• Slide
    Slide
    Slide
    previous arrow
    next arrow
  • ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿಸುವುದು ಶಿಕ್ಷಣದ ಮೂಲ ಉದ್ದೇಶ:ಉಪೇಂದ್ರ ಪೈ

    300x250 AD

    ಶಿರಸಿ : ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು, ಯಾವುದೇ ಕೆಲಸವನ್ನು ಒಳ್ಳೆಯ ಮನಸ್ಸಿನಿಂದ ಮಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡುವ ಜವಾಬ್ದಾರಿ ಹೊಂದಿದ್ದಾರೆ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಅವರು ಹೇಳಿದರು ಅವರು ನಗರದ ಯೂನಿಯನ್ ಪ್ರೌಢ ಶಾಲೆಯ 140 ವಿದ್ಯಾರ್ಥಿಗಳಿಗೆ ತಮ್ಮ ಟ್ರಸ್ಟ್ ವತಿಯಿಂದ ಉಚಿತ ಪಠ್ಯ ಪುಸ್ತಕ, ಕ್ರೀಡಾ ಸಾಮಗ್ರಿ ಹಾಗೂ 30 ಬಡ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಿ ನಂತರ ಮಾತನಾಡಿದರು.

    ಪ್ರತಿಯೊಬ್ಬ ವಿದ್ಯಾರ್ಥಿಗೂ ಅವರದೇ ಆದ ವ್ಯಕ್ತಿತ್ವ ಇರುತ್ತದೆ. ಹಾಗೆಯೇ ವೈಯಕ್ತಿಕ, ವೃತ್ತಿಪರ ಹಾಗೂ ಸಾಮಾಜಿಕ ಜೀವನವೆಂಬ ಮೂರು ಹಂತಗಳಿದ್ದು ಇವುಗಳಲ್ಲಿ ಒಂದರಲ್ಲಿ ಎಡವಿದರೂ ತಮ್ಮ ಗುರಿ ಮತ್ತು ಕನಸನ್ನು ಪೂರೈಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಸೂಕ್ತ ರೀತಿಯಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗಾಗಿ ಆದರ್ಶ ವ್ಯಕ್ತಿಗಳನ್ನು ಹಾಗೂ ವೈಯಕ್ತಿಕ ಜೀವನಕ್ಕೆ ತಮ್ಮ ತಂದೆ ತಾಯಿಯನ್ನು ರೋಲ್ ಮಾಡೆಲ್ ಆಗಿ ಸ್ವೀಕರಿಸಬೇಕು , ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿಸುವುದು ಶಿಕ್ಷಣದ ಮೂಲ ಉದ್ದೇಶವಾಗಿದೆ. ಕೇವಲ ಹೆಚ್ಚಿನ ಅಂಕ ಗಳಿಸುವುದರಿಂದ ಅವರ ಬದುಕು ರೂಪುಗೊಳ್ಳುವುದಿಲ್ಲ. ಅಂಕದೊಂದಿಗೆ ಬೌದ್ಧಿಕ ಸಾಮರ್ಥ್ಯ, ಭಾವನಾತ್ಮಕ ಕೌಶಲ್ಯ, ದೈಹಿಕ ಸಾಮರ್ಥ್ಯ ಹಾಗೂ ಸಾಮಾಜಿಕ ಮತ್ತು ನೈತಿಕ ಅಂಶಗಳಲ್ಲಿ ಶಿಕ್ಷಿತರಾಗಬೇಕೆಂದು ಹೇಳಿದರು.

    300x250 AD

    ಶಿಕ್ಷಕಿ ಖುತೇಜಾ ಜವಳಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಶಿಕ್ಷಕಿ ಫಾಮಿದಾ ಜವಳಿ, ತೆಹಸೀನ ಗೋಡಿಯಾಳ,ಮುಸ್ಕಾನ್ ಜವಳಿ , ರಾಘವೇಂದ್ರ ಸಂಗನಾಳ, ಅತಿವುರ ರೆಹಮಾನ್ ಖಾಜಿ, ಮತೀನ್ ಶೇಖ್, ಆದರ್ಶ ನಾಯ್ಕ, ಅಶ್ಪಾಕ್ ಶೇಖ್, ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು 

    Share This
    300x250 AD
    300x250 AD
    300x250 AD
    Leaderboard Ad
    Back to top