• Slide
    Slide
    Slide
    previous arrow
    next arrow
  • ನಿಲೇಕಣಿ ದೇವಾಲಯದಲ್ಲಿ ಸಂಭ್ರಮದ ಗಣೇಶೋತ್ಸವಕ್ಕೆ ಸಿದ್ಧತೆ

    300x250 AD

    ಶಿರಸಿ: ಶ್ರೀ ಶುಭಕೃತ್ ಸಂವತ್ಸರದ ಶ್ರೀ ಗಣೇಶ ಚತುರ್ಥಿ ಅಂಗವಾಗಿ ನಿಲೇಕಣಿಯ ಗಣೇಶ ಮಂದಿರದಲ್ಲಿ ಆ. 31, ಬುಧವಾರದಿಂದ ಸೆ.08 ಗುರುವಾರದವರಗೆ ಗಣೇಶ ಚತುರ್ಥಿಯ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

    ಭಾದ್ರಪದ ಶುಕ್ಲ ಚತುರ್ಥಿ ಆ. 31 ಬುಧವಾರ, ಮಧ್ಯಾಹ್ನ ಗಂಟೆ 12-30ಕ್ಕೆ ಚಂದನಾಭಿಷೇಕ ಸಹಸ್ರ ದೂರ್ವಾರ್ಚನೆ, ಉಪನಿಷತ್ ಪಠನಪೂರ್ವಕ ಶ್ರೀ ಪ್ರಸನ್ನ ಗಣಪತಿಯ ಮಹಾಪೂಜೆ ಭಾದ್ರಪದ ಶುಕ್ಲ ಸಪ್ತಮಿ ಶುಕ್ರವಾರ ಶ್ರೀ ಸತ್ಯ ಗಣಪತಿ ವೃತ, ಭಾದ್ರಪದ ಶುಕ್ಲ ಅಷ್ಟಮಿ ಶನಿವಾರ ಶ್ರೀ ಶನಿ ಕಥೆ, ಭಾದ್ರಪದ ಶುಕ್ಲ ನವಮಿ ರವಿವಾರ ಶ್ರೀ ಸತ್ಯನಾರಾಯಣ ವೃತ, ಭಾದ್ರಪದ ಶುಕ್ಲ ತೃಯೋದಶಿ ಗುರುವಾರ ಗಣಹವನ ಮತ್ತು ಶ್ರಿ ದೇವರಿಗೆ ಪಾಯಸ, ಕೊಟ್ಟೆ ಕಡುಬಿನ ನೈವೇದ್ಯ ಸಮರ್ಪಣೆ, ಶ್ರೀ ದೇವರ ಉತ್ಸವ ಮೂರ್ತಿಯ ಶೋಭಾಯಾತ್ರೆ ಮಂದಿರದ ಆವಾರದಲ್ಲಿ ಹಾಗೂ ಪಟ್ಟ ಕಾಣಿಕೆ ಸಮರ್ಪಣೆ, ಅಷ್ಟಾವಧಾನ ಸೇವೆ ಮತ್ತು ರಂಗಮಧ್ಯಸ್ಥಿತ ಶ್ರೀ ಪ್ರಸನ್ನ ಗಣಪತಿಯ ರಂಗಪೂಜೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

    ವಯಕ್ತಿಕ ರಂಗಪೂಜೆ ದಿನಾಂಕ ಸೆ. 01 ರಿಂದ ಸೆ. 07 ರವರೆಗೆ ನಡೆಯುತ್ತದೆ. ಮಧ್ಯಾಹ್ನ ಹಾಗೂ ಸಾಯಂಕಾಲ ರಂಗಪೂಜೆ ಸೇವೆ ಸಲ್ಲಿಸಬಹುದು. ಭಕ್ತಾಧಿಗಳು ಈ ಎಲ್ಲಾ ಸೇವೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕೋರಲಾಗಿದೆ.

    300x250 AD

    25ನೇ ವರ್ಧಂತಿ ಉತ್ಸವದ ಪ್ರಯುಕ್ತ ವಿಶೇಷ ಸೇವೆಗೆ ಅವಕಾಶ ಇದ್ದು, ಶ್ರೀ ದೇವರ 25ನೇ ವರ್ಷದ ವರ್ಧಂತಿ ಉತ್ಸವವನ್ನು ವಿಜೃಂಬಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ. ಆ ರಜತ ಉತ್ಸವದ ನೆನಪಿಗಾಗಿ ಶ್ರೀ ದೇವರಿಗೆ 250 ಗ್ರಾಂ. ತೂಕದ ಬಂಗಾರದ ಸರವನ್ನು ಸಮಸ್ತ ಭಕ್ತಾದಿಗಳು ಸಮರ್ಪಿಸಲು ಆಡಳಿತ ಮಂಡಳಿ ನಿರ್ಧರಿಸಿದ್ದು ಭಕ್ತಾದಿಗಳು ಶ್ರೀ ದೇವರ ಸಮರ್ಪಣೆ ಕಾರ್ಯಕ್ರಮದಲ್ಲಿ ಬಂಗಾರದ ಮೌಲ್ಯವನ್ನು ನಗದು ಅಥವಾ ಬಂಗಾರದ ರೂಪದಲ್ಲಿ ಸಮರ್ಪಿಸಬೇಕೆಂದು ಕೋರಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top