Slide
Slide
Slide
previous arrow
next arrow

ಪ್ರಪಂಚದಲ್ಲಿ ಅಹಿಂಸೆಯಿಂದ ಸ್ವಾತಂತ್ರ್ಯ ಪಡೆದ ದೇಶವಿದ್ದರೆ ಅದು ಭಾರತ ಮಾತ್ರ: ಭಟ್ಟಾಕಲಂಕ ಶ್ರೀ

300x250 AD

ಶಿರಸಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ, ಗ್ರಾಮ ಪಂಚಾಯತ ಸೋಂದಾ, ಜಾಗೃತ ವೇದಿಕೆ ಸೋಂದಾ, ಶಬರ ಸಂಸ್ಥೆ ಸೋಂದಾ, ರಾಜರಾಜೇಶ್ವರಿ ಯುವಕ ಮಂಡಳಿ ಸೊಂದಾ, ಮಹಿಳಾ ಮಂಡಳಿ ಸೋಂದಾ, ಸೋಂದಾ ಕಸಬಾ ಮಾತೃ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ. ಸೋಂದಾ ಗ್ರಾಮ ಪಂಚಾಯತ ಸಭಾಭವನದಲ್ಲಿ ನಾಗರೀಕ ಸಮ್ಮಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಜಗದ್ಗುರು ಅಕಲಂಕಕೇಸರಿ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಸ್ವಾದಿ ಜೈನ ಮಠ ಇವರು ನೀಡಿದ್ದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕುಮಾರಿ ಸ್ನೇಹಾ ಶಾಸ್ತ್ರಿ, ಐ ಸಿ ಎಸ್ ಇ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ, ದೇಶಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಲ್ಲದೇ ಇಲ್ಲಿಯವರೆಗೆ ವಿವಿಧ ವಿಭಾಗಗಳಲ್ಲಿ ಹನ್ನೆರಡು ಚಿನ್ನದ ಪದಕ, ಆರು ಬೆಳ್ಳಿಯ ಪದಕ ವಿಜೇತರು. ಕುಮಾರ ಚಿನ್ಮಯ ಜೋಶಿ.ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಯಲ್ಲೆ ರಾಜ್ಯಕ್ಕೆ ಏಳನೇ ಸ್ಥಾನ ಪಡೆದವರು. ಪತ್ರಿಕಾ ರಂಗದಲ್ಲಿ ಸಾಧನೆಗೈದ ಸುಭಾಸ ದೂಪದಹೊಂಡ. ಇತಿಹಾಸ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ|ಲಕ್ಷ್ಮೀಶ್ ಹೆಗಡೆ ಸೋಂದಾ. ಗ್ರಾಮೀಣ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಮಾಡಿದ ಬಂಗಾರಿ ಕೋಂ ನೀಲಾ ಚೆನ್ನಯ್ಯ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಾಗರಾಜ್ ನಾಯ್ಕ. ಸಹಕಾರ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಮಂಜುನಾಥ ಹೆಗಡೆ ಬಾಳೆಜಡ್ಡಿಯವರಿಗೆ ಸಮ್ಮಾನ ನೀಡಿ ಪುರಸ್ಕರಿಸಲಾಯಿತು.
ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳವರು ಇಂದು ನಮ್ಮ ಮಾತೃ ಭೂಮಿ ಪಿರಂಗಿಯವರಿಂದ ಸ್ವಾತಂತ್ರ್ಯ ಪಡೆದ ದಿನ. ನಾವು ಸ್ವಾತಂತ್ರ್ಯದ ಮೊದಲಿನ ಭಾರತ, ನಂತರದ ಭಾರತದ ಸ್ಥಿತಿಯನ್ನು ಅವಲೋಕಿಸಬೇಕು. ಅಂದು ನಮ್ಮವರು ಒಗ್ಗಟ್ಟಾಗಿದ್ದರೆ 1857ರಲ್ಲೆ ಸ್ವಾತಂತ್ರ್ಯ ಸಿಗುತ್ತಿತ್ತು. ಏನೇ ಆದರೂ ಭಾರತದಲ್ಲಿ ಈಗೀಗ ಗಣನೀಯ ಅಭಿವೃದ್ಧಿ ಆಗಿದೆ. ಅದಕ್ಕೆ ಅನೇಕ ಮಹನೀಯರ ಕೊಡುಗೆ ಇದೆ. ಪ್ರಪಂಚದಲ್ಲಿ ಅಹಿಂಸೆಯಿಂದ ಸ್ವಾತಂತ್ರ್ಯ ಪಡೆದ ದೇಶವಿದ್ದರೆ, ಅದು ಭಾರತ ಮಾತ್ರ. ಸೋಂದಾದ ಹಲವು ಸಂಸ್ಥೆಗಳು ಸೇರಿ ಮಾಡಿದ ನಾಗರೀಕ ಸಮ್ಮಾನ ಮಾದರಿ ಸಮ್ಮಾನ ಆಗಿದೆ. ಇದು ನಿರಂತರ ಆಗಬೇಕು ಎನ್ನುವ ಆಶಯ ನಮ್ಮದು ಎಂದರು.
ನಾಗರೀಕ ಸಮ್ಮಾನ ಸ್ವೀಕರಿಸಿದ ಹಿರಿಯ ಸಹಕಾರಿ, ತೊಂಬತ್ತು ವರ್ಷದ ಮಂಜುನಾಥ ಹೆಗಡೆಯವರು ತಮ್ಮ ಬಾಲ್ಯದ ಅನುಭವವನ್ನು ಹಂಚಿಕೊಳ್ಳುತ್ತ. ನಮಗೆ ಸ್ವಾತಂತ್ರ್ಯ ಸಿಕ್ಕ ಮೊದಲ ಧ್ವಜಾರೋಹಣವನ್ನು 1947ರಲ್ಲಿ ಜೈನ ಮಠದಲ್ಲಿ ಹತ್ತಿಪ್ಪತ್ತು ಮಂದಿ ಸೇರಿ ಆಚರಿಸಲಾಯಿತು. ಆದಿನ ನಮಗೆ ನಮ್ಮ ರಾಷ್ಟ್ರಗೀತೆ ಯಾವುದು ಎಂದು ಕೂಡ ಗೊತ್ತಿರಲಿಲ್ಲ. ಅಂದಿನ ಜೈನ ಮಠದ ಸ್ವಾಮಿಗಳ ಜೊತೆಯಲ್ಲಿ ಸೇರಿ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸಿದ್ದೆವು. ಮಠದ ಸ್ವಾಮಿಗಳು ಒಂದು ಕ್ವಿಂಟಲ್ ಅಕ್ಕಿಯನ್ನು ಬಡವರಿಗೆ ಹಂಚಿದ್ದರು ಎಂದು ಅಂದಿನ ಘಟನೆಗಳನ್ನು ಭಾವುಕರಾಗಿ ನೆನಪಿಸಿಕೊಂಡರು. ಉಳಿದ ಸಮ್ಮಾನಿತರು ತಮ್ಮ ಸಿಹಿಕಹಿ ಅನುಭವಗಳನ್ನು ಹಂಚಿಕೊಂಡರು.
ಸಭಾಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಮಮತಾ ಚಂ ಜೈನ್. ಮುಖ್ಯ ಆಮಂತ್ರಿತರಾಗಿ ಪಂಚಾಯತ ಉಪಾಧ್ಯಕ್ಷರಾದ ಗಜಾನನ ನಾಯ್ಕ, ಜಾಗೃತ ವೇದಿಕೆಯ ಕಾರ್ಯಾಧ್ಯಕ್ಷರಾದ ರತ್ನಾಕರ ಹೆಗಡೆ ಬಾಡಲಕೊಪ್ಪ, ಶಬರ ಸಂಸ್ಥೆ ಕಾರ್ಯದರ್ಶಿ ನಾಗರಾಜ ಜೋಶಿ ಸೋಂದಾ, ಯವಕ ಮಂಡಳ ಅಧ್ಯಕ್ಷ ರಾಘವ ತಿ ಹೆಗಡೆ ವಾಜಗದ್ದೆ, ಎಸ್ ಡಿ ಎಮ್ ಸಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಖಾಸಾಪಾಲ್, ಯುವತಿ ಮಂಡಲ ಅಧ್ಯಕ್ಷೆ ಶ್ರೀಮತಿ ಗಂಗಾ ಹೆಗಡೆ ವಾಜಗದ್ದೆ, ಸೋಂದಾ ಕಸಬಾ ಮಾತೃ ಮಂಡಳದ ಅಧ್ಯಕ್ಷೆ ಶ್ರೀಮತಿ ಸ್ವಾತಿ ಪರಾಂಜಪೆ ಆಗಮಿಸಿದ್ದರು. ಪಂಚಾಯತ ಸದಸ್ಯ ರಾಮಚಂದ್ರ ಹೆಗಡೆ ಹೊಸಗದ್ದೆ ಸರ್ವರನ್ನೂ ಸ್ವಾಗತಿಸಿದರು. ಸೋಂದಾ ನಾಗರಾಜ ಜೋಶಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಚಂದ್ರರಾಜ್ ಜೈನ್ ವಂದನಾರ್ಪಣೆ ಮಾಡಿದರು.

300x250 AD
Share This
300x250 AD
300x250 AD
300x250 AD
Back to top