ಕಾರವಾರ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಬೆಳಗಾವಿ ಝೋನ್ ಕಬಡ್ಡಿ ಟೂರ್ನಮೆಂಟ್‌ನಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ತಂಡ ರನ್ನರ್- ಅಪ್ ಸ್ಥಾನ ಪಡೆದುಕೊಂಡಿದೆ.
ಕ್ರಿಮ್ಸ್ ವೈದ್ಯ ವಿದ್ಯಾರ್ಥಿಗಳಾದ ನಂದೀಶ, ಕಿರಣಕಬ್ಬೂರ, ಗಂಗಾಧರ, ಜೀವನ, ಕೌಶಿಕ, ಕಿರಣ, ವಿಶ್ವನಾಥ, ದೇವಿವರಪ್ರಸಾದ, ಕುಮಾರಸ್ವಾಮಿ, ಸ್ವರೂಪ ಈ ತಂಡದಲ್ಲಿದ್ದರು. ಮೊದಲನೇ ಪಂದ್ಯವನ್ನು ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕ್ವಾರ್ಟರ್ ಫೈನಲ್ಸ್ನಲ್ಲಿ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಸೆಮಿಫೈನಲ್ಸ್ನಲ್ಲಿ ಬೆಳಗಾವಿಯ ಸಿದ್ದಿವಿನಾಯಕ ಆಯುರ್ವೇದಿಕ್ ಕಾಲೇಜು, ತಂಡವನ್ನು ಸೋಲಿಸಿ, ಗದಗ ಜಿಮ್ಸ್ ನರ್ಸಿಂಗ್ ತಂಡದವರೊAದಿಗೆ ಇದ್ದು, ಎರಡನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿದ್ದಾರೆ.
ಮುಂದಿನ ಹಂತ ಇಂಟರ್‌ಝೋನಲ್ಸ್ ವಿಜಾಪುರದ ಡಾ.ಬಿ.ಎನ್.ಎಂ ಆಯುರ್ವೇದಿಕ್ ವೈದ್ಯಕೀಯ ಕಾಲೇಜಿನಲ್ಲಿ ಅ.11ರಿಂದ 12ರವರೆಗೆ ನಡೆಯಲಿದೆ. ಈ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಮುಖ್ಯಸ್ಥರು ಹಾಗೂ ನಿರ್ದೇಶಕರಾದ ಡಾ.ಗಜಾನನ ನಾಯಕ ಹಾಗೂ ಪ್ರಾಂಶುಪಾಲ ಡಾ.ಶಿವಕುಮಾರ ಜಿ.ಎಲ್. ಶುಭ ಹಾರೈಸಿದ್ದಾರೆ.