• Slide
    Slide
    Slide
    previous arrow
    next arrow
  • ಇಟಗಿ ಗ್ರಾ.ಪಂ.ದಲ್ಲಿ ಕಾಂಗ್ರೆಸ್ ಸಂಘಟನಾ ಸಭೆ

    300x250 AD

    ಸಿದ್ದಾಪುರ: ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನಾ ಸಭೆಗಳು ವಿವಿಧ ಗ್ರಾಮ ಪಂಚಾಯತಗಳಲ್ಲಿ ನಡೆಯುತ್ತಿದೆ. ಅದರಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರರಾದ ವಸಂತ ನಾಯ್ಕರ ನಿರ್ದೇಶನದ ಮೇರೆಗೆ ಇಟಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಇಟಗಿ ಬೂತ್ ಸಭೆ ವರ್ತೆಕೊಡ್ಲಲ್ಲಿ ನಡೆಯಿತು.
    ಇಟಗಿ ಗ್ರಾಮ ಪಂಚಾಯತ ಉಸ್ತುವಾರಿಯಾದ ಉಮೇಶ್ ಎನ್.ನಾಯ್ಕ ಕಡಕೇರಿ ಉಪಸ್ಥಿಯಲ್ಲಿ ಸಭೆ ಸೇರಿ, ಪಕ್ಷದ ಸಂಘಟನೆ ಹಾಗೂ ಬಲವರ್ಧನೆ ಕುರಿತು ಚರ್ಚಿಸಲಾಯಿತು. ಮುಂಬರುವ ಚುನಾವಣೆ ಎದುರಿಸಲು ಕಾರ್ಯಕರ್ತರನು ಸಜ್ಜುಗೊಳಿಸಲು ಮಾಡಬಹುದಾದ ಕಾರ್ಯಕ್ರಮದ ಕುರಿತು ಚರ್ಚಿಸಿಲಾಯಿತು.
    ಈ ಸಭೆಯಲ್ಲಿ ಜಿ.ಪಂ ಮಾಜಿ ಸದಸ್ಯ ವಿ.ಎನ್.ನಾಯ್ಕ ಬೇಡ್ಕಣಿ, ಇಟಗಿ ಗ್ರಾಮ ಪಂಚಾಯತ ಅಧ್ಯಕ್ಷ ಸುರೇಂದ್ರ ಗೌಡ ಮರಲಗಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಲಲಿತ ನಾಯ್ಕ, ಘಟಕ ಅಧ್ಯಕ್ಷ ಗೋವಿಂದ ನಾಯ್ಕ ವಾಟಗಾರ್, ಪ್ರಮುಖರಾದ ರಾಮಚಂದ್ರ ನಾಯ್ಕ, ವೆಂಕಟ್ರಮಣ ನಾಯ್ಕ, ಮಹೇಶ್ ನಾಯ್ಕ, ಮಾಜಿ ಘಟಕ ಅಧ್ಯಕ್ಷ ನಾಗರಾಜ ನಾಯ್ಕ, ವಿ.ಬಿ.ನಾಯ್ಕ, ಇಟಗಿ ಬೂತ್ ಅಧ್ಯಕ್ಷ ಹುಸೇನ್ ಸಾಬ್, ಮಂಜು ಗೌಡ, ಎ.ಬಿ.ನಾಯ್ಕ ಕಡಕೇರಿ, ಗಣಪತಿ ಕಡಕೇರಿ, ಶಬ್ಬೀರ್ ಇಟಗಿ ಮೊದಲಾದ ಕಾರ್ಯಕರ್ತರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top