• Slide
    Slide
    Slide
    previous arrow
    next arrow
  • ದೇಶದ ಸ್ವಾತಂತ್ರ್ಯಕ್ಕೆ 75 ವರ್ಷವಾದರೂ ಮರಿಚೀಕೆ ಆಗುತ್ತಿರುವ ಅರಣ್ಯ ಭೂಮಿ ಹಕ್ಕು

    300x250 AD

    ಶಿರಸಿ: 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಜಿಲ್ಲೆಯಲ್ಲಿ ವಿಜೃಂಭಣೆಯಿಂದ ಜರುಗಿದ್ದು, ಜಿಲ್ಲೆಯಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕಿಗಾಗಿ ಹೋರಾಟ 31 ವರ್ಷಗಳಾದರೂ, ಅರಣ್ಯ ಭೂಮಿ ಹಕ್ಕಿನ ಸ್ವಾತಂತ್ರ್ಯ ಮರಿಚಿಕೆ ಆಗುತ್ತಿರುವುದು ವಿಷಾದಕರ.

      ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಅನೇಕ ಹೋರಾಟಗಳು ಸ್ವತಂತ್ರದ ನಂತರದ ದಿನಗಳಲ್ಲಿ ಜರುಗಿದ್ದವು. ಅದರಂತೆ ಅರಣ್ಯ ಭೂಮಿ ಹಕ್ಕಿಗಾಗಿ ಅನೇಕ ಹಿರಿಯರ ನೇತ್ರತ್ವದಲ್ಲಿ ಮತ್ತು ಅನೇಕ ಸಂಘಟನೆಗಳ ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಟ ಜರುಗಿರುವದು ಇಂದು ಇತಿಹಾಸ. ಆದರೆ, ನ್ಯಾಯವಾದಿ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಜಿಲ್ಲಾದ್ಯಂತ ನಿರಂತರ 31 ವರ್ಷ ವಿವಿಧ ರೀತಿಯ ಹೋರಾಟವು ಸ್ವತಂತ್ರ ನಂತರದ ದೀರ್ಘಕಾಲಿನ ಹೋರಾಟವೆಂದು ಉಲ್ಲೇಖಿಸಬಹುದಾಗಿದೆ. ಅಲ್ಲದೇ, ಸರಕಾರದ ಮೇಲೆ ಭೂಮಿ ಹಕ್ಕಿನ ಒತ್ತಡ ಹೇಚ್ಚಿಸಿದ್ದು ಇರುತ್ತದೆ.

      ಜಿಲ್ಲೆಯ ಜನಸಂಖ್ಯೆಯ ಒಂದು ಮೂರರಷ್ಟು ಅರಣ್ಯವಾಸಿಗಳು ವಾಸ್ತವ್ಯ ಮತ್ತು ಸಾಗುವಳಿಗಾಗಿ ಸುಮಾರು 85 ಸಾವಿರ ಅರಣ್ಯವಾಸಿ ಕುಟುಂಬಗಳು ಭೂಮಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ್ದು ಇರುತ್ತದೆ. ಇನ್ನೊಂದೆಡೆ ಸರ್ವೋಚ್ಛ ನ್ಯಾಯಾಲಯದಲ್ಲಿ ರಾಜ್ಯ ಸರಕಾರ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತೀರಸ್ಕಾರವಾಗಿರುವ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸಲಾಗುವುದೆಂದು ಈಗಾಗಲೇ ಸುಫ್ರೀಂ ಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿರುವುದರಿಂದ ಒಕ್ಕಲೆಬ್ಬಿಸುವ ಆತಂಕದಲ್ಲಿ ಅರಣ್ಯವಾಸಿಗಳು ಸ್ವಾತಂತ್ರೋತ್ಸವ ಆಚರಿಸಿಕೊಂಡಿದ್ದಾರೆ.

    300x250 AD

    ಭೂಮಿ ಹಕ್ಕಿಗಾಗಿ ಹೊಸ ಅರಣ್ಯ ನೀತಿ :ಜನಪ್ರತಿನಿಧಿಗಳ ಇಚ್ಛಾಶಕ್ತಿ ಹಾಗೂ ಕಾನೂನು ಅನುಷ್ಠಾನದಲ್ಲಿ ಜನಪ್ರತಿನಿಧಿಗಳಿರುವ ಕಾನೂನು ಜ್ಞಾನದ ಕೊರತೆಯಿಂದ ಭೂಮಿ ಹಕ್ಕಿನ ಪ್ರಗತಿಯಲ್ಲಿ ಹಿನ್ನಡೆಯಾಗಿದೆ. ನಿರಂತರ 31 ವರ್ಷ ಹೋರಾಟಕ್ಕೆ ನ್ಯಾಯ ಒದಗಿಸುವ ಹಿನ್ನೆಲೆಯಲ್ಲಿ ಸರಕಾರ ಭೂಮಿ ಹಕ್ಕಿಗಾಗಿ ಹೊಸ ಅರಣ್ಯ ನೀತಿ ಜಾರಿಗೊಳಿಸಬೇಕಾಗಿದೆ. ಇಲ್ಲದಿದ್ದಲ್ಲಿ ಅರಣ್ಯ ಭೂಮಿ ಹಕ್ಕಿನಿಂದ ವಂಚಿತರಾಗಿ ಉತ್ತರ ಕನ್ನಡ ಜಿಲ್ಲೆ ನಿರಾಶ್ರಿತರ ಜಿಲ್ಲೆಯಾಗುವುದರಲ್ಲಿ ಸಂಶಯವಿಲ್ಲ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top