ಕಾರವಾರ: ಎನ್‌ಎಮ್‌ಎಮ್‌ಎಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಫ್ರೆಶ್ ಮತ್ತು ರಿನೀವಲ್ ವಿದ್ಯಾರ್ಥಿಗಳ ಎನ್‌ಎಸ್‌ಪಿ- 2.0 ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳ ವೆಬ್‌ಸೈಟ್‌ನ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ.
2018, 2019, 2020ರ ಎನ್‌ಎಮ್‌ಎಮ್‌ಎಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಎಲ್ಲಾ ವಿದ್ಯಾರ್ಥಿಗಳು ಈಗಾಗಲೇ ತಮ್ಮ ಬಳಿ ಇರುವ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಬಳಸಿ ರಿನೀವಲ್ 2022- 23ರಲ್ಲಿ ಎಂಟ್ರಿ ಮಾಡುವುದು ಹಾಗೂ 2021ನೇ ಸಾಲಿನ ಎನ್‌ಎಮ್‌ಎಮ್‌ಎಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಈ ವೆಬ್‌ಸೈಟ್‌ನಲ್ಲಿ ಹೊಸದಾಗಿ ನೊಂದಾಯಿಸಿಕೊಂಡು (ಹೊಸ ರಿಜಿಸ್ಟ್ರೇಷನ್) ತಮ್ಮ ಮೊಬೈಲ್ ಸಂಖ್ಯೆಗೆ ಬರುವ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಬಳಸಿ ವಿದ್ಯಾರ್ಥಿವೇತನದ ಅರ್ಜಿಯನ್ನು ತುಂಬಿ ಸಬ್ಮಿಟ್ ಮಾಡಬೇಕಾಗಿರುತ್ತದೆ.
ಈ ವಿವರವನ್ನು ಅಪ್‌ಲೋಡ್ ಮಾಡುವುದಕ್ಕೆ ಸೆ.30 ಅಂತಿಮ ದಿನಾಂಕವಾಗಿರುತ್ತದೆ. ವಿದ್ಯಾರ್ಥಿಗಳು ಪ್ರಸ್ತುತ ಕಲಿಯುತ್ತಿರುವ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಕಾಲೇಜುಗಳ ಪ್ರಾಂಶುಪಾಲರಿAದ ಮಾಹಿತಿಯನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಫ್ಯಾಕ್ಸ್/ ದೂ.ಸಂ: 08386- 223429, ಇ-ಮೇಲ್: diet.kumta@gmail.com ಮತ್ತು ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯರು ಜಿಲ್ಲಾ ಶಿಕ್ಷಣ ಸಂಸ್ಥೆ ಕುಮಟಾ ಮತ್ತು ಜಿಲ್ಲಾ ನೋಡಲ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.