Slide
Slide
Slide
previous arrow
next arrow

ನವೀನ ಹಾದಿಮನಿ ವಿಧಿವಶ

300x250 AD

ದಾಂಡೇಲಿ: ನಗರದ ಗಣೇಶನಗರದ ನಿವಾಸಿ ಹಾಗೂ ಬಂಗೂರನಗರ ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಎಸ್.ವೈ ಹಾದಿಮನಿಯವರ ಸುಪುತ್ರರಾದ ನವೀನ್ ಶಿವಾನಂದ ಹಾದಿಮನಿಯವರು ಅಕಾಲಿಕವಾಗಿ ವಿಧಿವಶರಾಗಿದ್ದಾರೆ. ಮೃತರಿಗೆ 38 ವರ್ಷ ವಯಸ್ಸಾಗಿತ್ತು.
ಬಿ.ಇ ಪದವೀಧರರಾಗಿರುವ ನವೀನ್ ಶಿವಾನಂದ ಹಾದಿಮನಿಯವರು ಸರಳ ಸ್ನೇಹಮಯಿ ವ್ಯಕ್ತಿತ್ವದವರಾಗಿದ್ದರು. ಮೃತರು ತಂದೆ, ತಾತಿ ಮತ್ತು ತಮ್ಮ ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ನಗರದ ಗಣ್ಯರನೇಕರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top