• first
    second
    third
    previous arrow
    next arrow
  • ವಿಶೇಷಚೇತನರಿಗೆ ತ್ರಿಚಕ್ರ ವಾಹನ ವಿತರಿಸಿದ ಶಾಸಕ ಸುನೀಲ

    300x250 AD

    ಹೊನ್ನಾವರ: ತಾಲೂಕಿನ 10 ವಿಶೇಷಚೇತನರಿಗೆ ತಾ.ಪಂ. ವಿಶೇಷ ನಿಧಿಯಿಂದ ಮಂಜೂರಾದ ತ್ರಿಚಕ್ರ ವಾಹನಗಳನ್ನು ಶಾಸಕ ಸುನೀಲ ನಾಯ್ಕ ಮಂಗಳವಾರ ತಾ.ಪಂ. ಸಭಾಭವನದ ಮುಂಭಾಗದಲ್ಲಿ ವಿತರಿಸಿದರು.

    ಬಳಿಕ ಮಾತನಾಡಿದ ಅವರು, ಇದುವರೆಗೆ 150ಕ್ಕೂ ಅಧಿಕ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ನೀಡಲಾಗಿದೆ. ಕ್ಷೇತ್ರದಲ್ಲಿ ಯಾರಾದರೂ ವಿಶೇಷಚೇತನರು ಈ ಸೌಲಭ್ಯದಿಂದ ವಂಚಿತರಾದರೆ ಸೂಕ್ತ ದಾಖಲೆಯನ್ನು ಕಛೇರಿಗೆ ನೀಡಿದರೆ ಅವರಿಗೂ ಈ ಸೌಲಭ್ಯ ನೀಡಲಾಗುವುದು. ಶಾಸಕರ ನಿಧಿಯಿಂದ 25ಕ್ಕೂ ಹೆಚ್ಚು ವಾಹನ ನೀಡಲು ಅವಕಾಶವಿದೆ. ವಿಶೇಷಚೇತನರು ಇದ್ದಲ್ಲಿ ಕಛೇರಿಗೆ ಅಥವಾ ನನ್ನ ಗಮನಕ್ಕೆ ತಂದಲ್ಲಿ ಮಂಜೂರಿಸಲಾಗುವುದು ಎಂದರು.

    300x250 AD

    ಈ ಸಂದರ್ಭದಲ್ಲಿ ಇಓ ಸುರೇಶ ನಾಯ್ಕ, ಪಂ.ಪ. ಅಧ್ಯಕ್ಷ ಶಿವರಾಜ ಮೇಸ್ತ, ಬಿಜೆಪಿ ತಾಲೂಕು ಅಧ್ಯಕ್ಷ ರಾಜೇಶ ಭಂಡಾರಿ, ಸುಬ್ರಾಯ ನಾಯ್ಕ, ಕೇಶವ ನಾಯ್ಕ ಬಳ್ಕೂರು, ಶ್ರೀಧರ ನಾಯ್ಕ ಮಂಕಿ, ಬಿಜೆಪಿಯ ಕಾರ್ಯಕರ್ತರು, ಸಿಬ್ಬಂದಿ ಹಾಜರಿದ್ದರು.

    Share This
    300x250 AD
    300x250 AD
    300x250 AD
    Back to top