ಶಿರಸಿ: ಕೇಂದ್ರ ಸಂಸ್ಕೃತಿ ಸಚಿವಾಲಯದ ಟಾಗೋರ್ ನ್ಯಾಶನಲ್ ಫೆಲೋಶಿಪ್ ಸಮಿತಿಯ ಸದಸ್ಯ ಮತ್ತು ವಿಷಯ ತಜ್ಞರಾಗಿ ಇತಿಹಾಸಕಾರ ಡಾ.ಲಕ್ಷ್ಮೀಶ್ ಸೋಂದಾ ಅವರು ಆಯ್ಕೆಯಾಗಿದ್ದಾರೆ. ದೇಶದಲ್ಲಿನ ವಿವಿಧ ಸಂಸ್ಕೃತಿಗಳ ಮತ್ತು ಇತಿಹಾಸದ ಕುರಿತಾಗಿ ಸಂಶೋಧನೆ ನಡೆಸುವವರಿಗೆ ಟಾಗೋರ್ ನ್ಯಾಶನಲ್ ಫೆಲೋಶಿಪ್ ಅಡಿಯಲ್ಲಿ ಧನಸಹಾಯ ಮಾಡುವ ಸಂಸ್ಥೆ ಇದಾಗಿದ್ದು ಈ ಪ್ರತಿಷ್ಠಿತ ಸಮಿತಿಗೆ ಕರ್ನಾಟಕದಿಂದ ಡಾ.ಸೋಂದಾ ಅವರು ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಉಪ ನಿರ್ದೇಶಕರಾದ ಡಾ.ರವಿ ಕೆ ಮಿಶ್ರಾ ಅವರು ತಿಳಿಸಿದ್ದಾರೆ.
ಕೇಂದ್ರ ಫೆಲೋಶಿಪ್ ಕಮಿಟಿಯ ಸದಸ್ಯರಾಗಿ ಡಾ.ಲಕ್ಷ್ಮೀಶ್ ಸೋಂದಾ
