Slide
Slide
Slide
previous arrow
next arrow

ಸಾವಯವ ಒಕ್ಕೂಟದಿಂದ ಪಂಚಖಾದ್ಯ ಕಿಟ್ ಬಿಡುಗಡೆ ಸಮಾರಂಭ

300x250 AD

 ಶಿರಸಿ: ಗಣೇಶ ಚತುರ್ಥಿ ನಿಮಿತ್ತ ಉತ್ತರ ಕನ್ನಡ ಸಾವಯವ ಒಕ್ಕೂಟದಿಂದ ಪಂಚಖಾದ್ಯ ಕಿಟ್ ಬಿಡುಗಡೆ ಸಮಾರಂಭ, ಚಕ್ಕುಲಿ ಸ್ಪರ್ಧೆ, ಚಕ್ಕುಲಿ ಕಂಬಳ ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮ, ಆ.20, ಶನಿವಾರ ಮಧ್ಯಾಹ್ನ 3 ರಿಂದ 7 ರವರೆಗೆ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟಕರಾಗಿ ಖ್ಯಾತ ಚಲನಚಿತ್ರ ನಟರಾದ ನೀರ್ನಳ್ಳಿ ರಾಮಕೃಷ್ಣ ಉಪಸ್ಥಿತರಿದ್ದು, ಅಧ್ಯಕ್ಷತೆಯನ್ನು ಉತ್ತರ ಕನ್ನಡ ಸಾವಯವ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ಟ ಕೋಟೆಮನೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೃಷಿ ಇಲಾಖೆಯ ಉಪನಿರ್ದೇಶಕ ನಟರಾಜ ಆಗಮಿಸಲಿದ್ದಾರೆ.

ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಚಕ್ಕುಲಿ ಸ್ಪರ್ಧೆ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆ.20, ಶನಿವಾರ ಮಧ್ಯಾಹ್ನ 2.30 ಗಂಟೆಯಿಂದ ಚಕ್ಕುಲಿ ಸ್ಪರ್ಧೆಯನ್ನು ಆಯೋಜಿಲಾಗಿದೆ. ಚಕ್ಕುಲಿ ಸ್ಪರ್ಧೆಯ ನಿಯಮಗಳು ಈ ಕೆಳಗಿನಂತಿದೆ.

1) 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಸರಿ, ಬಿಳಿ, ಹಸಿರು ಬಣ್ಣದಿಂದ ಚಕ್ಕುಲಿ ಮಾಡಬೇಕು.

300x250 AD

2) ಗಣೇಶ ಚತುರ್ಥಿ ಹಬ್ಬದ ವಿಶೇಷ ತಿಂಡಿಯಾಗಿರುವುದರಿಂದ ಎಳೆಗಳ ಮೂಲಕ ಗಣಪತಿ ಆಕೃತಿಯಲ್ಲಿ ಚಕ್ಕುಲಿಯನ್ನು ಪ್ರದರ್ಶಿಸಬೇಕು. 

3) ಚಕ್ಕುಲಿಗೆ ಬಳಸುವ ಬಣ್ಣ ನೈಸರ್ಗಿಕವಾಗಿರಬೇಕು.

ಚಕ್ಕುಲಿ ಪ್ರದರ್ಶನ ಹಾಗೂ ಮಾರಾಟದಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಈ ಕೆಳಗಿನ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ ಹೆಸರು ನೋಂದಾಯಿಸಬಹುದು. ಅಜಯ್ ಭಟ್ –7022897751 / ವಿಕಾಸ – 9110401920 / ಗಣೇಶ – 7022330666 , ದೂರವಾಣಿ- 8660553054, 08384233333 ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗೆ (ಕಛೇರಿ ಸಮಯ ಮುಂಜಾನೆ 9.30- ಸಂಜೆ 7ರವರವರೆಗೆ )ಕರೆ ಮಾಡಬಹುದು.ಸ್ಪರ್ಧೆಯು ಶಿರಸಿ ಎ.ಪಿ.ಎಂ.ಸಿ. ಯಾರ್ಡ್ ನಲ್ಲಿರುವ ಉತ್ತರ ಕನ್ನಡ ಸಾವಯವ ಒಕ್ಕೂಟದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Share This
300x250 AD
300x250 AD
300x250 AD
Back to top