• Slide
    Slide
    Slide
    previous arrow
    next arrow
  • ಬಿ.ಪಿ.ಶಿವಾನಂದರಾವ್ ಸಾಹಿತ್ಯ ಸಂವಾದ:ಕವಿಗೋಷ್ಠಿ

    300x250 AD

    ಭಟ್ಕಳ: ತಾಲೂಕಾ ಕಸಾಪ ವತಿಯಿಂದ ಇಲ್ಲಿನ ಶಿರಾಲಿಯಲ್ಲಿ ಬಿ.ಪಿ.ಶಿವಾನಂದರಾವ್ ಅವರ ಸಾಹಿತ್ಯದ ಕುರಿತು ಸಂವಾದ ಮತ್ತು ಕವಿಗೋಷ್ಠಿ ನಡೆಯಿತು.

    ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಝಮೀರುಲ್ಲ ಷರೀಫ್ ಮಾತನಾಡಿ ಶಿವಾನಂದರಾವ್ ಅವರು ಜಿಲ್ಲೆಯ ಸಶಕ್ತ ಸಾಹಿತಿಗಳಾಗಿದ್ದು, ಅವರ ಕಥೆ, ಕಾದಂಬರಿ, ವೈಚಾರಿಕ ಲೇಕನಗಳ ಮೂಲಕ ಸಾಹಿತ್ಯಾಸಕ್ತನ್ನು ಚಿಂತನೆಗೆ ಹಚ್ಚಿದವರು ಎಂದರು. ಹಿರಿಯ ಸಾಹಿತಿ ಡಾ.ಆರ್.ವಿ.ಸರಾಫ್ ಮಾತನಾಡಿ, ಶಿವಾನಂದ ರಾವ್ ಅವರ ಮೂಲಕ ಮತ್ತಷ್ಟು ಕೃತಿಗಳು ಮೂಡಿಬಂದು ಸಾಹಿತ್ಯಾಸಕ್ತರನ್ನು ತಲುಪಲಿ ಎಂದು ನುಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ ಶಿವಾನಂದ ರಾವ್ ಅವರ ಸಾಹಿತ್ಯಿಕ ಸಾಧನೆಗಲ ಕುರಿತು ಮಾತನಾಡಿದರು.

    ಸಾಹಿತಿಗಳಾದ ಮಾನಾಸುತ, ಪ್ರೊ.ಆರ್.ಎಸ್.ನಾಯಕ,ಶ್ರೀಧರಶೇಟ್, ಎಂ.ಪಿ.ಭಂಡಾರಿ , ಗಣಪತಿ ಕಾಯ್ಕಣಿ ತಮ್ಮ ಕವಿತೆಗಳನ್ನು ವಾಚಿಸಿದರಲ್ಲದೇ ಶಿವಾನಂದರಾವ್ ಅವರ ಸಾಹಿತ್ಯದ ಕುರಿತು ಸಂವಾದ ನಡೆಸಿದರು. ಬಿ.ಪಿ.ಶಿವಾನಂದ ರಾವ್ ಅವರು ತಮ್ಮ ಸಾಹಿತ್ಯಿಕ ಜೀವನಕ್ಕೆ ಪ್ರೇರಣೆಯಾದ ಸಂಗತಿಗಳು ಹಾಗೂ ಕುವೆಂಪು, ಶಿವರಾಮ ಕಾರಂತರು, ಗೌರೀಶ ಕಾಯ್ಕಿಣಿ ಗೋಪಾಲಕೃಷ್ಣ ಅಡಿಗರನ್ನು ಅವರೊಂದಿಗೆ ಒಡನಾಡಲು ದೊರಕಿದ ಸಂದರ್ಭವನ್ನು ನೆನಪಿಸಿಕೊಂಡರಲ್ಲದೇ ತಮ್ಮ ಸಾಃಇತ್ಯ ರಚನೆಗೆ ಪ್ರೇರಣೆ ನಿಡಿದ ಜೀವನದ ಅನೇಕ ಸಮದರ್ಭದಗಳ ಕುರಿತು ಮಾತನಾಡಿದರು.

    300x250 AD

    ತಾಲೂಕಾ ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಸಾಹಿತಿಗಳೊಂದಿಗೆ ಸಂವಾದ ಮತ್ತು ಕವಿಗೋಷ್ಠಿಯಂತಹ ಕಾರ್ಯಕ್ರಮಗಳ ಮೂಲಕ ಸಾಹಿತಯಾಸಕ್ತರೆಲ್ಲ ಸಾಹಿತಿಗಳ ಬಳಿಯೇ ತೆರಳಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು ಸಾಹಿತಿಗಳ ಅನುಭವಗಳನ್ನು ಮಾರ್ಗದರ್ಶೀಯಾಗಿ ಪಡೆದುಕೊಳ್ಳಲು ಸಹಕಾರಿ ಎಂದರು.

    ಈ ಸಂದರ್ಭದಲ್ಲಿ ಬಿ.ಪಿ.ಶಿವಾನಂದರಾವ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸುಜ್ಞಾನ ಬೈಂದೂರ ಹಾಗೂ ಕುಟುಂಬದವರು, ಕಸಾಪ ಕಾರ್ಯದರ್ಶಿ ನಾರಾಯಣ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top