• Slide
    Slide
    Slide
    previous arrow
    next arrow
  • ವಿದ್ಯೆ ಕಲಿಯುವುದು ಪರೀಕ್ಷೆ ಮಾಡುವುದಕ್ಕೊಂದೇ ಅಲ್ಲ: ಬ್ರಹ್ಮಕುಮಾರಿ ವೀಣಾಜಿ

    300x250 AD

    ಶಿರಸಿ:ನಗರದ ಲಯನ್ಸ್ ಶಾಲೆಯಲ್ಲಿ ಲಯನ್ಸ್ ಕ್ಲಬ್ ಶಿರಸಿ ಪ್ರಾಯೋಜತ್ವದಲ್ಲಿ ಶಾಲೆಯ ಹೆಲ್ತ್ ಕ್ಲಬ್ ಅಡಿಯಲ್ಲಿ ಸಾಂತ್ವನ ಮಹಿಳಾ ವೇದಿಕೆಯಿಂದ ಅರಿವು-ಜಾಗ್ರತಿ ಅಭಿಯಾನವನ್ನು ನಡೆಸಲಾಯಿತು.
    ಸಂಗೀತ ಶಿಕ್ಷಕಿ ದೀಪಾ ಹೆಗಡೆಯವರ ಮಾರ್ಗದರ್ಶನದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳು ಆರಂಭದಲ್ಲಿ ಪ್ರಾರ್ಥನಾ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ಶಶಾಂಕ್ ಹೆಗಡೆ ಸ್ವಾಗತ ಭಾಷಣ ಮಾಡಿದರು. ಲಯನ್ಸ್ ಕ್ಲಬ್ ರೀಜಿನಲ್ ಚೇರ್ ಪರ್ಸನ್, ¸ಸಾಂತ್ವನ ಮಹಿಳಾ ವೇದಿಕೆಯ ಗೌರವಾಧ್ಯಕ್ಷರಾದ ಎಂ.ಜೆ.ಎಫ್. ಲಯನ್ ಜ್ಯೋತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಮಹಿಳಾ ಸಾಂತ್ವನ ವೇದಿಕೆಯ ಹುಟ್ಟು, ಇಡೀ ಉತ್ತರ ಕನ್ನಡದಲ್ಲಿ ಅದರ ಬೆಳವಣಿಗೆ ಮತ್ತು ಅದರ ಕಾರ್ಯಕಲಾಪಗಳ ಬಗ್ಗೆ ಸಂಕ್ಷಿಪ್ತವಾಗಿ ಅರಿವು ಮೂಡಿಸಿದರು.
    ಬ್ರಹ್ಮಕುಮಾರಿ ವೀಣಾಜಿಯವರು ವಿದ್ಯಾರ್ಥಿಗಳೊಡನೆ ಆಪ್ತ ಸಮಾಲೋಚನೆ ರೀತಿಯಲ್ಲಿ ಮಾತನಾಡುತ್ತಾ ನೀತಿ ಕಥೆಗಳೊಂದಿಗೆ ಬಹಳಷ್ಟು ತಿಳುವಳಿಕೆ ನೀಡಿದರು. ನಾವು ಕಲಿತ ವಿದ್ಯೆಯನ್ನು ಒಳ್ಳೆಯದಕ್ಕಾಗಿ ಉಪಯೋಗಿಸಿಕೊಳ್ಳಬೇಕು. ವಿದ್ಯೆ ಕಲಿಯುವುದು ಪರೀಕ್ಷೆ ಮಾಡುವುದಕ್ಕಲ್ಲ. ನಮಗಿರುವ ಬುದ್ಧಿವಂತಿಕೆ ಒಳ್ಳೆಯತನಕ್ಕೆ ಉಪಯೋಗವಾಗಬೇಕು. ಹಿರಿಯರನ್ನು ಗೌರವಿಸಿ. ತಂದೆ ತಾಯಿಯ ಬಗ್ಗೆ ಎಂದು ಅನುಮಾನ ಪಡಬೇಡಿ. ಅಪರಿಚಿತರನ್ನು ನಂಬಬೇಡಿ. ಹದಿಹರೆಯದ ಆಕರ್ಷಣೆಗಳಿಗೆ ಒಳಗಾಗಬೇಡಿ. ಅವಶ್ಯಕ್ಕಿಂತ ಜಾಸ್ತಿ ಮಾತನಾಡುವುದರಿಂದ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತೀರಿ. ಆದ್ದರಿಂದ ಅನವಶ್ಯಕ ಮಾತನ್ನು ಬಿಡಿ ಹೀಗೆ ಹತ್ತು ಹಲವಾರು ಉಪಯುಕ್ತ ಸಲಹೆಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು. ನಂತರ ವಿದ್ಯಾರ್ಥಿಗಳಿಗೆ ಏಕಾಗ್ರತೆ ಮೂಡಲು ದೀಪಧ್ಯಾನ ಅತ್ಯಂತ ಪ್ರಮುಖ ಎಂದು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು.
    ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಂ ಜೆ ಎಫ್ ಲಯನ್ ತ್ರಿವಿಕ್ರಂ ಪಟವರ್ಧನ್ ರವರು ಇಂದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರೆ, ಲಯನ್ಸ್ ಕ್ಲಬ್ ಕಾರ್ಯದರ್ಶಿಗಳಾದ ಲಯನ್ ರಮಾ ಪಟವರ್ಧನ್ ರವರು ಕಾರ್ಯಕ್ರಮದ ಅತಿಥಿಗಳಾಗಿದ್ದರು. ಸಾಂತ್ವನ ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಸಂಧ್ಯಾ ಕುರ್ಡೇಕರ್, ಶಿರಸಿ ಲಯನ್ಸ ಕ್ಲಬ್ ಸದಸ್ಯರಾದ ಲಯನ್ ಪ್ರತಿಭಾ ಹೆಗಡೆ, ಲಯನ್ ಶರಾವತಿ ಹೆಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
    ಹೆಲ್ತ್ ಕ್ಲಬ್ ನ ಸಂಯೋಜಕ ಶಿಕ್ಷಕಿಯರಾದ ಶ್ರೀಮತಿ ಸುಜಾತಾ ವಝೆ ಮತ್ತು ಕುಮಾರಿ ದಿವ್ಯಾ ಹೆಗಡೆಯವರ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ನಿರೂಪಣೆಯನ್ನು 9 ನೇ ತರಗತಿಯ ವಿದ್ಯಾರ್ಥಿಗಳಾದ ಕು.ಕೌಶಿಕ್, ಕು.ಪ್ರಾರ್ಥನಾ ಹೆಗಡೆ ಮತ್ತು ಕು.ಸಾಂಚಿ ಇವರು ಅಚ್ಚುಕಟ್ಟಾಗಿ ನಿರ್ವಹಿಸಿದರು. 8 ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಭುವನಾ ಹೆಗಡೆ ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆ ಮಾಡಿದಳು.
    ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ವಿದ್ಯರ‍್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇಂದಿನ ಅಭಿಯಾನದ ಪ್ರಯೋಜನ ಪಡೆದರು.

    300x250 AD
              
    Share This
    300x250 AD
    300x250 AD
    300x250 AD
    Leaderboard Ad
    Back to top