ಕಾರವಾರ: ಬಾಲಮಂದಿರ ಪ್ರೌಢಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಅದ್ಧೂರಿಯಿಂದ ಆಚರಿಸಲಾಯಿತು. ಆರಂಭದಲ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ನಂತರ ದತ್ತಗುರು ಬಂಡಿ ಮತ್ತು ಸುನೀಲ್ ನಾಯ್ಕ ಸಂಗಡಿಗರಿಂದ ಭಜನೆ, ನಾಗವೇಣಿ ವೆರ್ಣೆಕರ, ನಿಧಿ, ಶೋಭಾ ನಾರ್ವೆಕರ ಮತ್ತು ತಂಡದವರಿಂದ ಕೃಷ್ಣ ಭಜನೆ ಹಾಗೂ ಕು. ಆರಾದ್ಯ ತೆಂಡೂಲ್ಕರ ಮತ್ತು ತಂಡದವರಿಂದ ನೃತ್ಯರೂಪಕ ಪ್ರದರ್ಶನಗೊಂಡವು.
ಈ ಸಂದರ್ಭದಲ್ಲಿ ಶ್ರೀಕೃಷ್ಣ ಛದ್ಮವೇಶ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. 120ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಿರ್ಣಾಯಕರಾಗಿ ಹಿಂದೂ ಹೈಸ್ಕೂಲಿನ ಮುಖ್ಯಾಧ್ಯಾಪಕ ಅರುಣ ರಾಣೆ ಹಾಗೂ ಶಿಕ್ಷಕಿ ವನಿತಾ ಶೇಟ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ನಿರ್ಣಾಯಕರನನ್ನು ಸನ್ಮಾನಿಸಿದರು.
ಛದ್ಮವೇಷ ಸ್ಪರ್ಧೆಯಲ್ಲಿ ವಿಜೇತರು: ಎಲ್.ಕೆ.ಜಿ. ವಿಭಾಗದಲ್ಲಿ- ರಿಶಂತ್ ಆರ್. ಹೊನ್ನಾವರಕರ್ (ಪ್ರಥಮ), ಭಾರ್ಗವ ಜಿ. ನಾಯಕ (ದ್ವಿತೀಯ), ಅಥರ್ವ ಆರ್. ತಾಂಡೇಲ್ (ತೃತೀಯ), ಧ್ರುವ ಎಮ್. ಕೋಠಾರಕರ (ಸಮಾಧಾನಕರ) ಹಾಗೂ ಮಹಮ್ಮದ ಆರಿಬ್ ದೊಡ್ಮನಿ (ಸಮಾಧಾನಕರ). ಎಚ್.ಕೆ.ಜಿ. ವಿಭಾಗದಲ್ಲಿ- ಆದರ್ಶ ಬಿ. ಬಾಂದೇಕರ (ಪ್ರಥಮ), ವೃಜರಾಜ ಪಿ. ಮೆಹೊರ್ (ದ್ವಿತೀಯ), ಅಶ್ವಿನಿ ವಿ. ಪೂಜಾರ (ತೃತೀಯ), ರಾಧಾ ಡಿ. ಮಹಾಂತೆ (ಪ್ರಥಮ), ಎಚ್. ಆರ್. ನಿಮಿಚಂದ್ರ (ಸಮಾಧಾನಕರ), ಶ್ರೇಷ್ಠಾ ಎಸ್. ಹಲ್ದನಕರ (ಸಮಾಧಾನಕರ), ಹರ್ಷಿತಾ ಎಲ್. ಕಾಂಬಳೆ (ಸಮಾದಾನಕರ), ಶ್ರೀಕೃತಿ ಡಿ. ದುರ್ಗೇಕರ (ಪ್ರೋತ್ಸಾಹಕ), 1ನೇ ತರಗತಿ ವಿಭಾಗದಲ್ಲಿ- ಅಶ್ರಿತಾ ಆರ್. ಮ್ಹಾಳಸೇಕರ (ಪ್ರಥಮ), ದುರ್ಗಾಪ್ರಸಾದ ಎಸ್. ನಾಯ್ಕ (ದ್ವಿತೀಯ), ಲಿಖಿತಾ ಆರ್. ಖಾರ್ವಿ (ತೃತೀಯ), ಅಚಿಂತ್ಯಾ ಎಮ್. ಕಾರವಾರಕರ (ಸಮಾಧಾನಕರ) ಮತ್ತು ಗಾನವಿ ಜಿ. ನಾಯ್ಕ (ಸಮಾಧಾನಕರ).
ಶಿಕ್ಷಕರಾದ ಶೋಭಾ ನಾರ್ವೇಕರ ಮತ್ತು ಸವಿತಾ ಗುನಗಿ ಸ್ವಾಗತ ಕೋರಿದರು, ಮಹೇಶ ಭಟ್ ಪೂಜಾ ಕಾರ್ಯ ನೆರವೇರಿಸಿದರು. ಭಾಗ್ಯವತಿ ಕುರ್ಸೆ ಕಾರ್ಯಕ್ರಮ ನಿರ್ವಹಿಸಿದರು. ದಿವ್ಯಾ ರಾಣೆ ವಂದನಾರ್ಪಣೆ ಸಲ್ಲಿಸಿದರು. ನಜೀರುದ್ಧೀನ್ ಸೈಯದ್ ಬಹುಮಾನ ಘೋಷಿಸಿದರು. ಸುಲಕ್ಷಾ ಸೈಲ್, ಉದಯ ಆಚಾರಿ, ಮೇದಾ, ವಾಯ್ಲೆಟ್, ರತ್ನಾಕರ ಮಡಿವಾಳ, ಪ್ರಶಾಂತ ನಾಯ್ಕ, ಸುನೀಲ್ ನಾಯ್ಕ, ಸತೀಶ ನಾಯ್ಕ ಮೊದಲಾದವರು ಸಹಕರಿಸಿದರು.
ಬಾಲಮಂದಿರ ಪ್ರೌಢಶಾಲೆಯಲ್ಲಿ ಅದ್ಧೂರಿ ಶ್ರೀಕೃಷ್ಣ ಜನ್ಮಾಷ್ಠಮಿ
