Slide
Slide
Slide
previous arrow
next arrow

ಪಿಚ್‌ ಬ್ಲ್ಯಾಕ್ ಸಮರಾಭ್ಯಾಸಕ್ಕಾಗಿ ಆಸ್ಟ್ರೇಲಿಯಾ ತಲುಪಿದ ವಾಯುಸೇನಾ ತುಕಡಿ

300x250 AD

ನವದೆಹಲಿ: ಪಿಚ್ ಬ್ಲ್ಯಾಕ್ ವ್ಯಾಯಾಮದಲ್ಲಿ ಭಾಗವಹಿಸಲು ಭಾರತೀಯ ವಾಯುಪಡೆಯ ತುಕಡಿ  ಆಸ್ಟ್ರೇಲಿಯಾಗೆ ತಲುಪಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಭಾರತೀಯ ವಾಯುಪಡೆಯು, “ವಾಯುಸೇನಾ ತುಕಡಿಯು ವ್ಯಾಯಾಮ ಪಿಚ್ ಬ್ಲ್ಯಾಕ್ 2022 ರಲ್ಲಿ ಭಾಗವಹಿಸಲು ಆಸ್ಟ್ರೇಲಿಯಾವನ್ನು ತಲುಪಿದೆ. ಮುಂದಿನ ತಿಂಗಳ 8 ರವರೆಗೆ ಡಾರ್ವಿನ್‌ನಲ್ಲಿ ಸಮರಭ್ಯಾಸ ಆಯೋಜಿಸಲಾಗಿದೆ. ಇದು ರಾಯಲ್ ಆಸ್ಟ್ರೇಲಿಯನ್ ಏರ್ ಫೋರ್ಸ್ ಆಯೋಜಿಸುವ ದ್ವೈವಾರ್ಷಿಕ, ಬಹು-ರಾಷ್ಟ್ರೀಯ ವ್ಯಾಯಾಮವಾಗಿದೆ” ಎಂದಿದೆ.

ಈ ಸಮರಾಭ್ಯಾಸದಲ್ಲಿ ನೂರಕ್ಕೂ ಹೆಚ್ಚು ವಿಮಾನಗಳು ಮತ್ತು ವಿವಿಧ ವಾಯುಪಡೆಗಳ ಎರಡು ಸಾವಿರದ 500 ಸೇನಾ ಸಿಬ್ಬಂದಿ ಭಾಗವಹಿಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಭಾರತೀಯ ವಾಯುಪಡೆಯ ತುಕಡಿಯು 100 ಕ್ಕೂ ಹೆಚ್ಚು ವಾಯು ಯೋಧರನ್ನು ಒಳಗೊಂಡಿದೆ, ನಾಲ್ಕು Su-30 MKI ಫೈಟರ್‌ಗಳು ಮತ್ತು ಎರಡು C-17 ವಿಮಾನಗಳನ್ನು ನಿಯೋಜಿಸಲಾಗಿದೆ. ಉಭಯ ಪಡೆಗಳ ಯೋಧರು ಸಂಕೀರ್ಣ ಪರಿಸರದಲ್ಲಿ ಬಹು-ಡೊಮೇನ್ ವಾಯು ಯುದ್ಧ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತಾರೆ ಮತ್ತು ಉತ್ತಮ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದಿದೆ.

300x250 AD

ಕೃಪೆ : news13.in

Share This
300x250 AD
300x250 AD
300x250 AD
Back to top