• Slide
  Slide
  Slide
  previous arrow
  next arrow
 • ವಿನಾಯಕ ಸೌಹಾರ್ದದಿಂದ ಪ್ರತಿಭಾ ಪುರಸ್ಕಾರ

  300x250 AD

  ಸಿದ್ದಾಪುರ: ಪಟ್ಟಣದ ಬಾಲಭವನದಲ್ಲಿ ಸ್ಥಳೀಯ ಶ್ರೀ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ- ಆಪರೇಟಿವ್ ಲಿ. ಆಶ್ರಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ನಡೆಯಿತು. 2021-22ನೇ ಸಾಲಿನಲ್ಲಿ 90%ಗಿಂತ ಹೆಚ್ಚಿನ ಅಂಕ ಗಳಿಸಿ ಉತ್ತೀರ್ಣರಾದ ಸಹಕಾರಿಯ ಸಿಬ್ಬಂದಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು.

  ಕಿಶೋರ್ ಹೆಗಡೆ, ಶ್ರೇಯಸ್ ನಾಯ್ಕ್, ಮನೋಜ್ ನಾಯ್ಕ್, ಮೋನಿಕಾ ನಾಯ್ಕ್ ಮತ್ತು ಮಯೂರ್ ನಾಯ್ಕ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ನಂತರ ಸಹಕಾರಿಯಿಂದ ನಿರ್ಗಮಿತ ನಿರ್ದೇಶಕ, ನಿಕಟಪೂರ್ವ ಉಪಾಧ್ಯಕ್ಷ ಸದಾನಂದ ಕಾಮತ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

  300x250 AD

  ವಿಭಾಗೀಯ ವ್ಯವಸ್ಥಾಪಕ ಪ್ರಶಾಂತ ನಾಯ್ಕ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಶ್ರೀಧರ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಭಾಗೀರಥಿ ಮೇಸ್ತ ನಿರ್ವಹಿಸಿದರು. ಕೇಶವ ಮೇಸ್ತಾ ವಂದಿಸಿದರು. ಸಹಕಾರಿಯ ಅಧ್ಯಕ್ಷ ಆನಂದ ನಾಯ್ಕ್, ವ್ಯವಸ್ಥಾಪಕ ನಿರ್ದೇಶಕ ವಿನಾಯಕ ಎ.ನಾಯ್ಕ, ನಿರ್ದೇಶಕರುಗಳಾದ ಪರಮೇಶ್ವರ ನಾಯ್ಕ, ರಾಘವೇಂದ್ರ ಪೈ, ಮಹಾಬಲೇಶ್ವರ ನಾಯ್ಕ, ಸವಿತಾ ನಾಯ್ಕ, ಸರೋಜಾ ನಾಯ್ಕ ಮೊದಲಾದವರು ಇದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top