ಶಿರಸಿ: ಭಾರತೀಯ ಜನತಾ ಪಾರ್ಟಿ ಕರ್ನಾಟಕ ರಾಜ್ಯ ಕಂಡಂತಹ ಅಗ್ರಗಣ್ಯ ನಾಯಕ ಬಿ. ಎಸ.ಯಡಿಯೂರಪ್ಪನವರು ಕೆಲದಿನಗಳ ಹಿಂದೆ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಅವಕಾಶ ಮಾಡಿಕೊಟ್ಟಾಗ ಅಂಸಂಖ್ಯಾತ ಕಾರ್ಯಕರ್ತರು, ಯಡಿಯೂರಪ್ಪನವರ ಪಕ್ಷನಿಷ್ಠೆ ಮತ್ತು ಕಿರಿಯರಿಗೆ ಮಾರ್ಗದರ್ಶನ ಮಾಡಿಕೊಡುವ ಅವರ ಉದಾತ್ತ ಗುಣಗಳಿಗೆ ಪ್ರಶಂಸೆ ಮಾಡಿದ್ದರು.
ಅವರ ಪಕ್ಷ ಸೇವೆ, ನಿಸ್ವಾರ್ಥ ಮನೋಭಾವ ನಮ್ಮಂತಹ ಕಾರ್ಯಕರ್ತರಿಗೆ ದಾರಿದೀಪವಾಗಿದೆ.ಇವರಂತಹ ಸಂಘಟನಾ ಚತುರ ಮತ್ತು ದಿಟ್ಟ ನಿರ್ಧಾರದ ವ್ಯಕ್ತಿತ್ವಕ್ಕೆ ಮನ್ನಣೆ ನೀಡಿ ಯಡಿಯೂರಪ್ಪನವರನ್ನು ಪುನರ್ ರಚನೆಗೊಂಡ ಕೇಂದ್ರಿಯ ಸಂಸದೀಯ ಮಂಡಳಿಯ ನೂತನ ಸದಸ್ಯರನ್ನಾಗಿ ಆಯ್ಕೆ ಮಾಡಿರುವುದು ಕರ್ನಾಟಕ ಬಿಜೆಪಿ ಸಂಘಟನಾತ್ಮಕ ಹೋರಾಟಕ್ಕೆ ಇನ್ನಷ್ಟು ಬಲ ಬಂದಂತಾಗಿದೆ. ಮುಂದಿನ ಚುನಾವಣೆಯ ಮೇಲೂ ಈ ಆಯ್ಕೆ ನೇರ ಪರಿಣಾಮ ಬೀರಲಿದ್ದು , ಯಡಿಯೂರಪ್ಪನವರ ಮಾರ್ಗದರ್ಶನ ಮತ್ತು ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಮತ್ತೊಮ್ಮೆ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಯಡಿಯೂರಪ್ಪನವರ ಆಯ್ಕೆಗೆ ಬಿಜೆಪಿ ನಗರ ಮತ್ತು ಗ್ರಾಮಾಂತರ ಮಂಡಲಗಳು ಸಂತಸ ವ್ಯಕ್ತಪಡಿಸಿದೆ ಎಂದು ಬಿಜೆಪಿ ಶಿರಸಿ ನಗರ ಮಂಡಲ ಅಧ್ಯಕ್ಷ ರಾಜೇಶ ವಿ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ,
.