ಹೊನ್ನಾವರ: ಮನೆಯಲ್ಲಿ ಸೊಳ್ಳೆ ನಿವಾರಣೆಗೆ ಬಳಸಲು ತಂದಿಟ್ಟ ಗುಡ್ ನೈಟ್ ಲಿಕ್ವಿಡ್ ಕುಡಿದು ಎರಡು ವರ್ಷದ ಮಗು ಮೃತಪಟ್ಟಿರುವ ಧಾರುಣ ಘಟನೆ ತಾಲೂಕಿನ ಕಾವುರಿನಲ್ಲಿ ನಡೆದಿದೆ.
ತಾಲೂಕಿನ ಕಾವೂರಿನ ಆರವ ನಾಯ್ಕ (2) ಮೃತಪಟ್ಟಿರುವ ಬಾಲಕ. ಆಕಸ್ಮಿಕವಾಗಿ ಮನೆಯ ನೆಲದ ಮೇಲೆ ಇದ್ದಂತಹ ಆಲ್-ಔಟ್ ಮಸ್ಕಿಟೋ ಲಿಕ್ವಿಡ್ ಅನ್ನು ಕುಡಿದಿದ್ದಾನೆ. ಕೂಡಲೇ ಚಿಕಿತ್ಸೆಗಾಗಿ ತಾಲೂಕಿನ ಖಾಸಗಿ ಆಸ್ಪತ್ರೆಗೆ ಕರೆ ತಂದು ಹೆಚ್ಚಿನ ಚಿಕಿತ್ಸೆಗೆ ನೆರೆ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.