• Slide
    Slide
    Slide
    previous arrow
    next arrow
  • ಮೆಚ್ಚುಗೆ ಗಳಿಸಿದ ಬೊಂಬೆಯಾಟ ಪ್ರದರ್ಶನ

    300x250 AD

    ಶಿರಸಿ: ಅಳಿವಿನಂಚಿನಲ್ಲಿರುವ ಭಾರತೀಯ ಜಾನಪದ ಕಲೆಗಳಲ್ಲೊಂದಾಗಿರುವ ಬೊಂಬೆಯಾಟವನ್ನು ಮಾರಿಕಾಂಬಾ ದೇವಸ್ಥಾನದ ಸಭಾಭವನದಲ್ಲಿ ಶಿಕ್ಷಕ ಹಾಗೂ ಕಲೆಗಾರ ಮನೋಜ ಪಾಲಕರ ಮತ್ತವರ ತಂಡದವರು ಆಡಿ ತೋರಿಸುವ ಮೂಲಕ ನೆರೆದ ನೂರಾರು ಜನರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು.

    ಬೊಂಬೆಯಾಟದಲ್ಲಿ ಗಣಪತಿ ಮಹಿಮೆ ಹಾಗೂ ಕೊಲ್ಲೂರು ಮೂಕಾಂಬಿಕೆಯ ಪ್ರದರ್ಶನ ಮಾಡಲಾಯಿತು. 9 ಗೊಂಬೆಗಳಲ್ಲಿ ಪ್ರದರ್ಶನ ಕಂಡ ಬೊಂಬೆಯಾಟಕ್ಕೆ ಮನಸೋತ ಜನರು ಜಾನಪದ ಲೋಕದಲ್ಲಿ ಕೆಲಕಾಲ ಮೈಮರೆತು ಹೋದರು. ಈ ಕಾರ್ಯಕ್ರಮದ ಪೂರ್ವದಲ್ಲಿ ಯಕ್ಷಗಾನ ಬಾಲ ಪ್ರತಿಭೆ ತುಳಸಿ ಹೆಗಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಾರಿಕಾಂಬಾ ದೇವಾಲಯದ ಅಧ್ಯಕ್ಷ ರವಿ ನಾಯ್ಕ, ಡಾ.ವೆಂಕಟರಮಣ ಹೆಗಡೆ, ಪ್ರಭಾಕರ ಜೊಗಳೇಕರ್, ಸಿದ್ದಪ್ಪ ಬಿರದಾರ, ಶ್ರೀಧರ ಗುಡಿಗಾರ, ಡಿ.ಎಸ್.ನಾಯ್ಕ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ವೆಂಕಟರಮಣ ಹೆಗಡೆ, ಬೊಂಬೆಯಾಟದಂತಹ ಅಪರೂಪದ ಕಲೆಯನ್ನು ಮತ್ತೆ ಜಾನಪದ ಲೋಕಕ್ಕೆ ಪರಿಚಯಿಸುತ್ತಿರುವ ಮನೋಜ ಮತ್ತವರ ತಂಡದ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ನಾವು ನಮ್ಮ ಆರೋಗ್ಯ ಕಾಪಡಿಕೊಳ್ಳಬೇಕಾದಲ್ಲಿ ದಿನಕ್ಕೆ ಆರು ತಾಸು ನಿದ್ದೆ, ನಾಲ್ಕು ಲೀಟರ್ ನೀರು, ಎರಡು ಬಾರಿ ಪ್ರಾರ್ಥನೆ, ಎರಡು ಬಾರಿ ಆಹಾರ ಹಾಗೂ ವಾರಕ್ಕೆ ಒಮ್ಮೆ ಉಪವಾಸ ಮಾಡಬೇಕೆಂದು ಆರೋಗ್ಯದ ಗುಟ್ಟನ್ನು ಹೇಳಿದರು.

    300x250 AD

    ಲೇಖಕ ಡಿ.ಎಸ್.ನಾಯ್ಕ ಮಾತನಾಡಿ, ನಾವು ಎಷ್ಟೇ ಒತ್ತಡ ಬಂದರೂ ಸಮಾಧಾನದಿಂದ ಕೆಲಸ ಮಾಡಬೇಕೆಂದು ಹೇಳಿದರು. ಮಾರಿಕಾಂಬಾ ದೇವಾಲಯದ ಅಧ್ಯಕ್ಷ ರವಿ ನಾಯ್ಕ ಮಾತನಾಡಿ, ನಶಿಸಿ ಹೋಗುತ್ತಿರುವ ಬೊಂಬೆಯಾಟದಂತಹ ಕಲೆ ಮತ್ತೆ ನಮ್ಮ ದೇವಾಲಯದ ಮೂಲಕ ಜನಪ್ರಿಯತೆ ಪಡೆದುಕೊಳ್ಳುತ್ತಿರುವುದು ನಮಗೆ ಹೆಮ್ಮೆ ತಂದಿದೆ ಎಂದರು.

    ಶಿಕ್ಷಕ ಹಾಗೂ ಕಲೆಗಾರ ಮನೋಜ ಪಾಲೇಕರ್ ಸ್ವಾಗತಿಸಿದರೆ, ಶಿಕ್ಷಕ ದೇವಿದಾಸ ನಾಯ್ಕ ನಿರ್ವಹಣೆ ಮಾಡಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top