ಯಲ್ಲಾಪುರ : ಪಟ್ಟಣದ ವಿಶ್ವದರ್ಶನ ಕೇಂದ್ರೀಯ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತವಾಗಿ ಬಾಲಗೋಪಾಲ ಸ್ಪರ್ಧೆಯನ್ನು ನರ್ಸರಿ, ಎಲ್ ಕೆ ಜಿ. ಹಾಗೂ ಯು ಕೆ ಜಿ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು.
ವಿಶ್ವದರ್ಶನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ದತ್ತಾತ್ರೇಯ ಗಾಂವ್ಕರ್ ಮಾತನಾಡಿ, ಮಕ್ಕಳಲ್ಲಿ ಸ್ಪರ್ಧೆಯ ಮೂಲಕ ಆಸಕ್ತಿಯನ್ನು ಹುಟ್ಟಿಸುವ ಹಾಗೂ ತಮ್ಮ ಪ್ರತಿಭೆಯನ್ನು ತೋರಿಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು.
52 ವಿದ್ಯಾರ್ಥಿಗಳು ಬಾಲಗೋಪಾಲ ವೇಷಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬಾಲಗೋಪಾಲ ವೇಷ ಸ್ಪರ್ಧೆಯಲ್ಲಿ ವಿಜೇತರಾಗಿ ನರ್ಸರಿ ವಿಭಾಗದಲ್ಲಿ ತಕ್ಷ ನಾಯಕ- ಪ್ರಥಮ, ಸ್ಮೃತಿ ದೇವದಾಸ -ದ್ವಿತೀಯ, ಧೀಮಹಿ ಗೌತಮ್-ತೃತೀಯ ಸ್ಥಾನ ಗಳಿಸಿದರು.
ಎಲ್ ಕೆ ಜಿ. ವಿಭಾಗದಲ್ಲಿ ಸಾನ್ವಿಕಾ ಪಿ ಹೆಗಡೆ- ಪ್ರಥಮ, ವಿಮರ್ಶ ಯಶ್ _ ದ್ವಿತೀಯ, ಆಧ್ಯಲಕ್ಷ್ಮಿ ಭಟ್ಟ _ ತೃತೀಯ ಸ್ಥಾನ ಪಡೆದರು.
ಯು ಕೆ ಜಿ ವಿಭಾಗದಲ್ಲಿ ಅಪೇಕ್ಷಾ. ಎಸ್.ಭಟ್_ ಪ್ರಥಮ, ಅಥರ್ವ ಕೋಣೆಮನೆ ಹಾಗೂ ಸಿರಿ ಎನ್ ಭಟ್_ ದ್ವಿತೀಯ, ಆತ್ವಿ ಜಿ ದೇವಡಿಗ _ ತೃತೀಯ ಸ್ಥಾನ ಗಳಿಸಿದರು.
ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಗುರುರಾಜ ಕುಂದಾಪುರ, ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಉಪಸ್ಥಿತರಿದ್ದರು. ನಿರ್ಣಾಯಕರಾಗಿ ಡಾ .ದತ್ತಾತ್ರೇಯ ಗಾವ್ಕರ್, ಪ್ರಸನ್ನ ಹೆಗಡೆ ,ಶ್ಯಾಮಲಾ ಕೆರೆಗೆದ್ದೆ ಕಾರ್ಯನಿರ್ವಹಿಸಿದರು.