ಭಟ್ಕಳ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುಗಳಿಕೋಣೆ ಗೋಪಾಲಕೃಷ್ಣ ದೇವಸ್ಥಾನದ ಸಭಾಗೃಹದಲ್ಲಿ ತಾಲೂಕಾ ಗಾಣಿಗ ಸೇವಾ ಸಂಘ, ಮುಗಳಿಕೋಣೆ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಶ್ರೀಗೋಪಾಲಕೃಷ್ಣ ಸಹಕಾರಿ ಪತ್ತಿನ ಸಂಘದ ಆಶ್ರಯದಲ್ಲಿ ಮುದ್ದು ರಾಧೆ- ಕೃಷ್ಣ ಸ್ಪರ್ಧೆ ನಡೆಯಿತು.
6 ವರ್ಷದ ಒಳಗಿನ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ಈ ಸ್ಪರ್ಧೆಯಲ್ಲಿ ಒಟ್ಟು 120ಕ್ಕೂ ಅಧಿಕ ಮುದ್ದು ರಾಧೆ- ಕೃಷ್ಣ ವೇಷ ಧರಿಸಿದ ಚಿಕ್ಕಮಕ್ಕಳು ಪಾಲಕರೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಮುದ್ದು ರಾಧೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸಮನ್ವಿ ಶೆಟ್ಟಿ, ದ್ವಿತೀಯ ಸ್ಥಾನವನ್ನು ಗಾನ್ವಿತಾ ಮೊಗೇರ, ತೃತೀಯ ಸ್ಥಾನವನ್ನು ಅದ್ವಿತ ಆಚಾರಿ, ಸಮಾಧಾನಕರ ಬಹುಮಾನವನ್ನು ದಿಶಾ ನಾಯ್ಕ ಮತ್ತು ಅನನ್ಯ ಶೆಟ್ಟಿ ಪಡೆದುಕೊಂಡರು. ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪುನರ್ವಿ ಶೆಟ್ಟಿ, ದ್ವಿತೀಯ ಸ್ಥಾನವನ್ನು ಅದ್ವಿಕ ಪ್ರವೀಣ, ತೃತೀಯ ಸ್ಥಾನವನ್ನು ಸಾನ್ವಿ ಶೆಟ್ಟಿ, ಸಮಾಧಾನಕರ ಬಹುಮಾನವನ್ನು ಸಾತ್ವಿಕ ಎಸ್. ಮತ್ತು ಶ್ರಾವಣ್ಯ ಶೆಟ್ಟಿ ಪಡೆದುಕೊಂಡರು. ಲಕ್ಕಿ ಡ್ರಾ ಮೂಲಕ ರಾಧೆ-ಕೃಷ್ಣ ಪೋಷಕರಿಗೆ ಆಕರ್ಷಕ ಬಹುಮಾನವನ್ನು ಸಹ ವಿತರಿಸಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನ್ಯೂ ಇಂಗ್ಲಿಷ್ ಇಂಗ್ಲಿಷ್ ಪಿಯು ಕಾಲೇಜ್‌ನ ಪ್ರಾಂಶುಪಾಲ ವೀರೆಂದ್ರ ಶ್ಯಾನಭಾಗ, ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ಶೆಟ್ಟಿ, ಗಾಣಿಗ ಸೇವಾ ಸಂಘದ ಅಧ್ಯಕ್ಷ ಸುಭಾಶ ಶೆಟ್ಟಿ, ಉಪಾಧ್ಯಕ್ಷೆ ರಾಧಾ, ಪ್ರಕಾಶ್ ಶಿರಾಲಿ, ಗಜಾನನ ಶೆಟ್ಟಿ, ರಾಜೇಶ ಶೆಟ್ಟಿ, ಕಿರಣ ಶೆಟ್ಟಿ, ಎಂ.ಆರ್.ಮುರುಡೇಶ್ವರ, ವಿಜೇತ ಶೆಟ್ಟಿ, ಅಜಯ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಮನೋಜ ಶೆಟ್ಟಿ ಮತ್ತು ಉಷಾ ಶೆಟ್ಟಿ ದಂಪತಿ ಕಾರ್ಯಕ್ರಮವನ್ನು ನಿರೂಪಿಸಿದರು. ರಾಜೇಶ ಶೆಟ್ಟಿ ವಂದಿಸಿದರು.