ಅಂಕೋಲಾ: ಯುವಜನಾಂಗಕ್ಕೆ ಕ್ರೀಡೆಯು ಒಗ್ಗಟ್ಟು, ದೈಹಿಕ ಸದೃಢತೆಯನ್ನು, ಮಾನಸಿಕ- ದೈಹಿಕ ಆರೋಗ್ಯವನ್ನು ನೀಡುತ್ತದೆ ಎಂದು ವಕೀಲ ನಾಗರಾಜ ನಾಯಕ ಹೇಳಿದರು.
ಅಮೃತ ಭಾರತಿಗೆ ಕನ್ನಡದಾರತಿ- ಅಮೃತ ಮಹೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಆಯೋಜಿಸಿದ್ದ ಹಗ್ಗ-ಜಗ್ಗಾಟ ಸ್ಪರ್ಧೆಯನ್ನ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕಸಮುಕ್ತಗೊಳಿಸುವ ಮತ್ತು ಆಗೇರ ಸಮಾಜ ಶೈಕ್ಷಣಿಕವಾಗಿ ಮುಂದುವರೆಯಬೇಕು ಎಂದು ಆಶಿಸಿದರು.
ನಿತ್ಯಾನಂದ ಗಾಂವಕರ ಮಾತನಾಡಿ, ಕ್ರೀಡೆಯು ದೈಹಿಕ ಸದೃಢತೆಯನ್ನು ಬಲಗೊಳಿಸುವುದರ ಜೊತೆಗೆ ನಶಿಸುವ ಹಗ್ಗ- ಜಗ್ಗಾಟ ಈ ಮೂಲಕ ವಿನೂತನ ಕಾರ್ಯವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಅತಿಥಿ ರಾಮಚಂದ್ರ ಹೆಗಡೆ, ಇಂದಿನ ವೇಗದ ಶೈಕ್ಷಣಿಕ ಜಗತ್ತಿಗೆ ನಾವುಗಳು ಸಾಕಷ್ಟು ಅಧ್ಯಯನದ ಜೊತೆಗೆ ಕ್ರೀಡೆಯು ಅವಶ್ಯಕವಾಗಿದೆ ಎಂದರು. ಅಧ್ಯಕ್ಷ ಮಂಗೇಶ ಟಿ.ಆಗೇರ ಇಂತಹ ಕ್ರೀಡೆಯಿಂದ ನಮ್ಮೆಲ್ಲರ ಸ್ನೇಹ ಬಾಂಧವ್ಯ ಹೆಚ್ಚುತ್ತದೆ. ಒಂದೇ ಕುಟುಂಬ ಎಂಬ ಭಾವನೆ ಹುಟ್ಟುತ್ತದೆ ಎಂದರು.
ಕಾರ್ಯಕ್ರಮದ ಪ್ರಥಮ ಫಲಕ ಪ್ರಾಯೋಜಕತ್ವ ಭಾಸ್ಕರ ಎಸ್.ಆಗೇರ ಹಾಗೂ ದ್ವಿತೀಯ ಫಲಕ ಪ್ರಾಯೋಜಕತ್ವ ಮಾರುತಿ ಟಿ.ಆಗೇರ ವಹಿಸಿದ್ದರು. ಹಗ್ಗ ಜಗ್ಗಾಟದ ಉಸ್ತುವಾರಿಯನ್ನು ಎಸ್‌ಸಿ ಮೋರ್ಚಾದ ಉಪಾಧ್ಯಕ್ಷ ಆನಂದು ಪಿ. ಲಕ್ಷ್ಮೇಶ್ವರ ಮತ್ತು ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ರೇಖಾ ಆನಂದು ಲಕ್ಷ್ಮೇಶ್ವರ ವಹಿಸಿದ್ದರು.
ವೇದಿಕೆಯಲ್ಲಿ ದಿಗಂಬರ ಲಕ್ಷ್ಮೇಶ್ವರ, ಯೋಗೇಶ ಎಂ.ಆಗೇರ, ಅಶೋಕ ಎಲ್.ಆಗೇರ ಉಪಸ್ಥಿತರಿದ್ದರು. ಅರುಣ ಮಾಸ್ತರ ಮತ್ತು ಭರತ ಆಗೇರ ಕಾರ್ಯಕ್ರಮವನ್ನು ನಿರೂಪಿಸಿ, ಸರ್ವರನ್ನು ವಂದಿಸಿದರು. ಸ್ಪರ್ಧೆಯಲ್ಲಿ ಒಟ್ಟು 18 ತಂಡಗಳು ಭಾಗವಹಿಸಿದ್ದು, ಪ್ರಥಮ ಆರ್.ಆರ್.ಆರ್ ಪುರಲಕ್ಕಿಬೇಣ ಹಾಗೂ ದ್ವಿತೀಯ ಹಿಚ್ಕಡ ತಂಡಗಳು ಬಹುಮಾನವನ್ನು ಸ್ವೀಕರಿಸಿದವು.