• Slide
    Slide
    Slide
    previous arrow
    next arrow
  • ಕೆಡಿಸಿಸಿ ಬ್ಯಾಂಕ್’ನಿಂದ ಸಹಾಯಧನದ ಚೆಕ್ ವಿತರಣೆ

    300x250 AD

    ಕುಮಟಾ: ಕೆಡಿಸಿಸಿ ಬ್ಯಾಂಕ್ ವತಿಯಿಂದ ನೀಡುವ ಪರಿಹಾರ ಹಾಗೂ ಸಹಾಯಧನದ ಚೆಕ್‌ನ್ನು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಜಿ.ಪಂ ಮಾಜಿ ಸದಸ್ಯ ಗಜಾನನ ಪೈ ಅವರು ತಾಲೂಕಿನ ಹತ್ತು ಫಲಾನುಭವಿಗಳಿಗೆ ಹಸ್ತಾಂತರಿಸಿದರು.

    ಪಟ್ಟಣದ ಕೆಡಿಸಿಸಿ ಬ್ಯಾಂಕ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ 10 ಫಲಾನುಭವಿಗಳಾದ ಮುಕುಂದ ಹಳ್ಕಾರ 5 ಸಾವಿರ, ಗಣೇಶ ಅಂಬಿಗ 3 ಸಾವಿರ, ಸಾವಿತ್ರಿ ಅಂಬಿಗ 5 ಸಾವಿರ, ಶ್ರೀಧರ ನಾಯ್ಕ 5 ಸಾವಿರ, ಕಾವ್ಯಾ ಮರಾಠಿ 5 ಸಾವಿರ, ಬೀರ ಗೌಡ 5 ಸಾವಿರ, ಶಶಾಂಕ ಅಂಬಿಗ 10 ಸಾವಿರ, ಇಂದಿರಾ ಗಾವಡಿ 5 ಸಾವಿರ, ಗಿಬ್ ಪ್ರೌಢಶಾಲೆಯ ಮುಖ್ಯಾಧ್ಯಾಪಕರಿಗೆ 10 ಸಾವಿರ, ಪಾರ್ವತಿ ನಾಯ್ಕ 5 ಸಾವಿರ ಒಟ್ಟೂ 63 ಸಾವಿರ ರೂ. ಚೆಕ್‌ಗಳನ್ನು ಹಸ್ತಾಂತರಿಸಿ ಮಾತನಾಡಿದ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಮತ್ತು ಜಿಪಂ ಮಾಜಿ ಸದಸ್ಯ ಗಜಾನನ ಪೈ, ಅನಾರೋಗ್ಯ ಪೀಡಿತರಿಗೆ, ಶಿಕ್ಷಣಕ್ಕೆ, ರೈತರಿಗೆ, ಕ್ರೀಡಾಕೂಟಗಳಿಗೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಕೆಡಿಸಿಸಿ ಬ್ಯಾಂಕ್ ವತಿಯಿಂದ ಸಾಕಷ್ಟು ಚೆಕ್‌ಗಳನ್ನು ನೀಡಲಾಗಿದೆ.

    ರೈತರ ಕಲ್ಯಾಣ ನಿಧಿಯ ಮೂಲಕ ಹಲವಾರು ಯೋಜನೆಗಳನ್ನು ರೈತರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕಾರ್ಮಿಕ ಸಚಿವ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ನೇತೃತ್ವದಲ್ಲಿ ಸಾಕಷ್ಟು ಫಲಾನುಭವಿಗಳಿಗೆ ಸಹಾಯ ಮಾಡಿದ್ದೇವೆ. ಅಲ್ಲದೇ ಇಲ್ಲಿನ ಕೆಡಿಸಿಸಿ ಬ್ಯಾಂಕ್‌ನ ನವೀಕೃತ ಕಟ್ಟಡ ನಿರ್ಮಾಣಕ್ಕೆ 2.4 ಕೋಟಿ ರೂ. ಹಣಕಾಸಿನ ಮಂಜೂರಾತಿಯಾಗಿದ್ದು, ಸದ್ಯದಲ್ಲಿಯೇ ಟೆಂಡರ್ ಕರೆಯಲಾಗುತ್ತದೆ. ಒಂದು ವರ್ಷದೊಳಗಡೆ ಕಟ್ಟಡ ನಿರ್ಮಾಣವಾಗಬೇಕೆಂದು ಅಧ್ಯಕ್ಷರು ಸೂಚನೆ ನೀಡಿದ್ದಾರೆ. ಕಷ್ಟದಲ್ಲಿರುವ 2 ಸೇವಾ ಸಹಕಾರಿ ಸಂಘಕ್ಕೆ 50 ಸಾವಿರ ಆರ್ಥಿಕ ಸಹಾಯಧನ ನೀಡಲಾಗಿದೆ. 5 ಸೇವಾ ಸಹಕಾರಿ ಸಂಘಕ್ಕೆ ತಲಾ 20 ಸಾವಿರ ಆರ್ಥಿಕ ಸಹಾಯ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

    300x250 AD

    ಈ ಸಂದರ್ಭದಲ್ಲಿ ಬಾಡ ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ಸುಬ್ರಾಯ ನಾಯ್ಕ, ಅಳಕೋಡ ಗ್ರಾಮ ಪಂಚಾಯತ ಸದಸ್ಯರಾದ ವಿನಾಯಕ ನಾಯ್ಕ, ವಿಷ್ಣು ಗೌಡ, ಶಾಖಾ ಸಲಹಾ ಸಮಿತಿ ಸದಸ್ಯರಾದ ಶ್ರೀಪಾದ ಭಟ್ಟ, ಸುರೇಶ ಪ್ರಭು, ಕಲಾಗಂಗೋತ್ರಿ ಅಧ್ಯಕ್ಷ ಶ್ರೀಧರ ನಾಯ್ಕ, ಪ್ರಮುಖರಾದ ವಿನಾಯಕ ನಾಯ್ಕ, ಕಾರ್ತಿಕ ಭಟ್ಟ ಇತರರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top