• Slide
    Slide
    Slide
    previous arrow
    next arrow
  • 75 ಗ್ರಾ.ಪಂ. ವ್ಯಾಪ್ತಿಯಲ್ಲಿ ಭೂಮಿ ಹಕ್ಕು, ಮೂಲ ಸೌಕರ್ಯಕ್ಕಾಗಿ ಹಳ್ಳಿ ಕಡೆ ನಡಿಗೆ

    300x250 AD

    ಶಿರಸಿ: ದೇಶದ 75 ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಗ್ರಾಮೀಣ ಭಾಗದ ಪ್ರಮುಖ ಸಮಸ್ಯೆಗಳನ್ನ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ 75 ನೇ ಸ್ವತಂತ್ರ ಅಮೃತ ಮಹೋತ್ಸವ, 75 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಭೂಮಿ ಹಕ್ಕು, ಮೂಲ ಸೌಕರ್ಯಕ್ಕಾಗಿ ಹಳ್ಳಿ ಕಡೆ ನಡಿಗೆ ಕಾರ್ಯಕ್ರಮವನ್ನ ಜಿಲ್ಲಾದ್ಯಂತ ಒಂದು ವರ್ಷದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವಿಂದ್ರ ನಾಯ್ಕ ತಿಳಿಸಿದ್ದಾರೆ.

      ಅವರು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ವಿವಿಧ ಸಂಘಟನೆಗಳ ಹಾಗೂ ಸಾಮಾಜಿಕ ಹೋರಾಟಗಾರರ ಮುಖಂಡರೊಂದಿಗೆ ‘ಹಳ್ಳಿಕಡೆ ನಡಿಗೆ’ ಲಾಂಛನವನ್ನ ಬಿಡುಗಡೆ ಮಾಡಿ ಕಾರ್ಯಕ್ರಮದ ವಿವರವನ್ನ ತಿಳಿಸಿದರು.

     ಜಿಲ್ಲಾದ್ಯಂತ ವಿವಿಧ ತಾಲೂಕಿನ 75 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಒಂದು ವರ್ಷ ನಿರಂತರ ಹಳ್ಳಿಕಡೆ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

    300x250 AD

    ಜಿಲ್ಲೆಯಲ್ಲಿನ ಸೌಕರ್ಯ ವಂಚಿತ ಸಮಸ್ಯೆಗಳು : ಉತ್ತರ ಕನ್ನಡ ಜಿಲ್ಲೆಯು ಭೌಗೋಳಿಕವಾಗಿ ಶೇ. 80 ರಷ್ಟು ಅರಣ್ಯ ಮತ್ತು ಗುಡ್ಡಗಾಡು ಪ್ರದೇಶದಿಂದ ಕೂಡಿರುವ ಹಿನ್ನೆಲೆಯಲ್ಲಿ 85ಸಾವಿರ ಕುಟುಂಬ ಅರಣ್ಯ ಹಾಗೂ ಹದಿನಾಲ್ಕು ಸಾವಿರ ಕುಟುಂಬ ಕಂದಾಯ, ಗೋಮಾಳ, ಗಾಂವಠನದಲ್ಲಿನ ವಸತಿ ಭೂಮಿ ಹಕ್ಕಿನ ಸಮಸ್ಯೆ, ಸುಮಾರು ಹದಿನಾಲ್ಕು ಸಾವಿರ ಕುಟುಂಬ ವಿವಿಧ ಯೋಜನೆಗಳಿಂದ ನಿರಾಶ್ರಿತರರ ಸಮಸ್ಯೆ, ಜಿಲ್ಲೆಯಲ್ಲಿನ ಸುಮಾರು ಒಂದು ಸಾವಿರದ ನಾಲ್ಕುನೂರು ಮಜರೆಗಳಿಗೆ ಸರ್ವಋತು ರಸ್ತೆಯ ಸಮಸ್ಯೆ, ಗ್ರಾಮೀಣ ಭಾಗದ ಶೇ. 8 ರಷ್ಟು ಕುಟುಂಬಗಳು ಶೌಚಾಲಯ ರಹಿತವಾಗಿರುವುದು, ಬೆಸಿಗೆಯಲ್ಲಿ ಗ್ರಾಮೀಣ ಭಾಗದ ನೂರಾರು ಮಜಿರೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಕಾಲುಶಂಕ, ಸೇತುವೆ, ವಿದ್ಯಾರ್ಥಿಗಳಿಗೆ ಬಸ್ ಅವ್ಯವಸ್ಥೆ ಮುಂತಾದ ಸಮಸ್ಯೆಗಳು ಸ್ವತಂತ್ರ ದೊರಕಿ 75 ವರ್ಷಗಳಾದರೂ ಇಂದಿಗೂ ವಿಶೇಷವಾಗಿ ಗ್ರಾಮೀಣ ಭಾಗದ ಜನರು ಸೌಲಭ್ಯ ವಂಚಿತವಾಗಿರುವುದರಿಂದ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ  ಜಿಲ್ಲಾದ್ಯಂತ ಸೌಕರ್ಯ ವಂಚಿತ ಪ್ರದೇಶಗಳಲ್ಲಿ ನಡಿಗೆ ಮೂಲಕ ಜನಜಾಗೃತಿ ಮಾಡುವ ಉದ್ದೇಶದಿಂದ ‘ಹಳ್ಳಿಕಡೆ ನಡಿಗೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು

      ವಿವಿಧ ಸಂಘಟನೆಗಳ ಪ್ರಮುಖರಾದ ಲಕ್ಷ್ಮಣ ಮಾಳ್ಳಕ್ಕನವರ, ರಾಜು ನರೇಬೈಲ್, ಉದಯ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top