ಶಿರಸಿ: ಮನುಷ್ಯ ದೈಹಿಕವಾಗಿ ಸದೃಢನಾದಾಗ ಮಾತ್ರ ಎಲ್ಲಾ ಕ್ಷೇತ್ರದಲ್ಲಿ ಗೆಲುವು ಪಡೆಯಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೇಳಿದರು.
ಅವರು ಜಿಲ್ಲಾ ಮಾರಿಕಾಂಬ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪ್ರಸಕ್ತ ಸಾಲಿನ ದಾಸನಕೊಪ್ಪ.ಬಿಸಲಕೊಪ್ಪ.ದಮನಬೈಲ್ ಕ್ಲಸ್ಟರಗಳ ಪ್ರಾಥಮಿಕ ಶಾಲಾ ಮಕ್ಕಳ ವಲಯ ಮಟ್ಟದ ಕ್ರಿಡಾಕೂಟ ಉದ್ಘಾಟಿಸಿ ಮಾತನಾಡುತ್ತ ಕ್ರೀಡೆಯಿಂದ ದೈಹಿಕ ಆರೋಗ್ಯ ಹೆಚ್ಚುವುದರ ಜೊತೆಗೆ ಮಾನಸಿಕ ನೆಮ್ಮದಿಯು ಹೆಚ್ಚಾಗುತ್ತದೆ ಎಂದರು. ಕೊರೊನಾ ಕಾರಣದಿಂದ ಎರಡು ವರ್ಷ ಕ್ರೀಡಾ ಚಟುವಟಿಕೆಗಳಿಂದ ದೂರ ಉಳಿದಿದ್ದ ಮಕ್ಕಳು ಈ ಕ್ರೀಡಾಕೂಟದಲ್ಲಿ ಉಲ್ಲಾಸದಿಂದ ಪಾಲ್ಗೊಳ್ಳಬೇಕು ಎಂದರು.
ಸಭೆಯ ಅಧ್ಯಕ್ಷ ತೆಯನ್ನು ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಬಿ.ವಿ ಗಣೇಶ ವಹಿಸಿದ್ದರು ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್ ಪಟಗಾರ್. ತಾಲ್ಲೂಕ ಶಿಕ್ಷಣ ಸಮನ್ವಯ ಅಧಿಕಾರಿ ದಿನೇಶ ಶೆಟ್ ಶಿಕ್ಷಣ ಸಂಯೊಜಕರಾದ ಸತೀಶ್ ಮಡಿವಾಳ , ಎಮ್ .ಕೆ.ನಾಯ್ಕ ಶಿಕ್ಷರಾದ ರಾಜನ್ ನಾಯಕ,ಶಾರದ ಕುಂದಾಪುರ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ದೇವಿದಾಸ ನಾಯಕ ನೆರವೇರಸಿದರು ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡಾಕೂಟದ ಜವಾಬ್ದಾರಿ ವಹಿಸಿಕೊಂಡಿದ್ದರು.
ಮೂರು ಕ್ಲಸ್ಟರ್ ಗಳ ಸುಮಾರು ಎಪ್ಪತ್ತಕ್ಕು ಅಧಿಕ ಶಾಲೆಗಳಿಂದ ಬಂದ ವಿದ್ಯಾರ್ಥಿಗಳು ಕಬಡ್ಡಿ ಕೊ ಕೊ ವಾಲಿಬಾಲ್ ಸೇರಿದಂತೆ ವಯಕ್ತಿಕ ಆಟಗಳಲ್ಲಿ ಪಾಲ್ಗೊಂಡಿದ್ದರು.