿಯಲ್ಲಿ ಬಿಡಿಸುವ ಸ್ಪರ್ಧೆ ಇದ್ದು, ಇದಕ್ಕೆ ವಯಸ್ಸಿನ ಮಿತಿ ಇರದಿದ್ದರಿಂದ ಯಾರು ಬೇಕಾದರೂ ಭಾಗವಹಿಸಬಹುದು. ಸೆ.6ರಂದು ಬಣ್ಣದಿಂದ ಗಣಪತಿ ಚಿತ್ರವನ್ನು ಬಿಡಿಸುವುದು, ಸೆ.7ರಂದು 1ರಿಂದ 7ನೇ ತರಗತಿ, 8ರಿಂದ 10ನೇ ತರಗತಿ, ಪಿಯುಸಿಯಿಂದ ಡಿಗ್ರಿವರೆಗೆ ಮೂರು ವಿಭಾಗವಾಗಿ ಚುಕ್ಕಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದ್ದು, ಸೆ.1ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಎಲ್ಲ ವಿಭಾಗದಲ್ಲಿಯೂ ಪ್ರಥಮ ಸ್ಥಾನ ಪಡೆದವರಿಗೆ 1000, ದ್ವಿತೀಯ 500, ತೃತೀಯ 300, 2 ಸಮಾಧಾನಕರ 200 ರೂ., ಹಾಗೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು. ಎಲ್ಲ ಕಾರ್ಯಕ್ರಮಗಳು ನಾಮಧಾರಿ ಸಮುದಾಯ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಆರಂಭಗೊಳ್ಳಲಿದೆ. ಹೆಸರನ್ನು ನೊಂದಾಯಿಸಿಕೊಳ್ಳಲು ನಾಗರಾಜ ನಾಯ್ಕ ಮೊ.ಸಂ: 98443 84013, ಹೆಚ್ಚಿನ ಮಾಹಿತಿಗಾಗಿ ರಮೇಶ ಎಸ್.ನಾಯ್ಕ (ಮೊ.ಸಂ: 80886 02905), ಮಂಜುನಾಥ ವಿ.ನಾಯ್ಕ (ಮೊ.ಸಂ: 984438 8399), ರಾಜೇಶ ಎಂ.ನಾಯ್ಕ (ಮೊ.ಸಂ: 98806 98769)ಗೆ ಸಂರ್ಕಿಸಬಹುದಾಗಿದೆ.

300x250 AD
Share This
300x250 AD
300x250 AD
300x250 AD
Back to top