• Slide
  Slide
  Slide
  previous arrow
  next arrow
 • ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದೇಶಭಕ್ತಿಗೀತೆ ಸ್ಪರ್ಧೆ

  300x250 AD

  ಕಾರವಾರ: ರೋಟರಿ ಕ್ಲಬ್ ಆಫ್ ಕಾರವಾರ ಹಾಗೂ ಕ್ರಡಾಯ ಕಾರವಾರ ವತಿಯಿಂದ ರೋಟರಿ ಸಂಸ್ಥೆಯ ಕೃಷ್ಣಾನಂದ ಬಾಂದೇಕರ ಅವರ ತಂದೆ-ತಾಯಿ ಸುಮನ ಹಾಗೂ ಪುರಸಪ್ಪಾ ಬಾಂದೇಕರ ಅವರ ಸ್ಮರಣಾರ್ಥ 75ನೇ ಸ್ವಾತಂತ್ರ್ಯ ಅಮೃತೋತ್ಸವದ ಸಂದರ್ಭದಲ್ಲಿ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ದೇಶಭಕ್ತಿ ಗಾಯನ ಸ್ಪರ್ಧೆ ನಡೆಯಿತು.

  ಕಾರ್ಯಕ್ರಮವನ್ನು ಹೃಷಿಕೇಶ ಬಾಂದೇಕರರವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಪ್ರಾರಂಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ. ರಾಘವೇಂದ್ರ ಜಿ.ಪ್ರಭು ಸ್ವಾಗತಿಸುತ್ತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿದ್ಯಾರ್ಥಿಗಳು ದೇಶಾಭಿಮಾನವನ್ನು ಬೆಳೆಸಿಕೊಂಡು ದೇಶದ ಹಿತರಕ್ಷಣೆಗಾಗಿ ಶ್ರಮಿಸಲು ಕರೆಕೊಟ್ಟರು. ತಾಲೂಕಿನ ವಿವಿಧ ಶಾಲೆಗಳಿಂದ 35 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ ಪ್ರಥಮ ಬಹುಮಾನ ವಿನಿತಾ ಹೆಗಡೆ ಪಡೆದರು. ಇವರಿಗೆ ಪಾರಿತೋಶಕ, ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ನೀಡಲಾಯಿತು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ವಿತರಿಸಲಾಯಿತು.

  300x250 AD

  ನಿರ್ಣಾಯಕರಾಗಿ ಸಂಗೀತಾ ಬಾಂದೇಕರ ಹಾಗೂ ದೀಪ್ತಿ ಅರ್ಗೇಕರ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರು, ಕ್ರಡಾಯ ಸಂಸ್ಥೆಯ ಸದಸ್ಯರು, ಇನ್ಹರ್ ವ್ಹೀಲ್ ಸಂಸ್ಥೆಯ ಸದಸ್ಯರು, ರೋರ‍್ಯಾಕ್ಟ್ ಸದಸ್ಯರು, ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು. ರೋಟರಿ ಕಾರ್ಯದರ್ಶಿ ಗುರುದತ್ತ ಬಂಟ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಶೈಲೇಶ ಹಳದೀಪುರ ನಡೆಸಿಕೊಟ್ಟರು.

  Share This
  300x250 AD
  300x250 AD
  300x250 AD
  Leaderboard Ad
  Back to top